ಶಿಕ್ಷಣ ಸಂಸ್ಥೆಗಳು ಸೇರಿದಂತೆ ಈ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ : ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತೆ ಮಾಸ್ಕ್‌ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷದ ಮೇಲಿನ ಮಕ್ಕಳು ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಹೇಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಲಾಡ್ಜ್‌, ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌, ಪಬ್‌, ಛತ್ರಗಳು, ಸಿನಿಮಾ ಹಾಲ್‌, ವಿದ್ಯಾಸಂಸ್ಥೆಗಳು, ಸಾರ್ವಾಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್‌, ಮೆಟ್ರೋ, ರೈಲು, ಶಾಪಿಂಗ್‌ ಮಾಲ್‌ಗಳು, ಮಾರುಕಟ್ಟೆಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಲ್ಲಿ ಹೇಳಿದೆ. ಉಲ್ಲೇಖ ಮಾಡಿದೆ.

ಮಾರ್ಗಸೂಚಿಗಳು
ಹಬ್ಬಗಳನ್ನು ಹೊರಾಂಗಣದಲ್ಲಿ ಆಚರಿಸುವುದು ಸೂಕ್ತ
1 ಮೀಟರ್​ ಸಾಮಾಜಿಕ ಅಂತರ ಪಾಲನೆ
ಕಡ್ಡಾಯವಾಗಿ ಮಾಸ್ಕ್​ ಧರಿಸುವುದು
ಸೂಚಿತ ಸ್ಥಳಗಳಲ್ಲಿ ಹ್ಯಾಂಡ್​ ಸ್ಯಾನಿಟೈಸರ್​ಗಳ ಲಭ್ಯತೆ
ಪ್ರವೇಶ ದ್ವಾರಗಳಲ್ಲಿ ಥರ್ಮಲ್​ ಸ್ಕ್ಯಾನಿಂಗ್​ ವ್ಯವಸ್ಥೆ
ಕೊರೊನಾ ಲಸಿಕೆ ಪಡೆದವರು ಭಾಗವಹಿಸುವಂತೆ ಪ್ರೇರೇಪಿಸುವುದು
ಸೋಂಕಿನ ಲಕ್ಷಣಗಳನ್ನು ಹೊಂದಿದವರನ್ನು ಪ್ರತ್ಯೇಕಿಸಿ ಅಗತ್ಯ ಚಿಕಿತ್ಸೆ ಪಡೆಯಲು ರೆಫರ್​ ಮಾಡುವುದು
ಪ್ರಾರ್ಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವುದು

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement