ಅಕ್ಟೋಬರ್ 4ರಂದು ವಿಜಯಪುರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಯುವಗೋಷ್ಠಿ

ವಿಜಯಪುರ: ನೆಲಮೂಲ ಸಾಹಿತ್ಯದ ಚಾರಿತ್ರಿಕ ಹಿನ್ನೆಲೆ, ತಾತ್ತ್ವಿಕ ಆಯಾಮ ಮತ್ತು ಸಮಕಾಲೀನ ಪ್ರಸ್ತುತತೆಯ ಕುರಿತು ಯುವ ಮನಸ್ಸುಗಳಲ್ಲಿ ಚಿಂತನೆ ಬೆಳೆಸುವ ಉದ್ದೇಶದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ಯುವ ಪ್ರಕಾರದ ವತಿಯಿಂದ ಅಕ್ಟೋಬರ್ 4ರಂದು ವಿಜಯಪುರದಲ್ಲಿ ರಾಜ್ಯ ಯುವಗೋಷ್ಠಿಯನ್ನು ಆಯೋಜಿಸಲಾಗಿದೆ. ‘ನೆಲಮೂಲ ಸಾಹಿತ್ಯ: ಚರಿತ್ರೆ, ತಾತ್ತ್ವಿಕತೆ, ಪ್ರಸ್ತುತತೆ’ ಎಂಬ ವಿಷಯದ ಮೇಲೆ ಈ ಯುವಗೋಷ್ಠಿಯು … Continued

ವಿಜಯಪುರ : ಭೂತನಾಳ ಕೆರೆಯಲ್ಲಿ ತಾಯಿ-5 ಮಕ್ಕಳ ಮೃತದೇಹ ಪತ್ತೆ

ವಿಜಯಪುರ: ಜಿಲ್ಲೆಯ ಭೂತನಾಳ ಕೆರೆಯಲ್ಲಿ ಮಹಿಳೆ ಹಾಗೂ ಆಕೆಯ ಐವರು ಮಕ್ಕಳ ಮೃತದೇಹಗಳು ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದರೂ, ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಶೋಭಾ (35) ಹಾಗೂ ಆಕೆಯ ಐವರು ಮಕ್ಕಳಾದ ವಿದ್ಯಾ (15), ಸುವರ್ಣಾ (13), ತಿಪ್ಪರಾಯ … Continued

ವಿಜಯಪುರ : ನೋಡಲು ತನ್ನಂತಿಲ್ಲ ಎಂದು ಮಗನನ್ನೇ ನದಿಗೆ ಎಸೆದು ಸಾಯಿಸಿದ ತಂದೆ…!

ವಿಜಯಪುರ: ಮಗ ನೋಡಲು ತನ್ನಂತೆ ಇಲ್ಲ ಎಂಬ ಕಾರಣಕ್ಕೆ 6 ವರ್ಷದ ಮಗನನ್ನು ತಂದೆಯೇ ನದಿಗೆ ಎಸೆದು ಕೊಲೆ ಮಾಡಿದ ಕ್ರೂರ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಕೊಲೆಯಾದ ಬಾಲಕ ಎಂದುಗುರುತಿಸಲಾಗಿದೆ. ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ಈ ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ನಾಗಠಾಣ … Continued

ವಿಜಯಪುರ: ಗುಂಡು ಹಾರಿಸಿ ಗ್ರಾಪಂ ಸದಸ್ಯನ ಹತ್ಯೆ

ವಿಜಯಪುರ : ಗ್ರಾಮ ಪಂಚಾಯತ ಸದಸ್ಯನ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ನಗರ ಹೊರ ವಲಯ ಅಲಿಯಾಬಾದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಅಲಿಯಾಬಾದ ಗ್ರಾಪಂ ಸದಸ್ಯರಾದ ಪಾಂಗರುನ ದೊಡ್ಡಿ ನಿವಾಸಿ ರಾಜು ಖರೆ (48) ಎಂದು ಗುರುತಿಸಲಾಗಿದೆ. ರಾಜು ಖರೆ … Continued

ವಿಜಯಪುರ: ತಾಂತ್ರಿಕ ದೋಷದಿಂದ ಜಮೀನಿಗೆ ಅಪ್ಪಳಿಸಿದ ಖಾಸಗಿ ತರಬೇತಿ ವಿಮಾನ ; ಇಬ್ಬರಿಗೆ ಗಾಯ

ವಿಜಯಪುರ: ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತುರ್ತು ಭೂಸಮ್ಮತ; ಇಬ್ಬರು ಪೈಲಟ್‌ಗಳು ಸುರಕ್ಷಿತ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಬಳಿ ಭಾನುವಾರ (ಫೆಬ್ರವರಿ 8) ರೆಡ್‌ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ತರಬೇತಿ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ನೆಲಕ್ಕೆ ಅಪ್ಪಳಿಸಿದೆ (Crash-land). ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲಬುರಗಿಯಿಂದ ಬೆಳಗಾವಿಗೆ ತರಬೇತಿ … Continued

ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬೇಡಿ : ಸಿಎಂ ಸಿದ್ದರಾಮಯ್ಯಗೆ‌ ಶಾಸಕ ಯತ್ನಾಳ ಪತ್ರ

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದ ಬೆನ್ನಲ್ಲೇ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal), ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ತಾವು … Continued

ವಿಜಯಪುರ | ಚಡಚಣದಲ್ಲಿ ಸಿಬ್ಬಂದಿ ಕೈಕಾಲು ಕಟ್ಟಿಹಾಕಿ ಬ್ಯಾಂಕ್‌ ದರೋಡೆ…!

ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್‌ ದರೋಡೆ ಮಾಡಿದ ಘಟನೆ ನಡೆದಿದೆ. ಜಿಲ್ಲೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ (SBI Bank) ದರೋಡೆ (Robbery) ನಡೆದಿದೆ ಎಂದು ವರದಿಯಾಗಿದೆ. ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ, ನಂತರ ಅವರನ್ನು … Continued

ವಿಜಯಪುರ ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ

ವಿಜಯಪುರ: ಗುಮ್ಮಟ ನಗರ ಎಂದೇ ಖ್ಯಾತಿ ಪಡೆದ ವಿಜಯಪುರ ಮಹಾನಗರ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಸೇರಿದೆ. ಬಿಜೆಪಿ ಸದಸ್ಯರಾದ ಎಂ.ಎಸ್. ಕರಡಿ ಮೇಯರ್ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸುಮಿತ್ರಾ ಜಾಧವ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜನವರಿ, ಫೆಬ್ರುವರಿಯಲ್ಲಿ ನಡೆದ ವಿಜಯಪುರ ಮಹಾನಗರ ಪಾಲಿಕೆಯ 22ನೇ ಮೇಯರ್ ಹಾಗೂ ಉಪ ಮೇಯರ್ … Continued

ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

ವಿಜಯಪುರ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನದ ಪರ ಪೋಸ್ಟ್‌ ಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕ್‌ ಪ್ರೇಮ ಮೆರೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಜಯಪುರ ಅಲ್ ಅಮೀನ್ ಮೆಡಿಕಲ್ … Continued

ಯತ್ನಾಳ ಸವಾಲು ಸ್ವೀಕರಿಸಿದ ಸಚಿವ ಶಿವಾನಂದ ಪಾಟೀಲ ; ಶಾಸಕ ಸ್ಥಾನಕ್ಕೆ ರಾಜೀನಾಮೆ : ಆದರೆ…

ಬೆಂಗಳೂರು: ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಸವಾಲು ಸ್ವೀಕರಿಸಿರುವ ಶಿವಾನಂದ ಪಾಟೀಲ ಅವರು ಸ್ಪೀಕರ್ ಯುಟಿ ಖಾದರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದು, ಯತ್ನಾಳ ವಿರುದ್ಧ ತಾನು ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ. ಆದರೆ ಅದರಲ್ಲಿ ಒಂದು ಟ್ವಿಸ್ಟ್‌ ಇದೆ. … Continued