ಜಗದೀಶ್ ಟೈಟ್ಲರ್ ಚಿತ್ರವಿದ್ದ ಟೀ ಶರ್ಟ್‌ ಧರಿಸಿ ಗೋಲ್ಡನ್ ಟೆಂಪಲ್‌ಗೆ ಭೇಟಿ: ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ದೂರು ದಾಖಲು

ಅಮೃತಸರ: ಪಂಜಾಬಿನ  ಅಮೃತಸರದ ಗೋಲ್ಡನ್ ಟೆಂಪಲ್‌ಗೆ  ಭೇಟಿ ನೀಡುವ ವೇಳೆ ಜಗದೀಶ್ ಟೈಟ್ಲರ್ ಚಿತ್ರವಿರುವ ಟಿ-ಶರ್ಟ್ ಧರಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ಕರಮ್‌ಜಿತ್ ಸಿಂಗ್ ಗಿಲ್ ವಿರುದ್ಧ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಎಸ್‌ಜಿಪಿಸಿ ಪೊಲೀಸ್ ದೂರು ದಾಖಲಿಸಿದೆ.
ಎಸ್‌ಜಿಪಿಸಿ ಅಧ್ಯಕ್ಷ, ವಕೀಲ ಹರ್ಜಿಂದರ್ ಸಿಂಗ್ ಧಾಮಿ ಅವರು ಕಾಂಗ್ರೆಸ್ ಕಾರ್ಯಕರ್ತ ಕರಮ್‌ಜಿತ್ ಸಿಂಗ್ ಗಿಲ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಅವರ ಹೆಸರು ಪ್ರಮುಖವಾಗಿ ಕಾಣಿಸಿಕೊಂಡಿತು. ಆದಾಗ್ಯೂ, ಕರಮ್‌ಜಿತ್ ಸಿಂಗ್ ಗಿಲ್‌ಗೆ ಹಾಗೂ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಜಗದೀಶ್ ಟೈಟ್ಲರ್ ಚಿತ್ರ ಇರುವ ಟಿ-ಶರ್ಟ್ ಧರಿಸಿ ಕರಮ್‌ಜಿತ್ ಸಿಂಗ್ ಸಚ್ಖಂಡ್ ಶ್ರೀ ಹರ್ಮಂದರ್ ಸಾಹಿಬ್ ಅನ್ನು ಭೇಟಿ ಮಾಡಿದರು ಮತ್ತು ಗುರುದ್ವಾರದ ಆವರಣದಲ್ಲಿ ತಮ್ಮ ಛಾಯಾಚಿತ್ರವನ್ನು ಕ್ಲಿಕ್ ಮಾಡಿಸಿಕೊಂಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
1984ರ ದೆಹಲಿ ಸಿಖ್ ಹತ್ಯಾಕಾಂಡದಲ್ಲಿ ಜಗದೀಶ್ ಟೈಟ್ಲರ್ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಹೇಳಿದ್ದಾರೆ.
ಎಸ್‌ಜಿಪಿಸಿ ಅಧ್ಯಕ್ಷರಿಂದ ದೂರನ್ನು ಸ್ವೀಕರಿಸಿದ ನಂತರ, ಕರಮ್‌ಜಿತ್ ಸಿಂಗ್ ಗಿಲ್ ವಿರುದ್ಧ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅಮೃತಸರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. SGPC ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಚಂಡೀಗಢದಲ್ಲಿ ಗುರುದ್ವಾರವನ್ನು ನಿರ್ವಹಿಸುತ್ತದೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement