ನಡು ರಸ್ತೆಯಲ್ಲಿ ವ್ಯಕ್ತಿ ಮೇಲೆ ಏಕಾಏಕಿ ಹಿಗ್ಗಾಮುಗ್ಗಾ ದಾಳಿ ಮಾಡಿದ ಗೂಳಿ: ಸುತ್ತಲಿನವರು ದಿಗ್ಭ್ರಾಂತ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಮಾನವ ಸಂಘರ್ಷಗಳು ಜಾಸ್ತಿಯಾಗುತ್ತಿದ್ದು, ಸಾಕು ಪ್ರಾಣಿಗಳು ಸಹ ಮನುಷ್ಯರ ಮೇಲೆ ದಾಳಿ ಮಾಡುವ ಅನೇಕ ಸನ್ನಿವೇಶಗಳನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ಸಾಕು ಪ್ರಾಣಿಗಳು ಅನಿರೀಕ್ಷಿತವಾಗಿ ದಾಳಿಗಳನ್ನು ನಡೆಸುತ್ತವೆ. ನಿರ್ದಿಷ್ಟ ಕಾರಣಗಳು ಹೀಗೆ ಎಂದು ಹೇಳುವುದು ಕಷ್ಟ. ಅದಕ್ಕಾಗಿ ನಮ್ಮ ಜಾಗ್ರತೆಯಲ್ಲಿ ನಾವಿರಬೇಕು.
ವೈರಲ್ ವೀಡಿಯೊವೊಂದರಲ್ಲಿ ರೀತಿಯದ್ದಾಗಿದೆ. ನೀವು ಈ ವೀಡಿಯೊವನ್ನು ನೋಡಿದರೆ, ಪ್ರಾಣಿಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂಬುದು ಗೊತ್ತಾಗುತ್ತದೆ.

ಈ ವೈರಲ್ ವೀಡಿಯೊದಲ್ಲಿ, ರಸ್ತೆಯಲ್ಲಿ ಗೂಳಿಯೊಂದು ತನ್ನ ಪಾಡಿಗೆ ತಾನು ಹೋಗುತ್ತಿರುತ್ತದೆ. ಅದೇ ವೇಳೆಗೆ ವ್ಯಕ್ತಿಯೊಬ್ಬರು ಮನೆ ಗೇಟ್​ ತೆಗೆದು ರಸ್ತೆಗೆ ಬರುತ್ತಾರೆ. ಅಷ್ಟೇ… ಆ ವ್ಯಕ್ತಿಯ ಮೇಲೆ ಆ ಗೂಳಿ ಇದ್ದಕ್ಕಿಂದ್ದಂತೆ ದಾಳಿ ಮಾಡುತ್ತದೆ, ಆ ಬಡಪಾಯಿ ವ್ಯಕ್ತಿಯ ಮೇಲೆ ಹೇಗೆ ದಾಳಿ ಮಾಡುತ್ತದೆಯೆಂದರೆ ಆತ ನೆಲದ ಮೇಲೆ ಬಿದ್ದರೂ ತಿವಿಯುವುದನ್ನು ಬಿಡುವುದಿಲ್ಲ. ಗೂಳಿದಾಳಿಯಿಂದ ಬಿಡಿಸಿಕೊಳ್ಳಲು ಅವಕಾಶವನ್ನೇ ನೀಡುವುದಿಲ್ಲ.

ಆ ವ್ಯಕ್ತಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ ಮೇಲೆ ದಾಳಿ ನಡೆಸಿದೆ ಗೂಳಿ ನಂತರಆ ವ್ಯಕ್ತಿಯ ನೆರವಿಗೆ ಬಂದ ಮಹಿಳೆಯೊಬ್ಬಳನ್ನು ಕೆಳಕ್ಕೆ ಕೆಡಹುತ್ತದೆ. ಎರಡು ನಾಯಿಗಳು ಬಂದು ವ್ಯಕ್ತಿಯನ್ನು ಬಿಡಿಸಲು ಪ್ರಯತ್ನಿಸುತ್ತವೆ. ಆದರೆ ಗೂಳಿ ನಾಯಿಗಳಿಗೇ ಹೆದರಿಸುತ್ತದೆ. ನಂತರ ಕೆಲವರು ದೊಣ್ಣೆ ಹಿಡಿದಿಕೊಂಡು ಬಂದು ರೊಚ್ಚಿಗೆದ್ದ ಗೂಳಿಯನ್ನು ಬೆದರಿಸಿ ಓಡಿಸಿದ್ದಾರೆ. ವ್ಯಕ್ತಿಗೆ ತೀವ್ರ ಗಾಯವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement