ಹಿಮಾಚಲದ ಕಂಗ್ರಾದಲ್ಲಿ ಭಾರೀ ಮಳೆಗೆ ಕುಸಿದುಬಿದ್ದ ರೈಲ್ವೆ ಸೇತುವೆ | ಆಘಾತಕಾರಿ ವೀಡಿಯೊ ವೀಕ್ಷಿಸಿ

ಕಂಗ್ರಾ (ಹಿಮಾಚಲ ಪ್ರದೇಶ) : ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಭಯಾನಕ ವೀಡಿಯೊದಲ್ಲಿ, ಭಾರೀ ಮಳೆಯಿಂದಾಗಿ ಉಂಟಾದ ಹಠಾತ್‌ ಪ್ರವಾಹದಿಂದಾಗಿ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಚಕ್ಕಿ ಸೇತುವೆ ಶನಿವಾರ ಕುಸಿದು ಬಿದ್ದಿದೆ. ಇದು ಚಕ್ಕಿ ನದಿಯ ಮೇಲೆ ನಿರ್ಮಿಸಲಾದ ರೈಲ್ವೆ ಸೇತುವೆಯಾಗಿದೆ. ಈ ಘಟನೆ ವೀಡಿಯೊದಲ್ಲಿ ಸೆರೆಯಾಗಿದೆ.
ಇಂದು, ಶನಿವಾರ ಮುಂಜಾನೆ, ಧರ್ಮಶಾಲಾದಲ್ಲಿ ಮೇಘಸ್ಫೋಟದ ವರದಿಯಾಗಿದ್ದು, ಆ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಹಿಮಾಚಲ ಪ್ರದೇಶದ ಕಂಗ್ರಾ, ಕುಲು ಮತ್ತು ಮಂಡಿ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ನದಿಗಳು, ತೊರೆಗಳು ಮತ್ತು ಇತರ ಜಲಮೂಲಗಳ ಬಳಿ ಹೋಗದಂತೆ ಕಂಗ್ರಾ ಜಿಲ್ಲಾಡಳಿತವು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.

ಇಡೀ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳು ಅಲರ್ಟ್ ಆಗಿದ್ದು, ಯಾವುದೇ ಪರಿಸ್ಥಿತಿಗೆ ಸಾಧ್ಯವಾದಷ್ಟು ತ್ವರಿತವಾಗಿ ಸ್ಪಂದಿಸಬೇಕು ಎಂದು ನಿರ್ದೇಶನವನ್ನು ನೀಡಲಾಗಿದೆ. ಸ್ಥಳೀಯರು ತಮ್ಮ ಮನೆಗಳ ಹೊರಗೆ ಯಾವುದೇ ಅನಗತ್ಯ ಸಂಚಾರವನ್ನು ತಪ್ಪಿಸುವಂತೆ ಕೇಳಿಕೊಳ್ಳಲಾಗಿದೆ.
ಏತನ್ಮಧ್ಯೆ, ಚಂಬಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಶನಿವಾರ ಮುಂಜಾನೆ ಮನೆ ಕುಸಿದು ಮೂವರು ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಚೌವರಿ ತೆಹಸಿಲ್‌ನ ಬಾನೆಟ್ ಗ್ರಾಮದಲ್ಲಿ ಇಂದು ಬೆಳಗಿನ ಜಾವ 4:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಚಂಬಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ (ಡಿಇಒಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಧರ್ಮದ ಹೆಸರಿನಲ್ಲಿ ಮತ ಯಾಚನೆ: ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಶುಕ್ರವಾರ ರಾಜ್ಯದ ಮಂಡಿ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭೂಕುಸಿತ ವರದಿಯಾಗಿದೆ. “ಕಳೆದ ರಾತ್ರಿ ಮಂಡಿಯ ಸೆಗ್ಲಿಯಿಂದ ಮೇಘಸ್ಫೋಟದ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿಸಲಾಯಿತು. ನಾವು ತಲುಪುವ ಹೊತ್ತಿಗೆ ಭಾರಿ ಭೂಕುಸಿತವೂ ಸಂಭವಿಸಿದೆ. ರಸ್ತೆಯನ್ನು ತೆರೆಯಲು PWD ಸಹಾಯ ಮಾಡುತ್ತಿದೆ ಮತ್ತು NDRF ನ ತಂಡವು ಸಮನ್ವಯಗೊಳಿಸಲು ಸ್ಥಳಕ್ಕೆ ತೆರಳುತ್ತಿದೆ ಎಂದು ಮಂಡಿ ಉಪ ಆಯುಕ್ತ ಅರಿಂದಮ್ ಚೌಧರಿ ಹೇಳಿದರು.
ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement