ಸಾರ್ವಜನಿಕ ಗಣೇಶೋತ್ಸವ ಸಾವರ್ಕರ್ ಭಾವಚಿತ್ರ ಇಟ್ಟು ಆಚರಣೆ: ಮುತಾಲಿಕ

ಬೆಂಗಳೂರು: ಸ್ವಾತಂತ್ರ್ಯ ವೀರ ಸಾವರ್ಕರ್ ಮಹಾ ಕ್ರಾಂತಿಕಾರಿ.. ಹೀಗಾಗಿ ಬರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಸಾವರ್ಕರ್ ಭಾವಚಿತ್ರ ಇಟ್ಟು ಉತ್ಸವ’ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.
ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶನ ಮೂರ್ತಿ ಕೂಡ್ರಿಸುವ ಸ್ಥಳಗಳಲ್ಲಿ ಸಾವರ್ಕರ್ ಭಾವಚಿತ್ರ ಇಡುವಂತೆ ಸಂಘಟಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಅದೇ ರೀತಿ ಸಾವರ್ಕರ್ ಅವರ ಹೋರಾಟದ ಬಗ್ಗೆ ಜನರಿಗೆ ತಿಳಿಸಲು ಅವರ ಹೋರಾಟದ ಚಿತ್ರದ ಪ್ರದರ್ಶನ, ಸಾವರ್ಕರ್ ಕುರಿತು ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಸಾವರ್ಕರ್ ಕುರಿತ ನಾಟಕ, ನೃತ್ಯ ರೂಪಕ, ಸಾವರ್ಕರ್ ರಚಿಸಿದ ಗೀತೆಗಳನ್ನು ಹಾಡುವುದು, ಸಾವರ್ಕರ್ ಅವರ ಬಗ್ಗೆ ಕಥಾ ಸ್ಪರ್ಧೆ, ಹಾಡುಗಳ ಸ್ಪರ್ಧೆ, ಕ್ವಿಜ್ ಇತ್ಯಾದಿಗಳನ್ನು ಏರ್ಪಡಿಸುವುದು ಹಾಗೂ ಸಾವರ್ಕರ್ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡುವುದು ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಾವರ್ಕರ್ ಅವರಿಗೆ ಅಪಮಾನವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕರಿ ನೀರಿನ ಶಿಕ್ಷೆ ಅನುಭವಿಸಿದ ಏಕೈಕ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತ ಸಾವರ್ಕರ್ ಪುಸ್ತಕವನ್ನು ಪ್ರಕಟಣೆಯ ಮೊದಲೇ ಬ್ರಿಟೀಷರು ನಿರ್ಬಂಧಿಸಿದ್ದರು ಎಂದು ಮುತಾಲಿಕ್​ ಹೇಳಿದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement