ಮತದಾರರ ಗುರುತಿನ ಕಾರ್ಡಿಗೆ ಆಧಾರ್ ಲಿಂಕ್ ಮಾಡುವುದು ಐಚ್ಛಿಕ: ಲಿಂಕ್‌ ಮಾಡದಿದ್ರೆ ಹೆಸರು ರದ್ದಾಗುತ್ತದೆಯಾ ಎಂಬ ಅನುಮಾನಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ

ನವದೆಹಲಿ: ಮತದಾರರ ಗುರುತಿನ ಕಾರ್ಡ್‌ (ವೋಟರ್‌ ಕಾರ್ಡ್‌) ಡಾಟಾವನ್ನು ಆಧಾರ್ ಜೊತೆ ಲಿಂಕ್‌ ಮಾಡುವುದು ಐಚ್ಛಿಕ ವಿಷಯ. ಹೀಗೆ ಜೋಡಣೆ (ಲಿಂಕ್) ಮಾಡದ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ಹೆಸರನ್ನು ತೆಗೆದುಹಾಕುವುದಿಲ್ಲ ಅಥವಾ ಅಳಿಸುವುದಿಲ್ಲ ಎಂದು ಚುನಾವಣಾ ಆಯೋಗ ಸೋಮವಾರ ಹೇಳಿದೆ.
ಈ ವಿಷಯದ ಬಗ್ಗೆ ಕೆಲವು ಮಾಧ್ಯಮ ವರದಿಗಳ ನಂತರ ಆಯೋಗವು ಈ ಕುರಿತು ಸ್ಪಷ್ಟನೆ ನೀಡಿದೆ. ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಗಳನ್ನು ಉಲ್ಲೇಖಿಸಿ, ನಮೂನೆ-6B ಯಲ್ಲಿ ಮತದಾರರ ಕಾರ್ಡ್‌ ದತ್ತಾಂಶಕ್ಕಕೆ ಆಧಾರ್ ಲಿಂಕ್‌ ಮಾಡುವುದು ಸ್ವಯಂಪ್ರೇರಿತವಾಗಿದೆ ಎಂದು ಗಮನಿಸಬಹುದು. ಆಧಾರ್ ಜೊತೆ ಮತದಾರರ ಕಾರ್ಡ್‌ ದತ್ತಾಂಶವನ್ನು ಲಿಂಕ್‌ (ಜೋಡಿಸಿದ) ಮಾಡದ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ಯಾವುದೇ ಹೆಸರನ್ನು ಕೈಬಿಡುವುದಿಲ್ಲ” ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮತದಾರರ ಪಟ್ಟಿಯ ದತ್ತಾಂಶವನ್ನು ಲಿಂಕ್ ಮಾಡಲು ಮತ್ತು ದೃಢೀಕರಣಕ್ಕಾಗಿ ಮತದಾರರಿಂದ ಆಧಾರ್ ಸಂಗ್ರಹವು ಸ್ವಯಂಪ್ರೇರಿತ ಆಧಾರದ ಮೇಲೆ ಇರಬೇಕು ಎಂದು ಈ ವರ್ಷದ ಜುಲೈ 4 ರಂದು ಎಲ್ಲಾ ರಾಜ್ಯಗಳ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ಚುನಾವಣಾ ಆಯೋಗವು ಉಲ್ಲೇಖಿಸಿದೆ.
ಮತದಾರರ ಪಟ್ಟಿಯ ಡೇಟಾದೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು, ಮತದಾರರ ಆಧಾರ್ ವಿವರಗಳನ್ನು ಪಡೆಯಲು ಮಾರ್ಪಡಿಸಿದ ನೋಂದಣಿ ನಮೂನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಸ್ತಿತ್ವದಲ್ಲಿರುವ ಮತದಾರರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಹೊಸ ನಮೂನೆ 6B ಅನ್ನು ಸಹ ಪರಿಚಯಿಸಲಾಗಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

ಪರಿಚ್ಛೇದ 23ರಲ್ಲಿನ ತಿದ್ದುಪಡಿಯು ಮತದಾರರ ಗುರುತನ್ನು ಸ್ಥಾಪಿಸುವುದು ಮತ್ತು ಮತದಾರರ ಪಟ್ಟಿಯಲ್ಲಿನ ನಮೂದುಗಳ ದೃಢೀಕರಣವನ್ನು ಸ್ಥಾಪಿಸುವುದು ಮತ್ತು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿಯ ಹೆಸರನ್ನು ನೋಂದಾಯಿಸುವುದನ್ನು ಗುರುತಿಸುವುದು ಮತದಾರರ ಕಾರ್ಡ್‌ಗೆ ಆಧಾರ್ ಲಿಂಕ್‌ ಮಾಡುವ ಉದ್ದೇಶ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮದ ಉದ್ದೇಶವು ಕಾನೂನು ನಿಬಂಧನೆಗಳೊಂದಿಗೆ ಹೊಂದಿಕೆಯಾಗುತ್ತದೆ. ಆಧಾರ್ ಸಲ್ಲಿಕೆ ಮತದಾರರ ಕಡೆಯಿಂದ ಸ್ವಯಂಪ್ರೇರಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ಚುನಾವಣಾ ಆಯೋಗದ ಪತ್ರದಲ್ಲಿ ತಿಳಿಸಲಾಗಿದೆ.
ಮತದಾರರು ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಮತ್ತು ಆ ಮೂಲಕ ಅವರ ಆಧಾರ್ ಸಂಖ್ಯೆಯನ್ನು ನೀಡಲು ಸಾಧ್ಯವಾಗದಿದ್ದರೆ, 6B ನಮೂನೆಯಲ್ಲಿ ನಮೂದಿಸಲಾದ ಹನ್ನೊಂದು ಪರ್ಯಾಯ ದಾಖಲೆಗಳ ಪ್ರತಿಯನ್ನು ಸಲ್ಲಿಸಲು ಅವರನ್ನು ಕೇಳಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಎಂದು ಚುನಾವಣಾ ಆಯೋಗ ಹೇಳಿದೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement