ನಾನು ಕ್ರೈಸ್ತ ಧರ್ಮದವಳು, ಧ್ವಜಾರೋಹಣ ಮಾಡುವುದಿಲ್ಲ: ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ

ಚೆನ್ನೈ: ಸ್ವಾತಂತ್ರ್ಯೋತ್ಸವದಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಧ್ವಜಾರೋಹಣ ಮಾಡಲು ಹಾಗೂ ಧ್ವಜಕ್ಕೆ ನಮಿಸಲು ನಿರಾಕರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದು ಸ್ವಾತಂತ್ರ್ಯ ದಿನಾಚರಣೆಯಂದು ಈ ಘಟನೆ ನಡೆದಿದ್ದು, ಈಗ ವಿವಾದಕ್ಕೀಡಾಗಿದೆ.
ಮುಖ್ಯಾಧ್ಯಾಪಕಿ ತಮಿಳ್‌ ಸೆಲ್ವಿ ಈ ವರ್ಷ ನಿವೃತ್ತಿ ಹೊಂದಲಿದ್ದು, ಅವರನ್ನು ಅಭಿನಂದಿಸುವ ಸಲುವಾಗಿ ಆಗಸ್ಟ್ 15 ರಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ಹೇಳಲಾಗಿದೆ. ಜೊತೆಗೆ ಧ್ವಜಾರೋಹಣವನ್ನು ನೆರವೇರಿಸಲು ಅವರಿಗೆ ತಿಳಿಸಲಾಗಿತ್ತು. ಆದರೆ ಮುಖ್ಯಶಿಕ್ಷಕಿ ತಮಿಳ್‌ ಸೆಲ್ವಿ ಅವರು, ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ್ದಾರೆ. ಅಲ್ಲದೆ, ತ್ರಿವರ್ಣ ಧ್ವಜಕ್ಕೆ ವಂದಿಸಲು ನಿರಾಕರಿಸಿದರು ಈ ಹಿನ್ನೆಲೆಯಲ್ಲಿ ಸಹಾಯಕ ಮುಖ್ಯ ಶಿಕ್ಷಕಿಯೇ ಧ್ವಜಾರೋಹಣ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ಬಗ್ಗೆ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ಮುಖ್ಯ ಶಿಕ್ಷಕಿ ಮಾತನಾಡಿದ್ದು, ತಾವು ಯಾಕೋಬಾ ಕ್ರಿಶ್ಚಿಯನ್ ಆಗಿದ್ದಕ್ಕೆ ಧ್ವಜಾರೋಹಣ ಮಾಡಲಾಗುವುದಿಲ್ಲ. ಅಷ್ಟೇ ಅಲ್ಲದೇ ತಾನು ಧ್ವಜಕ್ಕೆ ಯಾವುದೇ ಅಗೌರವವನ್ನು ತೋರಿಲ್ಲ. ಆದರೆ ನಾನು ದೇವರಿಗೆ ಮಾತ್ರ ನಮಸ್ಕರಿಸುತ್ತೇನೆ. ಬೇರೆ ಯಾರಿಗೂ ನಮಸ್ಕರಿಸುವುದಿಲ್ಲ. ಆದ್ದರಿಂದ ನಾವು ಧ್ವಜಾರೋಹಣ ಮಾಡಲು ಸಹಾಯಕ ಶಿಕ್ಷಕರ ಸಹಾಯ ಪಡೆದಿದ್ದೇನೆ ಎಂದು ಹೇಳಿದ್ದಾರೆ.
ನಂತರ ಧರ್ಮಪುರಿಯ ಮುಖ್ಯ ಶಿಕ್ಷಣಾಧಿಕಾರಿ (ಸಿಇಒ) ಅವರಿಗೆ ಔಪಚಾರಿಕ ದೂರನ್ನು ನೀಡಲಾಯಿತು. ಮತ್ತು ಸರ್ಕಾರಿ ಶಾಲೆಯ ಉನ್ನತ ಅಧಿಕಾರಿಯೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣವನ್ನು ನಿರಾಕರಿಸಿದ ಘಟನೆಯನ್ನು ಬೆಳಕಿಗೆ ತಂದರು. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಶಿಕ್ಷಕಿಯವರು ರಜೆ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮಿಳ್ಸೆಲ್ವಿ ಅವರು ಸರ್ಕಾರಿ ಸಂಸ್ಥೆಯಲ್ಲಿ ಒಂದು ಧರ್ಮದ ಬಗ್ಗೆ ಒಲವು ಪ್ರದರ್ಶಿಸಿ ಮತ್ತು ಆಚರಣೆಗೆ ತಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಜಿಲ್ಲಾ ಸಿಇಒಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಎಎಪಿ ಸಚಿವರ ಉಪಸ್ಥಿತಿಯಲ್ಲಿ 'ಧರ್ಮ ಪರಿವರ್ತನೆ' ಕಾರ್ಯಕ್ರಮದ ವಿವಾದ; ಸಚಿವರ ವಜಾಕ್ಕೆ ಸಿಎಂ ಕೇಜ್ರಿವಾಲ್‌ಗೆ ಬಿಜೆಪಿ ಒತ್ತಾಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement