ಪತ್ನಿ ಕಾಟಕ್ಕೆ ಬೇಸತ್ತು ಒಂದು ತಿಂಗಳಿನಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆಯೇ ವಾಸಿಸುತ್ತಿರುವ ಈ ಪತಿ ಮಹಾಶಯ…!

ಲಕ್ನೋ: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಪ್ರಸಿದ್ಧ ನಾಣ್ಣುಡಿ ಇದೆ. ಆದರೆ ಇಲ್ಲೊಬ್ಬ ಪತಿರಾಯ ಮಾತ್ರ ಪತ್ನಿಯ ಜತೆ ಜಗಳವಾಡಿಕೊಂಡು ತಾಳೆಯ ಮರ ಏರಿದ್ದಾನೆ
ಪತ್ನಿಯ ಜಗಳದಿಂದ ಬೇಸತ್ತ ವ್ಯಕ್ತಿಯೊಬ್ಬ ಒಂದು ತಿಂಗಳಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆ ವಾಸವಾಗಿದ್ದಾನೆ. ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಕೋಪಗಂಜ್ ಪ್ರದೇಶದಲ್ಲಿ ನಡೆದಿದೆ. ರಾಮ್‌ ಪ್ರವೇಶ ಹೆಂಡತಿ ಪ್ರತಿದಿನ ತನಗೆ ಥಳಿಸುತ್ತಿದ್ದಳು ಎಂದು ಆತ ಹೇಳಿಕೊಂಡಿದ್ದಾನೆ. ನಿರಂತರ ಜಗಳದಿಂದ ಬೇಸತ್ತ ರಾಮ್ ತಾಳೆ ಮರದ ಮೇಲೆ ವಾಸಿಸಲು ನಿರ್ಧರಿಸಿದ.
ರಾಮ್‌ ಮೇಲಿನಿಂದ ಹಗ್ಗ ಬಿಡುತ್ತಿದ್ದಂತೆ ಈತನ ಕುಟುಂಬ ಸದಸ್ಯರು ತಿನ್ನುವ ವಸ್ತುಗಳನ್ನು ಹಗ್ಗದಲ್ಲಿ ಕಟ್ಟಿ ಅವನಿಗೆ ಆಹಾರ ಮತ್ತು ನೀರನ್ನು ಒದಗಿಸುತ್ತಾರೆ.ರಾಮ ತಡರಾತ್ರಿ ಮರದಿಂದ ಕೆಳಗಿಳಿದು ತನ್ನ ದೈನಂದಿನ ಚಟುವಟಿಕೆಗಳನ್ನು ಮುಗಿಸಿದ ನಂತರ ಮತ್ತೆ ಮರ ಏರುತ್ತಾನೆ ಎಂದು ಆ ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮಸ್ಥರ ಪ್ರಕಾರ, ರಾಮ್ ಪ್ರವೇಶ್ ರಾತ್ರಿಯ ಸಮಯದಲ್ಲಿ ಮರದಿಂದ ಕೆಳಗಿಳಿದು ಮಲವಿಸರ್ಜನೆ ಮಾಡಿದ ನಂತರ ಮರಕ್ಕೆ ಏರುತ್ತಾನೆ.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

ರಾಮ್‌ ಮರದ ಮೇಲೆ ವಾಸಿಸುತ್ತಿರುವುದಕ್ಕೆ ಆ ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಹಿಳೆಯರು, ರಾಮ್ ಮರದ ಮೇಲೆ ವಾಸಿಸುತ್ತಿರುವುದು ತಮ್ಮ ಖಾಸಗಿತನಕ್ಕೆ ತೊಂದರೆಯಾಗಿದೆ ಎಂದು ದೂರಿದ್ದಾರೆ. ಮರವು ಸುಮಾರು 100 ಅಡಿ ಎತ್ತರದಲ್ಲಿ ನೆಲೆಸಿದ್ದು, ಸಮೀಪದಲ್ಲೇ ಕೆರೆ ಇರುವುದರಿಂದ ಮಹಿಳೆಯರು ಹಾಗೂ ಗ್ರಾಮಸ್ಥರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಿದೆ. ತಮ್ಮ ಮನೆಯ ಅಂಗಳಗಳೆಲ್ಲ ಆತನಿಗೆ ಕಾಣಿಸುತ್ತಿವೆ ಎಂದು ಆರೋಪಿಸಿದ್ದಾರೆ.ರಾಮನನ್ನು ಮರದಿಂದ ಕೆಳಗಿಳಿಸಲು ಪ್ರಯತ್ನಿಸಿದಾಗ ಅವನು ಇಟ್ಟಿಗೆಗಳನ್ನು ಎಸೆದಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅವರು ರಾಮ್ ಪ್ರವೇಶ್‌ಗೆ ಕೆಳಗೆ ಬರಲು ಹೇಳಿದರೂ ಆತ ನಿರಾಕರಿಸಿದ್ದಾನೆ. ಕೊನೆಗೆ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ಬರಸಾತ್‌ಪುರದ ಗ್ರಾಮದ ಮುಖ್ಯಸ್ಥ ದೀಪಕ್ ಅವರು ಭೇಟಿ ನೀಡಿ ವೀಡಿಯೊ ಮಾಡಿ ಪೊಲೀಸರಿಗೆ ಕಳುಹಿಸಿದ್ದಾರೆ.
ಆದರೆ, ತನ್ನ ಸೊಸೆ ತನ್ನ ಪತಿಯನ್ನು ಥಳಿಸುತ್ತಾಳೆ ಎಂಬ ರಾಮ್‌ನ ತಂದೆ ವಿಂಸುರಾಂ ಹೇಳಿಕೆಗೆ ವಿರುದ್ಧವಾಗಿ, ರಾಮ್ ಮತ್ತು ಅವನ ತಂದೆಯ ನಡುವೆ ನಿರಂತರ ಮನಸ್ತಾಪವಿದೆ ಎಂದು , ಇದರಿಂದಾಗಿ ಆತ 25 ದಿನಗಳಿಂದ ಮರದ ಮೇಲೆಯೇ ಮನೆ ಮಾಡಿದ್ದಾನೆ ಎಂದು ಗ್ರಾಮಸ ಮುಖ್ಯಸ್ಥ ದೀಪಕ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement