ಭಯದ ವಾತಾವರಣ ಸೃಷ್ಟಿಸುವುದೇ ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದಿನ ಉದ್ದೇಶವಾಗಿತ್ತು : ಎನ್‌ಐಎ ಎಫ್‌ಐಆರ್‌ನಲ್ಲಿ ಉಲ್ಲೇಖ

ನವದೆಹಲಿ: ಭಯದ ವಾತಾವರಣ ಸೃಷ್ಟಿಸುವುದು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಅವರ ಹತ್ಯೆಯ ಉದ್ದೇಶವಾಗಿತ್ತು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ.
ಸುತ್ತಲಿನ ಪರಿಸರದಲ್ಲಿ ಭಯದ ವಾತಾವರಣ ಮೂಡಿಸುವ ಉದ್ದೇಶದಿಂದ ಈ ಕೊಲೆ ಮಾಡಿರುವ ಶಂಕೆ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಆರೋಪಿಗಳು ಪ್ರದೇಶದ ಜನರಲ್ಲಿ ಭಯವನ್ನು ಉಂಟುಮಾಡಲು ಪ್ರವೀಣ ನೆಟ್ಟಾರು ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರುಎಂದು ಹೇಳಿದೆ ಎಂದು ಹಿಂದುಸ್ತಾನ್‌ಟೈಮ್ಸ್‌.ಕಾಮ್‌ ವರದಿ ಮಾಡಿದೆ.

ಜುಲೈ 26ರಂದು ರಾತ್ರಿ ನಡೆದ ಪ್ರವೀಣ ಕೊಲೆ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಲಾಗಿದ್ದು, ಈಗಾಗಲೇ ಎನ್‌ಐಎ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಜುಲೈ 26ರಂದು ರಾತ್ರಿ 8:30 ರ ಸುಮಾರಿಗೆ ಪ್ರವೀಣ್ ನೆಟ್ಟಾರು ಕೋಳಿ ಅಂಗಡಿಯನ್ನು ಮುಚ್ಚಿದ್ದರು. ಬಳಿಕ ಬೈಕ್‌ನಲ್ಲಿ ಮನೆಗೆ ತೆರಳಲು ಮುಂದಾಗಿದ್ದರು. ಆದರೆ, ರೇನ್ ಕೋಟ್ ತೆಗೆದುಕೊಳ್ಳುವುದನ್ನು ಮರೆತಿದ್ದೆ. ಆದ್ದರಿಂದ ನಾನು ಅದನ್ನು ತರಲು ಅಂಗಡಿಯೊಳಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಅಂಗಡಿಯ ಹೊರಗೆ ಕೂಗಾಡುವುದು ಕೇಳಿಸಿತು ಕೂಡಲೇ ಅಂಗಡಿಯಿಂದ ಹೊರಗೆ ಬಂದಾಗ ಪ್ರವೀಣ ನೆಟ್ಟಾರು ರಸ್ತೆಯಲ್ಲಿ ಬಿದ್ದಿರುವುದು ಕಂಡು ಬಂತು ಎಂದು ದೂರುದಾರ (ಕೆಲಸಗಾರ) ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿಯಾಗುತ್ತಿರುವುದನ್ನು ನೋಡಿದೆ. ಕೂಡಲೇ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಪುತ್ತೂರು ಪೇಟೆಯ ಪ್ರಗತಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಆಸ್ಪತ್ರೆಯ ತಲುಪುವಷ್ಟರಲ್ಲಿ ಪ್ರವೀಣ್ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದರು ಎಂದು ದೂರುದಾರ ಹೇಳಿರುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಕರ್ನಾಟಕ ಪೊಲೀಸರು ಹಲವಾರು ಆರೋಪಿಗಳ ಜೊತೆಗೆ ಮೂವರು ಪ್ರಮುಖ ಆರೋಪಿಗಳನ್ನೂ ಬಂಧಿಸಿದ್ದಾರೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement