ಹೀಗೂ ನಡೆಯಿತು ಮದುವೆ: ಮದುವೆಯಾಗಲು ನಿರಾಕರಿಸಿ ಓಡಿಹೋದ ವರನನ್ನು ಚೇಸ್‌ ಮಾಡಿ ಹಿಡಿದು ವಾಪಸ್‌ ಕರೆತಂದು ಮದುವೆಯಾದ ವಧು | ವೀಕ್ಷಿಸಿ

ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊದಲ್ಲಿ ಮದುವೆಯ ದಿನದಂದು ವಧುವು ಓಡಿಹೋದ ವರನನ್ನು ಹೇಗೆ ಬೆನ್ನೆಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ. ಮದುವೆ ಕಾರ್ಯಕ್ರಮದ ಕೊನೆಯ ಗಳಿಗೆಯಲ್ಲಿ ವರನು ಆಕೆಯನ್ನು ಮದುವೆಯಾಗಲು ನಿರಾಕರಿಸಿ ಓಡಿ ಹೋದ ನಂತರ ವಧುವೇ ವರನನ್ನು ಚೇಸ್ ಮಾಡಿ ಕರೆತಂದು ಮದುವೆಯಾದ ಘಟನೆ ನಡೆದಿದೆ.
ಇದು ಬಿಹಾರದ ನವಾಡದ ಭಗತ್ ಸಿಂಗ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ವೈರಲ್ ಆದ ವೀಡಿಯೊ ಕ್ಲಿಪ್‌ನಲ್ಲಿ, ಮದುವೆ ಕಾರ್ಯಕ್ರಮದಿಂದ ಓಡಿಹೋದ ವರ ಮಾರುಕಟ್ಟೆಯಲ್ಲಿದ್ದಾನೆಂದು ಗೊತ್ತಾದ ನಂತರ ವಧುವೆ ವರನನ್ನು ವಾಪಸ್‌ ಕರೆತರಲು ಓಡಿದ್ದಾಳೆ. ನಂತರ ವರನನ್ನು ಹಿಡಿದು ತನ್ನನ್ನು ಮದುವೆಯಾಗಿ ಎಂದು ಬೇಡಿಕೊಂಡಿದ್ದಾಳೆ. ಈ ದೃಶ್ಯವು ಯಾವುದೋ ಬಾಲಿವುಡ್ ಚಲನಚಿತ್ರದಂತೆ ಕಾಣುತ್ತದೆ, ಆದರೆ ಇದು ನಡೆದ ಘಟನೆಯಾಗಿದೆ.

ಈ ಘಟನೆಯು ಬಿಹಾರದ ನವಾದಾದಲ್ಲಿರುವ ಭಗತ್ ಸಿಂಗ್ ಚೌಕ್‌ನಲ್ಲಿ ಸಂಭವಿಸಿದೆ. ವಧುವಿನ ಕುಟುಂಬ ಮೂರು ತಿಂಗಳ ಹಿಂದೆ ಈ ಮದುವೆಯನ್ನು ನಿಗದಿ ಮಾಡಿತ್ತು ಎಂದು ವರದಿಗಳು ತಿಳಿಸಿವೆ. ಟೈಮ್ಸ್ ನೌ ವರದಿಯ ಪ್ರಕಾರ, ಈ ಯುವತಿ ಮಾಹುಲಿ ಗ್ರಾಮದವಳಾಗಿದ್ದಾಳೆ. ವರ ಮೆಹ್ಕರ್​ ಗ್ರಾಮದವನು.
ಇವರಿಬ್ಬರ ಮದುವೆ ಮೂರು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು ಎಂದು ವರದಿಯಾಗಿದೆ. ಬಾಲಕಿಯ ಮನೆಯವರು ವರದಕ್ಷಿಣೆಯಾಗಿ ಬೈಕ್ ಹಾಗೂ 50 ಸಾವಿರ ರೂ.ಕೊಟ್ಟಿದ್ದರು. ಆದಾಗ್ಯೂ, ವರನು ಮದುವೆ ವಿಳಂಬ ಮಾಡುತ್ತಲೇ ಇದ್ದ. ಕೊನೆಗೆ ಮದುವೆ ಕಾರ್ಯಕ್ರಮದಿಂದಲೇ ಪಲಾಯನ ಮಾಡಿದ್ದಾನೆ. ತನ್ನನ್ನು ಮದುವೆಯಾಗಲು ನಿರಾಕರಿಸಿ ಓಡಿದ ವರನನ್ನು ಹಿಂಬಾಲಿಸಿ ಓಡಿದ ವಧು ತನ್ನನ್ನು ಮದುವೆಯಾಗುವಂತೆ ಅಂಗಲಾಚಿದ್ದಾಳೆ.

ಪ್ರಮುಖ ಸುದ್ದಿ :-   ಪಾಕ್‌ ಸರ್ಕಾರದ ಮಾತನ್ನೇ ಕೇಳುತ್ತಿಲ್ಲ ಸೇನೆ...! ಭಾರತದ ಜೊತೆ ಕದನ ವಿರಾಮ ಒಪ್ಪಂದ ತಿರಸ್ಕರಿಸಿದ ಪಾಕಿಸ್ತಾನಿ ಸೇನೆ ; ಮತ್ತೆ ದಾಳಿ...!

ವರದಕ್ಷಿಣೆ ಕೊಟ್ಟ ನಂತರ ಮದುವೆ ಮುಂದೂಡುವಂತೆ ಒತ್ತಾಯಿಸುತ್ತಿದ್ದ ವರ ಕೊನೆಗೆ ಮದುವೆ ದಿನಾಂಕದಂದು ತನಗೆ ಈ ಮದುವೆಯೇ ಬೇಡವೆಂದು ಓಡಿಹೋದ ಎಂದು ಕುಟುಂಬದವರು ಹೇಳಿದ್ದಾರೆ. ನಂತರ ವರನನ್ನು ಹಿಂಬಾಲಿಸಿ ವಧು ಹೋಗಿದ್ದಾಳೆ. ನಂತರ ಆತ ಮಾರ್ಕೆಟ್​ನಲ್ಲಿ ಇದ್ದಾನೆಂದು ಗೊತ್ತಾಗಿ ಆತನ ಹಿಂಬಾಲಿ ಓಡಿದ ವಧು ಹಾಗೂ ಅಕೆಯ ಕಡೆಯವರು ವರನನ್ನು ಹಿಡಿದಿದ್ದಾರೆ. ನಂತರ ಅವಳೇ ಅವನನ್ನು ವಾಪಸ್‌ ಕರೆತಂದಿದ್ದಾಳೆ. ಅಷ್ಟರಲ್ಲಿ ವಿಷಯ ಪೊಲೀಸರಿಗೂ ಗೊತ್ತಾಗಿ ಎರಡೂ ಕಡೆಯ ಕುಟುಂಬದವರನ್ನು ಠಾಣೆಗೆ ಕರೆದು ಇಬ್ಬರಿಗೂ ಸಲಹೆ ನೀಡಿದ ಮೇಲೆ ದೇವಸ್ಥಾನದಲ್ಲಿ ಮದುವೆ ನಡೆದಿದೆ. ಅಂತೂ ಈ ಯುವಕ-ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಯುದ್ಧ ನಿಲ್ಲಿಸುವಂತೆ ಅಮೆರಿಕಕ್ಕೆ ಪಾಕಿಸ್ತಾನ ಗೋಗರೆದಿದ್ದೇಕೆ..? ಭಾರತದ ಬ್ರಹ್ಮೋಸ್‌ ಶಕ್ತಿಗೆ ಪಾಕ್‌ ಪರಮಾಣು ಶಸ್ತ್ರಾಗಾರದ ಬಳಿಯ ಮಿಲಿಟರಿ ನೆಲೆಗಳು ಧ್ವಂಸ ; ಪಾಕ್‌ ಕಂಗಾಲು...!

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement