ಗೋವು ಕಳ್ಳಸಾಗಣೆ ಪ್ರಕರಣ : ಟಿಎಂಸಿಯ ಅನುಬ್ರತ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲದಿದ್ದರೆ…’-ನ್ಯಾಯಾಧೀಶರಿಗೆ ಬಂತು ಬೆದರಿಕೆ ಪತ್ರ

ಅಸನ್ಸೋಲ್‌ (ಪಶ್ಚಿಮ ಬಂಗಾಳ) : ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಟಿಎಂಸಿ ನಾಯಕ ಅನುಬ್ರತ ಮೊಂಡಲ್ ಅವರನ್ನು ಬಿಡುಗಡೆ ಮಾಡದಿದ್ದರೆ ನ್ಯಾಯಾಧೀಶರ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಡ್ರಗ್ಸ್‌ ಪ್ರಕರಣ ದಾಖಲಿಸಿ ಸಿಲುಕಿಸಲಾಗುವುದು ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಬೆದರಿಕೆ ಹಾಕಲಾಗಿದೆ.
ಮೊಂಡಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದಿದ್ದರೆ, ತಮ್ಮ ಕುಟುಂಬವನ್ನು ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಆಕ್ಟ್) ಪ್ರಕರಣದಲ್ಲಿ ಗಂಭೀರ ಆರೋಪದಲ್ಲಿ ಸಿಲುಕಿಸಲಾಗುವುದು ಎಂದು ಬಪ್ಪಾ ಚಟರ್ಜಿ ಎಂಬವರಿಂದ ಪತ್ರದ ಮೂಲಕ ತನಗೆ ಬೆದರಿಕೆ ಬಂದಿದೆ ಎಂದು ಅಸನ್ಸೋಲ್‌ನ ಸಿಬಿಐ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶರಾದ ರಾಜೇಶ್ ಚಕ್ರವರ್ತಿ ಆರೋಪಿಸಿದ್ದಾರೆ.
ನ್ಯಾಯಾಧೀಶರು ತಮ್ಮ ದೂರಿನಲ್ಲಿ, ಚಟರ್ಜಿಯಿಂದ ಬಂದ ಬೆದರಿಕೆ ಪತ್ರವನ್ನು ಲಗತ್ತಿಸಿದ್ದಾರೆ ಮತ್ತು ಬೆಳವಣಿಗೆಯನ್ನು ಗಮನಿಸುವಂತೆ ಪಶ್ಚಿಮ ಬರ್ಧಮಾನ್‌ನಲ್ಲಿರುವ ಜಿಲ್ಲಾ ನ್ಯಾಯಾಧೀಶರಿಗೆ ವಿನಂತಿಸಿದ್ದಾರೆ. ಈ ವಿಷಯವನ್ನು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಚಕ್ರವರ್ತಿ ಅವರು ಆಗಸ್ಟ್ 20 ರಂದು ಬೆದರಿಕೆ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರವನ್ನು ಬಪ್ಪಾ ಚಟರ್ಜಿ ಹೆಸರಿನಲ್ಲಿ ಕಳುಹಿಸಲಾಗಿದೆ. ಸೋಮವಾರ ಬೆದರಿಕೆ ಪತ್ರ ಬಂದಿರುವ ಬಗ್ಗೆ ಕುರಿತು ಸಿಬಿಐ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡಿದರು. ಬಳಿಕ ಅವರು ಈ ಬಗ್ಗೆ ಕೋಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ಅನುಬ್ರತ ಮೊಂಡಲ್ ಅವರನ್ನು ಆಗಸ್ಟ್ 11 ರಂದು ಬೋಲ್ಪುರದಲ್ಲಿರುವ ಅವರ ನಿವಾಸದಿಂದ ಸಿಬಿಐ ಬಂಧಿಸಿತ್ತು. ಮೊಂಡಲ್ ಹೆಸರಿನಲ್ಲಿದ್ದ 16.97 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಸ್ಥಿರ ಠೇವಣಿಗಳನ್ನೂ ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ.
ಅನುಬ್ರತ ಮೊಂಡಲ್ ಅವರ ಸಿಬಿಐ ಕಸ್ಟಡಿ, ನಾಳೆ ಬುಧವಾರ ಕೊನೆಗೊಳ್ಳಲಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕಳೆದ ವಾರ, ವೈದ್ಯಕೀಯ ಕಾರಣಗಳಿಗಾಗಿ ಮೊಂಡಲ್ ಅವರ ವಕೀಲರು ಕೋರಿದ್ದ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿತ್ತು ಮತ್ತು ಆಗಸ್ಟ್ 24 ರವರೆಗೆ ಅವರ ಸಿಬಿಐ ಕಸ್ಟಡಿಯನ್ನು ವಿಸ್ತರಿಸಿತು.
ಸಿಬಿಐ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು ಮತ್ತು ಮೊಂಡಲ್ ಅವರು ಹೆಚ್ಚು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರಿಗೆ ಜಾಮೀನು ನೀಡಿದರೆ, ಅವರು ಸಾಕ್ಷ್ಯವನ್ನು ಹಾಳುಮಾಡಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಎಲ್ಲ ಸಾಧ್ಯತೆಗಳಿವೆ ಎಂದು ವಾದಿಸಿತ್ತು.

ಏತನ್ಮಧ್ಯೆ, ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರೂ ಆಗಿರುವ ಮೊಂಡಲ್ ಅವರ ಸೋದರಳಿಯ ಒಡೆತನದ ಬಿರ್ಭೂಮ್ ಜಿಲ್ಲೆಯ ಅಕ್ಕಿ ಗಿರಣಿ ಮೇಲೆ ಸಿಬಿಐ ಹಾಗೂ ಸೋಮವಾರ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ರೈಸ್ ಮಿಲ್ ನಿಷ್ಕ್ರಿಯವಾಗಿದ್ದರೂ, ತನಿಖೆಯ ಪ್ರಕ್ರಿಯೆಯಲ್ಲಿ ಅದರೊಂದಿಗಿನ ಸಂಪರ್ಕಗಳು ಜಾನುವಾರು ಹಗರಣವನ್ನು ಕಂಡುಹಿಡಿಯಲು ನೆರವಾಗಬಹುದು ಎಂದು ನಾವು ನಂಬುತ್ತೇವೆ. ಗೋವು ಕಳ್ಳಸಾಗಣೆಯಿಂದ ಗಳಿಸಿದ ಹಣದಿಂದ ಈ ಗಿರಣಿ ನಡೆಸಲಾಗಿದೆಯೇ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement