ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನಗಳ ಮೇಲೆ ದಾಳಿ : ಹಲವು ವಾಹನಗಳು ಜಖಂ | ವೀಕ್ಷಿಸಿ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ಪಟ್ನಾದಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು ತೂರಾಟದ ಸಮಯದಲ್ಲಿ ಅವರು ಯಾವುದೇ ವಾಹನದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಕಲ್ಲು ತೂರಾಟದಲ್ಲಿ ಹಲವು ವಾಹನಗಳ ಗಾಜುಗಳು ಒಡೆದಿವೆ.
ನಿತೀಶ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ ಘಟನೆ ಪಾಟ್ನಾ ಜಿಲ್ಲೆಯ ಸೊಹ್ಗಿಯಲ್ಲಿ ನಡೆದಿದೆ. ಒಂದು ವಾರದ ಹಿಂದೆ ನಾಪತ್ತೆಯಾದ ಯುವಕನ ಶವ ಬೇರ್‌ ಎಂಬಲ್ಲಿ ಪತ್ತೆಯಾಗಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಘಟನೆಯಿಂದ ಕೋಪಗೊಂಡ ಗ್ರಾಮಸ್ಥರು ಗೌರಿಚಕ್‌ನ ಸೊಹ್ಗಿ ಬಳಿ ಪಾಟ್ನಾ-ಗಯಾ ಮುಖ್ಯ ರಸ್ತೆಯನ್ನು ತಡೆದರು.

ಇದೇ ವೇಳೆ ನಿತೀಶ್ ಕುಮಾರ್ ಬೆಂಗಾವಲು ಪಡೆ ಆ ಪ್ರದೇಶದಲ್ಲಿ ಹಾದು ಹೋಗಿತ್ತು. ಇದನ್ನು ಕಂಡ ಗ್ರಾಮಸ್ಥರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. 2024 ರಲ್ಲಿ ನಿತೀಶಕುಮಾರ್ ಅವರನ್ನು ಪ್ರಧಾನಿ ಹುದ್ದೆಗೆ ಪರಿಗಣಿಸಲು ವಿರೋಧ ಪಕ್ಷಗಳು ಒಪ್ಪಿಕೊಂಡರೆ “ಪ್ರಬಲ ಅಭ್ಯರ್ಥಿ” ಆಗಿ ಹೊರಹೊಮ್ಮಬಹುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ ಎಂದು ಭಾನುವಾರ ಹೇಳಿದ್ದಾರೆ.

https://twitter.com/HindustanUPBH/status/1561369933002702848?ref_src=twsrc%5Etfw%7Ctwcamp%5Etweetembed%7Ctwterm%5E1561369933002702848%7Ctwgr%5E5d6df698104dfc6d3c5e84a2f7f1f22fd5e4a5ba%7Ctwcon%5Es1_&ref_url=https%3A%2F%2Fwww.hindustantimes.com%2Fcities%2Fpatna-news%2Fnitish-kumar-s-convoy-attacked-in-patna-bihar-cm-not-present-report-101661093829026.html

ಇತ್ತೀಚೆಗೆ ಭಾರತೀಯ ಜನತಾ ಪಕ್ಷವನ್ನು ತ್ಯಜಿಸುವ ಮೂಲಕ ಮೈತ್ರಿ ಪಾಲುದಾರರನ್ನು ವಿನಿಮಯ ಮಾಡಿಕೊಂಡ ನಿತೀಶಕುಮಾರ್, ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ನೇತೃತ್ವದ ಮಹಾಘಟಬಂಧನಕ್ಕೆ ಎರಡನೇ ಬಾರಿಗೆ ಮರಳಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement