8 ತಿಂಗಳ ಮಗು ಇದ್ದಕ್ಕಿದ್ದಂತೆ ಹಾಲು ಕುಡಿಯುವುದು ನಿಲ್ಲಿಸಿತು; ಮಗುವಿನ ವೈದ್ಯಕೀಯ ವರದಿ ನೋಡಿ ಪೋಷಕರು ಬೆಚ್ಚಿಬಿದ್ದರು…!

ಬಾರಾಮತಿ: 8 ತಿಂಗಳ ಮಗು ಇದ್ದಕ್ಕಿದ್ದಂತೆ ತಾಯಿಯ ಹಾಲು ಕುಡಿಯುವುದನ್ನು ನಿಲ್ಲಿಸಿದರೆ ಅದು ಸಾಮಾನ್ಯ ಸಂಗತಿಯಲ್ಲ. ಮಹಾರಾಷ್ಟ್ರದ ಪುಣೆ ಪಕ್ಕದ ಬಾರಾಮತಿಯಲ್ಲಿ 8 ತಿಂಗಳ ಮಗುವಿಗೆ ಇದೇ ಸಂಭವಿಸಿದೆ. ಇದ್ದಕ್ಕಿದ್ದಂತೆ ಈ ಮಗು ಎದೆ ಹಾಲು ಕುಡಿಯುವುದನ್ನು ನಿಲ್ಲಿಸಿದೆ. ಅಲ್ಲದೆ ಇತರ ಆಹಾರ ಸೇವನೆಯನ್ನೂ ಮಾಡದೆ ಹಸಿವಿನಿಂದ ಒಂದೇ ಸಮನೆ ಅಳುತ್ತಿತ್ತು. ಜೊತೆಗೆ ನೋವಿನಿಂದ ಬಳಲುತ್ತಿತ್ತು. ಇದಾದ ಬಳಿಕ ಆತನ ಪೋಷಕರೂ ಆತಂಕಗೊಂಡು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ನಂತರ ಅದಕ್ಕೆ ಕಾರಣ ತಿಳಿದು ಆಘಾತಕ್ಕೊಳಗಾದರು. ಮಗುವಿನ ವೈದ್ಯಕೀಯ ವರದಿ ನೋಡಿದ ಅವರು ಬೆಚ್ಚಿಬಿದ್ದರು.
ಶಿಶುಗಳಲ್ಲಿನ ಸಣ್ಣ ಬದಲಾವಣೆಗಳೂ ಸಹ ಗಂಭೀರವಾದ ಪರಿಣಾಮ ಬೀರುತ್ತವೆ. ಹೀಗಾಗಿ ಅವರಲ್ಲಿರುವ ಪ್ರತಿಯೊಂದು ಬದಲಾವಣೆಯತ್ತಲೂ ಪೋಷಕರು ಗಮನ ಹರಿಸಬೇಕು. ಮಗು ಹಾಲು ಕುಡಿಯದಿದ್ದರೆ ಹೊಟ್ಟೆ ತುಂಬಿದೆ, ಹೊಟ್ಟೆಯಲ್ಲಿ ಗ್ಯಾಸ್ ಇದೆ ಎಂದುಕೊಂಡು ನಿರ್ಲಕ್ಷಿಸಬಾರದು ಎಂಬುದಕ್ಕೆ ಈ ಘಟನೆ ಉತ್ತಮ ನಿದರ್ಶನ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ಮಗುವಿಗೆ ಉಸಿರಾಟದ ತೊಂದರೆ ಎದುರಿಸಿತು. ಇದ್ದಕ್ಕಿದ್ದಂತೆ ಹಾಲು ಕುಡಿಯುವುದನ್ನು ನಿಲ್ಲಿಸಿತು. ಆ ನಂತರ, ಪೋಷಕರು ಮಕ್ಕಳ ತಜ್ಞರಾದ ಡಾ. ಸೌರವ್ ಮುತಾ ಅವರ ಬಳಿ ಕರೆದೊಯ್ದರು. ಅವರು ಕೆಲವು ವೈದ್ಯಕೀಯ ಪರೀಕ್ಷೆಗಳ ನಂತರ ಮಾಡಿದ ಎಕ್ಸ್-ರೇ ವರದಿಯು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿತು. ಈ ಮಗುವಿನ ಗಂಟಲಲ್ಲಿ ಕಾಲುಂಗುರ ಸಿಕ್ಕಿಕೊಂಡಿರುವುದು ಕಂಡುಬಂತು. ಈ ಪುಟ್ಟ ಮಗು ಆಟವಾಡುತ್ತಿದ್ದಾಗ ಅಕಸ್ಮಾತ್‌ ತಾಯಿಯ ಕಾಲುಂಗುರ ನುಂಗಿ ಬಿಟ್ಟಿದೆ. ಕೆಲವು ದಿನಗಳವರೆಗೆ ಯಾರೂ ಇದನ್ನು ಗಮನಿಸಲೇ ಇಲ್ಲ. ಅದು ವಿಪರೀತಕ್ಕೆ ಹೋದ ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ಕೂಡಲೇ ಮಗುವನ್ನು ನಿಂಬಾಳ್ಕರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಡಾ. ಸೌರಭ್ ನಿಂಬಾಳ್ಕರ್ ಅವರು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಮಗುವಿನ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಉಂಗುರವನ್ನು ದೂರದರ್ಶಕವನ್ನು ಬಳಸಿ ಬೇರ್ಪಡಿಸಿದರು ಮತ್ತು ಈಗ ಮಗುವಿನ ಸ್ಥಿತಿ ಸ್ಥಿರವಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಇಂಟರ್ನೆಟ್ ಅನ್ನು ಮಂತ್ರಮುಗ್ಧಗೊಳಿಸಿದ ವಿಶ್ವದ ಅತಿ ಎತ್ತರದ ಶಿವ ದೇವಾಲಯದ ಸುಂದರ ವೈಮಾನಿಕ ನೋಟ | ವೀಕ್ಷಿಸಿ

ಈ ಹಿಂದೆ ಜಾರ್ಖಂಡ್‌ನಲ್ಲೂ 6 ತಿಂಗಳ ಮಗು ಪ್ಲಾಸ್ಟಿಕ್ ಬಲ್ಬ್ ನುಂಗಿತ್ತು. ಈ ಪುಟ್ಟ ಹುಡುಗಿಯ ಹೆಸರು ಪ್ರಿಯಾ ಕುಮಾರಿ. ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎರಡು ಇಂಚಿನ ಪ್ಲಾಸ್ಟಿಕ್ ಬಲ್ಬ್ ನುಂಗಿ ಬಿಟ್ಟಿತ್ತು. ಅದು ಅವಳ ಕುತ್ತಿಗೆಗೆ ಹೋಗಿ ಸಿಕ್ಕಿಹಾಕಿಕೊಂಡಿತು. ಕೊರಳಲ್ಲಿ ಪ್ಲಾಸ್ಟಿಕ್ ಬಲ್ಬ್ ಅಂಟಿಕೊಂಡಿದ್ದರಿಂದ ಬಾಲಕಿಗೆ ತುಂಬಾ ತೊಂದರೆಯಾಗತೊಡಗಿತು. ಅವಳು ಜೋರಾಗಿ ಅಳಲು ಪ್ರಾರಂಭಿಸಿದಳು. ಆರಂಭದಲ್ಲಿ ಬಾಲಕಿಯ ಬಾಯಿಗೆ ಸಿಲುಕಿದ್ದ ಬಲ್ಬ್ ಅನ್ನು ಮನೆಯವರು ತಾವೇ ತೆಗೆಯಲು ಯತ್ನಿಸಿದರಾದರೂ ಯಾರಿಂದಲೂ ಸಾಧ್ಯವಾಗಲಿಲ್ಲ. ಇದಾದ ಬಳಿಕ ಮನೆಯವರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಬಾಲಕಿಯ ಗಂಟಲಲ್ಲಿ ಸಿಲುಕಿದ್ದ ಬಲ್ಬ್ ತೆಗೆಯಲು ವೈದ್ಯರ ತಂಡ ಇನ್ನಿಲ್ಲದ ಕಸರತ್ತು ನಡೆಸಿತ್ತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement