ಸಿವಿಕ್ ಚಂದ್ರನ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ: ‘ಪ್ರಚೋದನಕಾರಿ ಉಡುಗೆ’ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

ಸಂತ್ರಸೆಯು ಲೈಂಗಿಕವಾಗಿ ಪ್ರಚೋದನೆ ನೀಡುವಂಥ ಉಡುಪು ಧರಿಸಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ನಿಲ್ಲುವುದಿಲ್ಲ ಎಂಬ ವಿವಾದಾತ್ಮಕ ತೀರ್ಪು ಪ್ರಕಟಿಸಿದ್ದಲ್ಲದೇ ಆರೋಪಿ ಸಾಮಾಜಿಕ ಕಾರ್ಯಕರ್ತ ಸಿವಿಕ್‌ ಚಂದ್ರನ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಕೊಝಿಕ್ಕೋಡ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆದೇಶಕ್ಕೆ ಕೇರಳ ಹೈಕೋರ್ಟ್‌ ಬುಧವಾರ ತಡೆ ನೀಡಿದೆ.
ಜಾಮೀನು ಮಂಜೂರು ಮಾಡುವಾಗ ಸೆಷನ್ಸ್‌ ನ್ಯಾಯಾಧೀಶರು ಅಪ್ರಸ್ತುತ ದಾಖಲೆಗಳನ್ನು ಆಧರಿಸಿರುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ನ್ಯಾ. ಕೌಸರ್‌ ಎಡಪ್ಪಗತ್‌ ಅವರು ಹೇಳಿದ್ದಾರೆ.
“ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಸೆಷನ್ಸ್‌ ನ್ಯಾಯಾಧೀಶರು ನ್ಯಾಯವ್ಯಾಪ್ತಿಯನ್ನು ಅಸಮರ್ಪಕವಾಗಿ ಬಳಕೆ ಮಾಡಿದ್ದಾರೆ ಎಂದೆನಿಸುತ್ತದೆ. ಗಣನೀಯ ಸ್ವರೂಪದ ಅಪ್ರಸ್ತುತ ವಸ್ತು, ದಾಖಲೆಗಳನ್ನು ಜಾಮೀನು ನೀಡಲು ಅವಲಂಬಿಸಲಾಗಿದೆ. ಸಂತ್ರಸ್ತೆಯು ಪ್ರಚೋದನಾಕಾರಿ ಉಡುಪು ಧರಿಸಿದ್ದರೆ ಉಲ್ಲೇಖಿತ ಐಪಿಸಿ ಸೆಕ್ಷನ್‌ ಅನ್ವಯಿಸುವುದಿಲ್ಲ ಎಂಬ ಆಕ್ಷೇಪಾರ್ಹ ಆದೇಶವನ್ನು ಸಮರ್ಥಿಸಲಾಗದು. ಹಾಲಿ ಮನವಿ ವಿಲೇವಾರಿಯಾಗುವವರೆಗೆ ಈ ಆದೇಶಕ್ಕೆ ತಡೆ ನೀಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಆರೋಪಿಯ ವಯಸ್ಸನ್ನು ಪರಿಗಣಿಸಿ, ಅರ್ಜಿ ವಿಲೇವಾರಿ ಆಗುವವರೆಗೆ ಅವರನ್ನು ಬಂಧಿಸಬಾರದು” ಎಂದೂ ಆದೇಶದಲ್ಲಿ ಹೈಕೋರ್ಟ್‌ ಸ್ಪಷ್ಟಪಡಿಸಿದೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 354A (ಲೈಂಗಿಕ ಕಿರುಕುಳ) ಮತ್ತು 341 (ತಪ್ಪಾದ ಸಂಯಮ) ಮತ್ತು 354 (ದಾಳಿ ಅಥವಾ ಕ್ರಿಮಿನಲ್ ಬಲದ ಅಡಿಯಲ್ಲಿ ಆರೋಪ ಹೊರಿಸಲಾದ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಕೇರಳ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ರಾಜ್ಯ ಸರ್ಕಾರವು ಸಲ್ಲಿಸಿದ ಮೇಲ್ಮನವಿಯಲ್ಲಿ, ಜಾಮೀನು ಆದೇಶವು “ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳಿಗೆ ವಿರುದ್ಧವಾಗಿದೆ, ಹೀಗಾಗಿ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಭಾರತದ ಸಂವಿಧಾನದ ಅನುಚ್ಛೇದ 21 ರ ಅಡಿಯಲ್ಲಿ ಖಾತರಿಪಡಿಸಲಾದ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಾದಿಸಲಾಗಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement