ಅಯೋಧ್ಯಾ ರಾಮ ಮಂದಿರದ ಗರ್ಭಗುಡಿಯ ಮೊದಲ ಚಿತ್ರ ಹಂಚಿಕೊಂಡ ರಾಮ ಜನ್ಮಭೂಮಿ ಟ್ರಸ್ಟ್

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶುಕ್ರವಾರ, ಆಗಸ್ಟ್ 26 ರಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಟ್ವಿಟರ್‌ನಲ್ಲಿ ರಾಮ ಮಂದಿರದ ಉದ್ದೇಶಿತ ‘ಗರ್ಭ ಗುಡಿ’ದ ಚಿತ್ರಗಳನ್ನು ಹಂಚಿಕೊಂಡಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೂನ್‌ನಲ್ಲಿ ದೇವಾಲಯದ ಗರ್ಭಗುಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ ಗರ್ಭಗುಡಿಯು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 5, 2020 ರಂದು ಭೂಮಿಪೂಜೆ ನೆರವೇರಿಸಿ ದೇವಾಲಯದ ಶಂಕುಸ್ಥಾಪನೆ ಮಾಡಿದ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರದ ಕೆಲಸ ಪ್ರಾರಂಭವಾಯಿತು. ಐದು ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಬೆಳಿಗ್ಗೆ ಸೂರ್ಯೋದಯದ ಸೂರ್ಯ ರಶ್ಮಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನ ಮುಖದ ಮೇಲೆ ಬೀಳಬೇಕು. ಈ ದಿಸೆಯಲ್ಲಿ ಖಗೋಳ ವಿಜ್ಞಾನಿಗಳನ್ನೂ ಬಳಸಿಕೊಂಡು ಗರ್ಭಗುಡಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಉಳಿದಂತೆ ರಾಮಜನ್ಮಭೂಮಿ ಸಂಕೀರ್ಣದ 50 ಎಕರೆ ಪ್ರದೇಶದಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡಲಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪ ಮಾಡಲಾಗಿರುವ ಗಿಡಗಳನ್ನು ಈ ಉದ್ಯಾನವನದಲ್ಲಿ ನೆಡಲಾಗುತ್ತದೆ. ರಾಮಜನ್ಮಭೂಮಿ ಉದ್ಘಾಟನೆ ಆಗುವ ವೇಳೆ ಎಷ್ಟು ಪ್ರಮಾಣದ ಗಿಡಗಳನ್ನು ಇಲ್ಲಿ ನೆಡಲು ಸಾಧ್ಯವಾಗುತ್ತದೆ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

5 / 5. 3

ಶೇರ್ ಮಾಡಿ :

2 Responses

  1. geek

    ರಾಮಜನ್ಮಭೂಮಿ ವಿವಾದದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯವರು, ರಾಮಮಂದಿರ ನಿರ್ಮಾಣವಾಗುವ ಹೊತ್ತಿಗೆ ದೇಶದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಿ, ಜನರ ಮೇಲೆ ಅಪಾರ ಪ್ರಮಾಣದ ಸಾಲದ ಹೊರೆಯನ್ನು ಹೊರಿಸಿ ಅಧಿಕಾರ ಬಿಟ್ಟು ಹೋಗುತ್ತಾರೆ. ದೇಶದ ಸಂಪತ್ತನ್ನು ಅಪರಿಮಿತವಾಗಿ ಲೂಟಿ ಹೊಡೆಯಲು ಬಿಟ್ಟು ಅದು ಜನರ ಕಣ್ಣಿಗೆ ಕಾಣದಂತೆ ಮಣ್ಣೆರಚಲು ರಾಮಮಂದಿರದ ಚಿತ್ರಗಳನ್ನು ಮಾಧ್ಯಮಗಳಿಗೆ ಹಂಚಿ ದೇಶದ ಏರುತ್ತಿರುವ ಮೋದಿ ಸರಕಾರದ ಅಪರಿಮಿತ ಸಾಲದ ಬಗ್ಗೆ ಜನರು ನೋಡದಂತೆ ಮಂಕುಬೂದಿ ಎರಚುತ್ತಿದ್ದಾರೆ. ಈ ಕಾಮೆಂಟ್ ಗೆ ಯಾವ ಬಿಜೆಪಿಯವನೂ ಉತ್ತರ ಕೊಡುವ ಗೋಜಿಗೆ ಹೋುಗುವುದಿಲ್ಲ.

  2. Prashant

    Houdu intaha prashnege BJP avara bali uttaravilla madalu sakashtu abhivruddhi karyagalu baki ulidive avannu noduttare.

ನಿಮ್ಮ ಕಾಮೆಂಟ್ ಬರೆಯಿರಿ

advertisement