ಅಲಿಗಢ ಕಾಲೇಜಿನ ತಿರಂಗಾ ಸಮಾವೇಶದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ: ವಿದ್ಯಾರ್ಥಿಗಳು, ಪ್ರಾಂಶುಪಾಲರ ವಿರುದ್ಧ ಪ್ರಕರಣ

ನವದೆಹಲಿ: ಉತ್ತರ ಪ್ರದೇಶದ ಅಲಿಘರ್‌ನಲ್ಲಿ ತಿರಂಗಾ ಯಾತ್ರೆಯ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ ವೀಡಿಯೋಗಳು ಹೊರಬಿದ್ದ ನಂತರ ಹಲವಾರು ವಿದ್ಯಾರ್ಥಿಗಳ ಮೇಲೆ ಪೊಲೀಸರು ಆರೋಪ ಹೊರಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 13 ರಂದು, ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಕಾಲೇಜೊಂದು ತಿರಂಗಾ ರ್ಯಾಲಿ ಆಯೋಜಿಸಿತ್ತು, ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದರು. ಕೆಲವರು ಮೆರವಣಿಗೆಯ ವೀಡಿಯೊ ಸಮೇತ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೂ ಯಾವುದೇ ಕ್ರಮ ಕೈಗೊಳ್ಳದೆ ಕಾಲೇಜು ಅದನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ಆರೋಪಿಸಲಾಗಿದೆ.
ನಂತರ ದೂರುದಾರರು ವೀಡಿಯೊದೊಂದಿಗೆ ಪೊಲೀಸರನ್ನು ಸಂಪರ್ಕಿಸಿದರು, ಅದರ ಆಧಾರದ ಮೇಲೆ ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರನ್ನು “ಸಾರ್ವಜನಿಕ ಸೇವಕರು ಆದೇಶಕ್ಕೆ ಅವಿಧೇಯತೆ” ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ನಮ್ಮ ಕಾಲೇಜಿನಿಂದ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಶಿಕ್ಷಕರು ನಮಗಿಂತ ಮುಂದೆ ನಡೆದರು, ನಮ್ಮನ್ನು ಹಿಂಬಾಲಿಸಿದರು. ಅನೇಕ ವಿದ್ಯಾರ್ಥಿಗಳು ಇದ್ದರು. ಇದ್ದಕ್ಕಿದ್ದಂತೆ ನಮಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳು ಕೇಳಿಬಂದವು. ಕೂಡಲೇ ನಮ್ಮ ಶಿಕ್ಷಕರಿಗೆ ವಿಷಯ ತಿಳಿಸಿದ್ದೇವೆ. ನಾನು ಕೇವಲ ಘೋಷಣೆಗಳನ್ನು ಮಾತ್ರ ಕೇಳಿದೆ. ಅವರನ್ನು ಕಾಲೇಜಿನ ವಿದ್ಯಾರ್ಥಿಗಳು ಅಥವಾ ಹೊರಗಿನವರು ಕೂಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ ”ಎಂದು ಕಾಲೇಜಿನ ವಿದ್ಯಾರ್ಥಿ ರಾಜನ್ ಕುಮಾರ್ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದು ಆಗಸ್ಟ್ 13 ರಂದು ದೊಡ್ಡ ಸಭೆ ಆಯೋಜಿಸಲಾಗಿತ್ತು. ನಾವು ಕೆಲವು ವಿದ್ಯಾರ್ಥಿಗಳಿಂದ ಹಿಂದೂಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕುಗಿದ್ದೇವೆ. ಮತ್ತು ಆಗ “ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗಿ ಅದನ್ನು ಪ್ರತಿಭಟಿಸಲಾಯಿತು ಎಂದು ನಮಗೆ ಮಾಹಿತಿ ಸಿಕ್ಕಿತು. ನಾವು ಅದರ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆದರೆ ಯಾವುದೇ ವೀಡಿಯೋ ಪತ್ತೆಯಾಗಿಲ್ಲ ಎಂದು ಪ್ರಾಂಶುಪಾಲರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.
ರ್ಯಾಲಿಯಲ್ಲಿ ದೇಶಭಕ್ತಿಯ ಘೋಷಣೆಗಳ ಜೊತೆಗೆ ಕೆಲವು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಯಿತು ಎಂದು ಅಲಿಘರ್‌ನ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ), ಪಾಲಾಶ್ ಬನ್ಸಾಲ್ ಹೇಳಿದ್ದಾರೆ. “ವೀಡಿಯೊ ನೋಡಿದ ನಂತರ ನಾವು ಪ್ರಕರಣದ ಬಗ್ಗೆ ಗೊತ್ತಾಗಿದೆ. ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಬನ್ಸಾಲ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement