ಆಸ್ಟ್ರೇಲಿಯಾದಲ್ಲಿ ಭೀಕರ ಅಪಘಾತದಲ್ಲಿ ಜನಪ್ರಿಯ ಭಾರತೀಯ ಗಾಯಕನ ಸಾವು

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಮೆಲ್ಬೋರ್ನ್ ಬಳಿ ಕಿಯಾ ಸೆಡಾನ್‌ನಿಂದ ಉಂಟಾದ ಮೂರು ವಾಹನಗಳ ಡಿಕ್ಕಿಯಲ್ಲಿ ಇಬ್ಬರು ಮಕ್ಕಳ ತಂದೆ 42 ವರ್ಷದ ಗಾಯಕ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ.
ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್‌ನಲ್ಲಿರುವ ಬುಲ್ಲಾ-ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಮಧ್ಯಾಹ್ನ 3:30 ಕ್ಕೆ ಈ ಅಪಘಾತ ನಡೆದಿದ್ದು, ಜೀಪಿನೊಳಗಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸೆಡಾನ್‌ನ 23 ವರ್ಷದ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೈಲಿ ಮೇಲ್ ವರದಿಯ ಪ್ರಕಾರ, ನಿರ್ವೈರ್ ಸಿಂಗ್ ಅವರು ತಮ್ಮ ಗಾಯನ ವೃತ್ತಿಯನ್ನು ಮುಂದುವರಿಸಲು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು ಮೈ ಟರ್ನ್ ಎಂಬ ಆಲ್ಬಮ್​ನ ತೇರೆ ಬಿನಾ ಎಂಬ ಹಾಡಿನ ಮೂಲಕ ನಿರ್ವೈರ್ ಸಿಂಗ್ ಬಹು ಜನಪ್ರಿಯತೆ ಗಳಿಸಿದ್ದರು. ದರ್ದಾ-ಎ-ದಿಲ್, ಜೆ ರುಸ್ಗಿ, ಫೆರಾರಿ ಡ್ರೀಮ್ ಮತ್ತು ಹಿಕ್ ಥೋಕ್ ಕೆ ಅವರ ಇತರ ಹಿಟ್‌ ಆಲ್ಬಮ್​ಗಳಾಗಿದ್ದವು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರ ಸಾವು ಪಂಜಾಬಿ ಗೀತೆಗಳ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ.
ಪಂಜಾಬ್‌ನ ಕುರಾಲಿ ಎಂಬ ಪ್ರದೇಶ ಗಾಯಕ ನಿರ್ವೈರ್ ಸಿಂಗ್ ಅವರ ಮೂಲ. ಅವರು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅವರು ಅಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದ್ದರಲ್ಲದೇ ಸ್ನೇಹಿತರ ಜೊತೆಗೂಡಿ ಸಂಗೀತ ಲೋಕದಲ್ಲಿಯೂ ಜನಪ್ರಿಯತೆ ಗಳಿಸಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement