
ಬೆಂಗಳೂರು: ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಹೊಸದಾಗಿ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಸರ್ಕಾರದಿಂದ ರಚಿಸಲ್ಪಟ್ಟಿರುವಂತ ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿರುವ ಹಿನ್ನಲೆಯಲ್ಲಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯಡಿಯ ಕೆಲ ಟ್ರಸ್ಟ್, ಪ್ರತಿಷ್ಠಾನಗಳಿಗೆ ಹೊಸದಾಗಿ ಅಧ್ಯಕ್ಷರು, ಸದಸ್ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಟ್ರಸ್ಟ್‌ಗಳ ಅಧ್ಯಕ್ಷರ ಪಟ್ಟಿ ಹೀಗಿದೆ
ಡಾ. ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್ ಧಾರವಾಡ- ಮನೋಜ ಪಾಟೀಲ ಧಾರವಾಡ
ಡಾ. ಪು.ತಿ. ನ. ಟ್ರಸ್ಟ್ ಬೆಂಗಳೂರು- ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಟ್ರಸ್ಟ್ ಧಾರವಾಡ – ನಾಗರಾಜ ಹವಾಲದಾರ
ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ – ಡಾ. ವತ್ಸಲಾ ಮೋಹನ್
ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಉಡುಪಿ – ಆನಂದ ಸಿ. ಕುಂದರ್
ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನ ಹಾವೇರಿ- ಅನಿಲ ಗೋಕಾಕ್
ಬಸವರಾಜ ರಾಜಗುರು ಸ್ಮಾರಕ ಟ್ರಸ್ಟ್ ಧಾರವಾಡ- ಶ್ರೀಪಾದ ಹೆಗಡೆ ಧಾರವಾಡ
ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್- ಡಾ. ಶ್ರೀನಿವಾಸ ಪಾಡಿಗಾರ
ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ- ಡಾ. ಕವಿತಾ ಕುಸಗಲ್
ಮೈಲಾರ ಮಹಾದೇವಪ್ಪ ಸ್ಮಾರಕ ಟ್ರಸ್ಟ್ ಹಾವೇರಿ- ಸುಧೀರ್ ಸಿಂಹ ಘೋರ್ಪಡೆ
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ – ಡಾ. ಗುರುಪಾದ ಮರಿಗುದ್ದಿ
ಡಿ.ವಿ. ಹಾಲಭಾವಿ ಸ್ಮಾರಕ ಟ್ರಸ್ಟ್ ಧಾರವಾಡ- ಪಿ.ಎಸ್. ಕಡೆಮನಿ
ಡಿ.ವಿ.ಜಿ. ಪ್ರತಿಷ್ಠಾನ ಕೋಲಾರ- ಎಸ್. ದಿವಾಕರ
ಪಿ.ಬಿ. ಧುತ್ತರಗಿ ಪ್ರತಿಷ್ಠಾನ ಬಾಗಲಕೋಟೆ- ಶಿವಪ್ಪ ಭರಮಪ್ಪ ಅದರಗುಂಚಿ
ಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನ ಹಾವೇರಿ- ಚಕ್ರವರ್ತಿ ಸೂಲಿಬೆಲೆ
ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಮಂಡ್ಯ- ಡಾ. ಬಿ.ವಿ. ರಾಜಾರಾಮ್
ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು- ಡಾ. ಬಸವರಾಜ ಕಲ್ಗುಡಿ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಚಿಕ್ಕಮಗಳೂರು- ನರೇಂದ್ರ ರೈ ದೇರ್ಲ
ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ- ಸರಸ್ವತಿ ಚಿಮ್ಮಲಗಿ
ರನ್ನ ಪ್ರತಿಷ್ಠಾನ ಬಾಗಲಕೋಟೆ- ಡಾ. ನೀಲಗಿರಿ ತಳವಾರ್
ಗುಬ್ಬಿ ವೀರಣ್ಣ ಟ್ರಸ್ಟ್ ತುಮಕೂರು- ಡಾ. ಭೀಮಸೇನ್ ಗಂಗಾವತಿ.


ನಿಮ್ಮ ಕಾಮೆಂಟ್ ಬರೆಯಿರಿ