ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 320 ಹುದ್ದೆಗಳಿಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ. ಫಾರ್ಮಸಿ ಆಫೀಸರ್​, ಕಿರಿಯ ಆರೋಗ್ಯ ಸಹಾಯಕ ಸೇರಿದಂತೆ ಒಟ್ಟು 320 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್​ 28ರ ಒಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀಧರ್​, ಬಳ್ಳಾರಿ ಮತ್ತು ವಿಜಯನಗರದಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಮತ್ತು ಬ್ಯಾಕ್​ಲಾಗ್​ ಹುದ್ದೆಗಳು ಇದಾದೆ.
ಸಂಸ್ಥೆಯ ಹೆಸರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆಯ ಹೆಸರು: ಫಾರ್ಮಸಿ ಅಧಿಕಾರಿ, ಕಿರಿಯ ಆರೋಗ್ಯ ಸಹಾಯಕ
ಉದ್ಯೋಗ ಸ್ಥಳ: ಕರ್ನಾಟಕ
ವೇತನ: 23,500 – 83,900 ರೂ. ಪ್ರತಿ ತಿಂಗಳು

320 ಹುದ್ದೆಗಳ ಮಾಹಿತಿ ಇಂತಿದೆ:
ಮನಶಾಸ್ತ್ರಜ್ಞ: 3 ಹುದ್ದೆಗಳು – ಸೈಕಲಾಜಿಯಲ್ಲಿ ಎಎ, ಎಂಎಸ್ಸಿ
ಸೈಕಿಯಾಟ್ರಿಸ್ಟ್​ ಸೋಶಿಯಲ್​ ವರ್ಕ್​ : 1 ಹುದ್ದೆ- ಸೋಷಿಯಲ್​ ವರ್ಕ್​ನಲ್ಲಿ ಎಂಎ
ಮೈಕ್ರೋಬಾಯಾಲಾಜಿಸ್ಟ್​​: 6 ಹುದ್ದೆಗಳು -ಮೈಕ್ರೋಬಯಾಲಾಜಿಯಲ್ಲಿ ಎಂಎಸ್ಸಿ ಪದವಿ
ಕೀಟಶಾಸ್ತ್ರ ಸಹಾಯಕ: 1 ಹುದ್ದೆ -ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ
ಪಿಜಿಯೋಥೆರಪಿಸ್ಟ್​: 5 ಹುದ್ದೆಗಳು -ಪಿಜಿಯೋಥೆರಪಿಸ್ಟ್​ನಲ್ಲಿ ಪದವಿ
ಡೆಂಟಲ್​ ಮೆಕಾನಿಕ್: 3 ಹುದ್ದೆಗಳು – ಡೆಂಟಲ್​ ಮೆಕಾನಿಕ್​ನಲ್ಲಿ ಪ್ರಮಾಣ ಪತ್ರ
ಕಿರಿಯ ಲ್ಯಾಬ್​ ಟೆಕ್ನಿಶಿಯನ್​: 54 ಹುದ್ದೆಗಳು -ಲಾಬೋರೆಟರಿ ಟೆಕ್ನಿಶಿಯನ್​ನಲ್ಲಿ ಎರಡು ವರ್ಷದ ಡಿಪ್ಲೊಮಾ
ನೇತ್ರಾಧಿಕಾರಿ: 15 ಹುದ್ದೆಗಳು -ನೇತ್ರ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪದವಿ
ಫಾರ್ಮಸಿಸ್ಟ್​​: 98 ಹುದ್ದೆಗಳು – ಫಾರ್ಮಸಿ ಡಿಪ್ಲೊಮಾ
ಇಸಿಜಿ ಟೆಕ್ನಿಷಿಯನ್​: 5 ಹುದ್ದೆಗಳು-ಕಾರ್ಡಿಯಕ್​ ಕೇರ್​ ಟೆಕ್ನಾಲಾಜಿಯಲ್ಲಿ ಬಿಎಸ್ಸಿ
ಡಯಾಲಿಸಿಸ್​ ಟೆಕ್ನಿಷಿಯನ್​: 2 ಹುದ್ದೆಗಳು-ಡಯಾಲಿಸಿಸ್​ ಟೆಕ್ನಾಲಾಜಿಯಲ್ಲಿ ಡಿಪ್ಲೊಮಾ
ಕಿರಿಯ ಆರೋಗ್ಯ ಸಹಾಯಕರು (ಮಹಿಳೆ): 126 ಹುದ್ದೆಗಳು-ನರ್ಸಿಂಗ್​ ಪದವಿ
ಎಲೆಕ್ಟ್ರಿಷಿಯನ್:​ 2 ಹುದ್ದೆಗಳು-ಎಲೆಕ್ಟ್ರಿಕಲ್​ ಇಂಜಿನಿಯರ್​ ಕೋರ್ಸ್​ ಪ್ರಮಾಣ ಪತ್ರ
ವಯೋಮಿತಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.ವಯೋಮಿತಿ ಸಡಿಲಿಕೆ: 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷಗಳು
ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ: 29 ಆಗಸ್ಟ್​​ ​ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಸೆಪ್ಟೆಂಬರ್​ 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್​ 2022

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು: 700 ರೂ.
2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 400 ರೂ
ಮಾಜಿ ಸೈನಿಕ ಅಭ್ಯರ್ಥಿಗಳು: 200 ರೂ.
ಪ.ಜಾ, ಪ.ಪಂ ಅಭ್ಯರ್ಥಿಗಳು: 100 ರೂ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಸಂದರ್ಶನ

ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್‌ ಮಾಡಿ- Notification for recruitment of Para-medical posts in Kalyana-Karnataka Region
ಅಧಿಕೃತ ವೆಬ್‌ಸೈಟ್: karunadu.karnataka.gov.in

 

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement