ಬಟ್ಟೆ ಶೋ ರೂಂಗೆ ನುಗ್ಗಿ ಬಿಜೆಪಿ ನಾಯಕನ ಗುಂಡಿಟ್ಟು ಹತ್ಯೆ ಮಾಡಿದ ಐವರು ದುಷ್ಕರ್ಮಿಗಳು

ಗುರ್‌ಗಾಂವ್ : ಹರ್ಯಾಣದ ಬಿಜೆಪಿ ನಾಯಕ ಸುಖ್ಬೀರ್ ಖಟನಾ ಾವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಗುರ್‌‌ಗಾಂವ್ ಬಟ್ಟೆ ಶೋ ರೂಂ ಒಳಗೆಡೆ ಇದ್ದ ಸುಖ್ಬೀರ್ ಖಟನಾ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ನೇರವಾಗಿ ಶೋ ರೂಂ ಒಳಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ.
ಸುಖ್ಬೀರ್ ಗನ್‌ಮ್ಯಾನ್ ಕೂಗಳತೆ ದೂರದಲ್ಲಿರುವಾಗಲೇ ಈ ಘಟನೆ ನಡೆದಿದೆ. ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ ಬಟ್ಟೆ ಅಂಗಡಿಯಲ್ಲಿದ್ದ ಹಲವರು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರಿಗೆ ಗುಂಡು ತಗುಲಿದೆ. ತೀವ್ರವಾಗಿ ಗಾಯಗೊಂಡ ಸುಖ್ಬೀರ್ ಖಟನಾ ಆಸ್ಪತ್ರೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ.

ಗುರುದ್ವಾರ ರಸ್ತೆಯಲ್ಲಿರುವ ಸದಾರ್ ಬಜಾರ್ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ಗುಂಡಿನ ಶಬ್ದ ಕೇಳಿಸುತ್ತಲೆ ಬಟ್ಟೆ ಶೋ ರೂಂ ಒಳಗೆ ನಿಂತಿದ್ದ ಗನ್‌ಮ್ಯಾನ್ ನಾಯಕ ಸುಖ್ಬೀರ್ ಅವರನ್ನು ರಕ್ಷಿಸಲು ಓಡಿದ್ದಾರೆ. ಆದರೆ ಐವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಯಕ ಸುಖ್ಬೀರ್ ಕಟಾನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆ ಒಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಪೂರ್ಣ ಶೋ ರೂಂ ವಶಕ್ಕೆ ಪಡೆದಿದ್ದಾರೆ. ಶೋ ರೂಂ ಒಳಗಿನ ಹಾಗೂ ಬಜಾರ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಗುರುದ್ವಾರ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಪೊಲೀಸರು ತೀವ್ರ ತಪಾಸಣೆ ಮಾಡುತ್ತಿದ್ದಾರೆ.
ಸುಖ್ಬೀರ್ ಖಟನಾ ಹಿಂದೂ ಪರ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದರು. ಈ ಹಿಂದೆ ಕೆಲವು ಬಾರಿ ಬೆದರಿಕೆಗಳು ಬಂದಿತ್ತು. ಈ ಘಟನೆಗೆ ಕಾರಣ ಗೊತ್ತಾಗಿಲ್ಲ. ಸುಖ್ಬೀರ್, ರಿಥೋಜ್ ಜಿಲ್ಲಾ ಪಂಚಾಯತಕ್ಕೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement