ದಂತ ವೈದ್ಯರ ಮೇಲೆ ಹಲ್ಲೆ ಮಾಡಿದ ಮಿಜೋರಾಂ ಸಿಎಂ ಪುತ್ರಿ : ಕ್ಷಮೆ ಯಾಚಿಸಿದ ಸಿಎಂ | ವೀಕ್ಷಿಸಿ

ಮಿಜೋರಾಂ ಮುಖ್ಯಮಂತ್ರಿ ಪುತ್ರಿ ಮಿಲಾರಿ ಚಾಂಗ್ಟೆ ಇತ್ತೀಚೆಗೆ ಕ್ಲಿನಿಕ್‌ ಒಂದರಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ತಮ್ಮ ಮಗಳ “ದುರ್ವರ್ತನೆ” ಕುರಿತು ವ್ಯಾಪಕ ಟೀಕೆಗಳ ನಂತರ ಮಿಜೋರಾಂನ ಮುಖ್ಯಮಂತ್ರಿ ಝೋರಂತಾಂಗ್‌ ಕ್ಷಮೆಯಾಚಿಸಿದ್ದಾರೆ.
ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಮುಖ್ಯಮಂತ್ರಿಯವರು ತಮ್ಮ ಮಗಳ ನಡವಳಿಕೆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಈ ವರ್ತನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಘಟನೆಯು ವೈದ್ಯಕೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಮಗಳು ವೈದ್ಯರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ 800 ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ)-ಮಿಜೋರಾಂ ಘಟಕದ ಸದಸ್ಯರು ಹಗಲಿನಲ್ಲಿ ತಮ್ಮ ಕೆಲಸದ ಸ್ಥಳಗಳಿಗೆ ಕಪ್ಪು ಬ್ಯಾಡ್ಜ್‌ಗಳನ್ನು ಧರಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಮಾಲೋಚನೆಗಾಗಿ ಕ್ಲಿನಿಕ್‌ಗೆ ಭೇಟಿ ನೀಡುವ ಮೊದಲು ಅಪಾಯಿಂಟ್‌ಮೆಂಟ್ ಪಡೆಯುವಂತೆ ಕೇಳಿದ್ದಕ್ಕಾಗಿ ಐಜ್ವಾಲ್ ಮೂಲದ ಚರ್ಮರೋಗ ವೈದ್ಯರ ಮೇಲೆ ಮಿಝೊರಾಂ ಮುಖ್ಯಮಂತ್ರಿ ಮಗಳು ಛಾಂಗ್ಟೆ ಬುಧವಾರ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಲಾಲ್ಲುತ್ತಂಗಿ ಹ್ಮಾರ್ ತಿಳಿಸಿದ್ದಾರೆ.

ವೈದ್ಯರ ವಿರುದ್ಧದ ಇಂತಹ ಹಿಂಸಾಚಾರಗಳು ಎಂದಿಗೂ ಪುನರಾವರ್ತನೆಯಾಗಬಾರದು ಎಂದು ನಾವು ಬಯಸುತ್ತೇವೆ” ಎಂದು ಸಂಘದ ಮಿಜೋರಾಂ ಘಟಕವು ಹೇಳಿಕೆಯಲ್ಲಿ ತಿಳಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮುಖ್ಯಮಂತ್ರಿ ಝೋರಂತಾಂಗ್‌ ಅವರು, ನಾನು ಚರ್ಮರೋಗ ವೈದ್ಯರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದೇನೆ ಎಂದು ಹೇಳಿದ್ದಾರೆ. ಅವರು ಛಾಂಗ್ಟೆ ವಿರುದ್ಧ ಯಾವುದೇ “ಕಠಿಣ ಕ್ರಮ” ವನ್ನು ಪ್ರಾರಂಭಿಸದ ಭಾರತೀಯ ವೈದ್ಯಕೀಯ ಸಂಘಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ವೈದ್ಯರ ಬಗ್ಗೆ ನಮ್ಮ ಮಗಳ ವರ್ತನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ, ಈ ವರ್ತನೆ ಬಗ್ಗೆ ನಾನು ವೈದ್ಯರು ಮತ್ತು ಸಾರ್ವಜನಿಕರಿಂದ ಕ್ಷಮೆ ಕೇಳುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಇದಕ್ಕೂ ಮೊದಲು, ಛಾಂಗ್ಟೆ ಅವರ ಹಿರಿಯ ಸಹೋದರ ರಾಮಥಾನ್ಸಿಯಾಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದರು. ಮಾನಸಿಕ ಒತ್ತಡದಿಂದಾಗಿ ತಮ್ಮ ಸಹೋದರಿ “ನಿಯಂತ್ರಣ ಮೀರಿ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement