ಬೆಳಗಾವಿ: ಬೆಳಗಾವಿಯಲ್ಲಿ 20 ದಿನ ಕಳೆದರೂ ಕೈಗೆ ಸಿಗದೆ ಓಡಾಡುತ್ತ ಸ್ಥಳೀಯರ ನಿದ್ದೆಗೆಡಿಸಿರುವ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಸುಸ್ತಾಗಿದ್ದಾರೆ.
ಈ ನಡುವೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು `ಲೈಂಗಿಕ ಆಕರ್ಷಣೆ’ ತಂತ್ರ ಅನುಸರಿಸಲು ಮುಂದಾಗಿದ್ದು, ನಗರ ಸಮೀಪದ ಭೂತರಾಮನಹಟ್ಟಿ ಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರ ತಂದು ಚಿರತೆ ಇರುವ ಜಾಗದ ಹಲವಡೆ ಸಿಂಪಡಿಸಲಾಗಿದೆ. ಅದರ ವಾಸನೆಗೆ ಆಕರ್ಷಿತವಾಗಿ ಚಿರತೆ ಬೋನಿನ ಕಡೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳಗಾವಿ ಜನರ ನಿದ್ದೆಗೆಡಿಸಿರುವ ಈ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳೆದುರೇ ಬೆಳಗಾವಿ ಹಿಂಡಲಗಾ ಮಧ್ಯೆ ಇರುವ ಕ್ಲಬ್ ರಸ್ತೆಯಿಂದ ಗಾಲ್ಫ್ ಮೈದಾನಕ್ಕೆ ನುಗ್ಗಿತ್ತು. ಚಿರತೆ ಸೆರೆ ಹಿಡಿಯಲು ಆನೆಗಳನ್ನು ಕೂಡ ಕರೆಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಯಾವುದು ಫಲ ನೀಡದ ಹಿನ್ನೆಲೆಯಲ್ಲಿ ಬೋನಿಗೆ ಮತ್ತು ಹಲವೆಡೆ ಹೆಣ್ಣು ಚಿರತೆಯ ಮೂತ್ರವನ್ನು ಸಿಂಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ