ವಿಜಯಪುರ: ಗುಂಡು ಹಾರಿಸಿ ಗ್ರಾಪಂ ಸದಸ್ಯನ ಹತ್ಯೆ

ವಿಜಯಪುರ : ಗ್ರಾಮ ಪಂಚಾಯತ ಸದಸ್ಯನ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ನಗರ ಹೊರ ವಲಯ ಅಲಿಯಾಬಾದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಅಲಿಯಾಬಾದ ಗ್ರಾಪಂ ಸದಸ್ಯರಾದ ಪಾಂಗರುನ ದೊಡ್ಡಿ ನಿವಾಸಿ ರಾಜು ಖರೆ (48) ಎಂದು ಗುರುತಿಸಲಾಗಿದೆ. ರಾಜು ಖರೆ ತಮ್ಮ ಥಾರ್ ವಾಹನದಲ್ಲಿ ತೆರಳುತ್ತಿದ್ದಾಗ, ಅವರ ವಾಹನಕ್ಕೆ ದುಷ್ಕರ್ಮಿಗಳು ಟಿಪ್ಪರ್ ನಲ್ಲಿ ಡಿಕ್ಕಿ ಹೊಡೆಸಿದ್ದಾರೆ. ನಂತರ ಜೀಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, ವಾಹನದ ಡೋರ್ ಓಪನ್ ಆಗದಕ್ಕೆ ನಂತರ ಜೀಪಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎನ್ನಲಾಗಿದೆ.

ದುಷ್ಕರ್ಮಿಗಳ ಭೀಕರ ದಾಳಿಯಿಂದ ರಾಜು ಕರೆ ಅವರು ಗಂಭೀರವಾಗಿ ಗಾಯಗೊಂಡು ವಾಹನದಲ್ಲಿಯೇ ಅಸುನೀಗಿದ್ದಾನೆ. ಈ ಹತ್ಯೆಗೆ ಹಳೇ ವೈಷಮ್ಯವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement