ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ. ಭೂ ಕಂಪನದ ಅನುಭವಕ್ಕೆ ಬೆಚ್ಚಿದ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ ಎಂದು ಹೇಳಲಾಗಿದೆ.
ವಿಜಯಪುರ ನಗರದ ರೇಲ್ವೇ ಸ್ಟೇಷನ್, ಅಶುತೋಶಿ ನಗರ, ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ರಾತ್ರಿ 8.15 ನಿಮಿಷ ಸುಮಾರಿಗೆ ಇಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಜನರು ಹೇಳಿದ್ದಾರೆ. ಆಲಮಟ್ಟಿಯ ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲಾಗಿದೆ. ವಿಜಯಪುರ ನಗರದ ಬಹುತೇಕ ಬಡಾವಣೆಗಳಲ್ಲಿ ಭೂಕಂಪನದ ಅನುಭವವಾಗಿದೆ.
ಕಳೆದ ತಿಂಗಳು ಜುಲೈ 9ರಂದು ಭಾರಿ ಸದ್ದಿನೊಂದಿಗೆ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲೂ ಭೂಕಂಪನದ ತೀವ್ರತೆ ದಾಖಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ