ಕಡಲ ಕಿನಾರೆಗೆ ಬಂದ ಬರೋಬ್ಬರಿ 25 ಅಡಿ ಉದ್ದದ ಬೃಹತ್‌ ತಿಮಿಂಗಿಲ; ವೀಡಿಯೋ ವೈರಲ್

ಗುರುವಾರ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಕಡಲತೀರದಲ್ಲಿ ನೀಲಿ ತಿಮಿಂಗಿಲವೊಂದು ದಡದಲ್ಲಿ ನಿರ್ಜೀವ ಸ್ಥಿತಿಯಲ್ಲಿ ಕಂಡುಬಂದಿದೆ. ಐದು ಟನ್ ತೂಕದ 25 ಅಡಿ ಉದ್ದದ ಈ ಬೃಹತ್‌ ಜೀವಿಯ ಮೃತದೇಹವನ್ನು ಮರಳಿನ ಮೇಲೆ ನೋಡಿದ ಅಲ್ಲಿನ ಜನರಿಗೆ ಈ ಘಟನೆ ಅಪರೂಪದ ದೃಶ್ಯವಾಗಿತ್ತು. ಬಂಗಾಳಕೊಲ್ಲಿಯಲ್ಲಿ ಇಂತಹ ತಿಮಿಂಗಿಲಗಳು ಅಪರೂಪವಾಗಿದ್ದು, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ … Continued

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಣದಿಂದ ಮಗನ ಮದುವೆ ಮಾಡಿದ್ದೇನೆ, ಮನೆ ಕಟ್ಟಿದ್ದೇನೆ: ಬಿಜೆಪಿ ಸಂಸದನ ಹೇಳಿಕೆ ವೈರಲ್‌…!

ಹೈದರಾಬಾದ್ : ತೆಲಂಗಾಣ ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರದ್ದು ಎನ್ನಲಾದ ವೀಡಿಯೊ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವೀಡಿಯೊದಲ್ಲಿ ಸೋಯಮ್ ಬಾಪುರಾವ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ಯೋಜನೆಯ ಹಣದಲ್ಲಿ (ಸರ್ಕಾರದ ಹಣ) ಜನಪರ ಅಭಿವೃದ್ಧಿ ಕಾರ್ಯ ಮಾಡುವ ಬದಲು ತನಗಾಗಿ ಮನೆ ನಿರ್ಮಿಸಿಕೊಂಡಿದ್ದೇನೆ ಹಾಗೂ ಮಗನ ಮದುವೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವ … Continued

ವೀಡಿಯೊ : ನೋಡನೋಡುತ್ತಲೇ ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದ ಚತುಷ್ಪಥ ಸೇತುವೆ | ವೀಕ್ಷಿಸಿ

ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ಅವರು ಶಂಕುಸ್ಥಾಪನೆ ಮಾಡಿದ 3160 ಮೀಟರ್ ಉದ್ದದ ಸೇತುವೆಯ ಅಡಿಪಾಯ ಭಾನುವಾರ ಸಂಜೆ ಎರಡನೇ ಬಾರಿಗೆ ಕುಸಿದಿದೆ. ಸ್ಥಳೀಯರು ಸೇತುವೆ ಕುಸಿಯುತ್ತಿರುವ ವೀಡಿಯೊಗಳನ್ನು ಸೆರೆಹಿಡಿದಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಆಗುವಾನ್-ಸುಲ್ತಂಗಂಜ್ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ಬಿದ್ದುಹೋಯಿತು. ನಿತೀಶಕುಮಾರ ಅವರ ಕನಸಿನ ಯೋಜನೆಯಾಗಿದ್ದ 1,710 ಕೋಟಿ ರೂಪಾಯಿ ವೆಚ್ಚದ ಸೇತುವೆಯ ಸುಮಾರು … Continued

ಮದುವೆಯಾದ ನಟ ನರೇಶ-ಪವಿತ್ರ ಲೋಕೇಶ:‌ ವೀಡಿಯೊ ವೈರಲ್

ಹೈದರಾಬಾದ್: ವರ್ಷದ ಆರಂಭದಲ್ಲಿ ಶೀಘ್ರದಲ್ಲೇ ಹೊಸ ಜೀವನ ಆರಂಭಿಸುತ್ತೇವೆ ಎಂದು ಹೇಳಿದ್ದ ತೆಲುಗು ನಟ ನರೇಶ – ಪವಿತ್ರ ಲೋಕೇಶ ಈಗ ಮದುವೆಯಾಗಿದ್ದಾರೆ. ನರೇಶ್‌ ಅವರಿಗೆ ಇದು 4ನೇ ಮದುವೆ, ಪವಿತ್ರ ಲೋಕೇಶ ಅವರಿಗೆ ಇದು 3ನೇ ಮದುವೆಯಾಗಿದೆ. ಶುಕ್ರವಾರ, ಆತ್ಮೀಯ ಸಮಾರಂಭದಲ್ಲಿ ಇವರಿಬ್ಬರು ವಿವಾಹವಾದರು ಹಾಗೂ ನರೇಶ ಅವರು ತಮ್ಮ ವಿವಾದ ವೀಡಿಯೊವನ್ನು ಟ್ವಿಟರಿನಲ್ಲಿ … Continued

ಸ್ಕೂಟರಿನ ಮುಂಭಾಗದೊಳಗೆ ಅಡಗಿಕೊಂಡಿದ್ದ ಮಾರಣಾಂತಿಕ ದೊಡ್ಡ ನಾಗರ ಹಾವನ್ನು ಹೇಗೆ ಹೊರತೆಗೆದಿದ್ದಾರೆ ನೋಡಿ

ನಾಗರ ಹಾವುಗಳು ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್‌ನ ಚಳಿಗಾಲದಲ್ಲಿ ಚಟುವಟಿಕೆಗಳನ್ನು ನಿಲ್ಲಿಸಿ ನಿದ್ದೆ ಮಾಡುತ್ತವೆ. ಅದರ ನಂತರ ಡಿಸೆಂಬರ್-ಜನವರಿಯಲ್ಲಿ ಅವುಗಳ ಸಂಯೋಗದ ಅವಧಿಯು ಬರುತ್ತದೆ. ಈ ವಿಷಕಾರಿ ಹಾವುಗಳ ನಿದ್ದೆ ಮಾಡುವ ಸ್ಥಳಗಳು ಸಾಮಾನ್ಯವಾಗಿ ಮನುಷ್ಯರಿಗೆ ಆಶ್ಚರ್ಯವನ್ನುಂಟುಮಾಡುತ್ತವೆ. ನಾಗರಹಾವು ಇತ್ತೀಚೆಗೆ ಯಾರೋ ಒಬ್ಬರ ಸ್ಕೂಟರ್‌ನಲ್ಲಿ ಹೈಬರ್ನೇಟ್ ಮಾಡುತ್ತಿರುವುದು ಕಂಡುಬಂದಿದೆ. ದ್ವಿಚಕ್ರ ವಾಹನದಿಂದ ಮಾರಣಾಂತಿಕ ಸರ್ಪವನ್ನು ಹೊರತೆಗೆಯಲು ತರಬೇತಿ ಪಡೆದ … Continued

ಇನ್‌ಕ್ರೆಡಿಬಲ್‌ ಇಂಡಿಯಾ…| ಸೀರೆಯುಟ್ಟು ಸಖತ್ತಾಗಿ ಕಬಡ್ಡಿ ಆಡಿದ ಮಹಿಳೆಯರು, ಬೆರಗಾದ ನೆಟ್ಟಿಗರು…ವೀಕ್ಷಿಸಿ

ಕಬಡ್ಡಿ ಭಾರತದ ಅತ್ಯಂತ ಜನಪ್ರಿಯ ಆಟಗಳಲ್ಲಿ ಒಂದು ಮಾತ್ರವಲ್ಲ, ಭಾರತೀಯ ಉಪಖಂಡದಲ್ಲಿ ಒಂದು ಭಾವನೆಯಾಗಿದೆ. ಆಟಕ್ಕೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಗಳ ಸಮಾನ ಮಿಶ್ರಣದ ಅಗತ್ಯವಿದೆ. ಪ್ರತಿಯೊಂದು ವಯೋಮಾನದವರೂ ಕಬಡ್ಡಿ ಆಡುವುದನ್ನು ತೋರಿಸುವ ಅನೇಕ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇತ್ತೀಚೆಗೆ, ಛತ್ತೀಸ್‌ಗಢಿಯ ಒಲಿಂಪಿಕ್ಸ್‌ನಲ್ಲಿ ಹಲವಾರು ಮಹಿಳೆಯರು ಕಬಡ್ಡಿ ಸೀರೆಯುಟ್ಟು ಆಡುತ್ತಿರುವ ವೀಡಿಯೊ ವೈರಲ್ ಆಗಿದೆ. … Continued

ಹೀಗೂ ನಡೆಯಿತು ಮದುವೆ: ಮದುವೆಯಾಗಲು ನಿರಾಕರಿಸಿ ಓಡಿಹೋದ ವರನನ್ನು ಚೇಸ್‌ ಮಾಡಿ ಹಿಡಿದು ವಾಪಸ್‌ ಕರೆತಂದು ಮದುವೆಯಾದ ವಧು | ವೀಕ್ಷಿಸಿ

ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊದಲ್ಲಿ ಮದುವೆಯ ದಿನದಂದು ವಧುವು ಓಡಿಹೋದ ವರನನ್ನು ಹೇಗೆ ಬೆನ್ನೆಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ. ಮದುವೆ ಕಾರ್ಯಕ್ರಮದ ಕೊನೆಯ ಗಳಿಗೆಯಲ್ಲಿ ವರನು ಆಕೆಯನ್ನು ಮದುವೆಯಾಗಲು ನಿರಾಕರಿಸಿ ಓಡಿ ಹೋದ ನಂತರ ವಧುವೇ ವರನನ್ನು ಚೇಸ್ ಮಾಡಿ ಕರೆತಂದು ಮದುವೆಯಾದ ಘಟನೆ ನಡೆದಿದೆ. ಇದು ಬಿಹಾರದ ನವಾಡದ ಭಗತ್ ಸಿಂಗ್ ಚೌಕ್‌ನಲ್ಲಿ ಈ ಘಟನೆ … Continued

ಎರಡು ದೊಡ್ಡ ಕಾಂಗರೂಗಳ ‘ಜಂಗಿ ನಿಖಾಲಿ ಕುಸ್ತಿ’: ಹೊಡೆದಾಟದಲ್ಲಿ ತಗಡಿನ ಶೆಡ್‌ಗೆ ಅಪ್ಪಳಿಸಿದ ಒಂದು ಕಾಂಗರೂ : ವೀಕ್ಷಿಸಿ

ಕಾಂಗರೂಗಳ ವೀಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತವೆ. ಇಂಟರ್ನೆಟ್ ಬಳಕೆದಾರರು ಕಾಂಗರೂಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಈಗ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಎರಡು ಕಾಂಗರೂಗಳ ನಡುವಿನ ತೀವ್ರವಾದ ಹೊಡೆದಾಟದ ವೀಡಿಯೊವೊಂದು ವೈರಲ್‌ ಆಗಿದೆ. ಆಸ್ಟ್ರೇಲಿಯದ ನಿಸರ್ಗಧಾಮದಲ್ಲಿ ಎರಡು ಕಾಂಗರೂಗಳ ಬಾಕ್ಸಿಂಗ್ ಪಂದ್ಯವನ್ನು ಒಳಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ನೌ ದಿಸ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ … Continued

ನೀವು ಇಲ್ಲೇಕೆ ಬಂದಿರಿ, ಭಾರತಕ್ಕೆ ವಾಪಸ್ ಹೋಗಿ: ಅಮೆರಿಕದಲ್ಲಿ ಭಾರತೀಯ ಮೂಲದ ಮಹಿಳೆಯರಿಗೆ ಜನಾಂಗೀಯ ನಿಂದನೆ, ಹಲ್ಲೆ | ವೀಡಿಯೊವೀಕ್ಷಿಸಿ

ಟೆಕ್ಸಾಸ್: ಭಾರತದ ಮೂಲದ ನಾಲ್ವರು ಅಮೆರಿಕನ್ನರ ಗುಂಪಿನ ಮೇಲೆ ಜನಾಂಗೀಯ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪದಲ್ಲಿ ಮೆಕ್ಸಿಕನ್- ಅಮೆರಿಕನ್ ಮಹಿಳೆಯನ್ನು ಟೆಕ್ಸಾಸ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಮೂಲದ ಅಮೆರಿಕದ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿರುವ ಈ ಮಹಿಳೆ, ‘ಭಾರತಕ್ಕೆ ವಾಪಸ್ ಹೋಗಿ’ ಎಂದು ತಾಕೀತು ಮಾಡುವುದು … Continued

ಕೋವಿಡ್ ಪ್ರಕರಣಗಳು ಹೆಚ್ಚಳ : ಮೀನು, ಏಡಿಗಳಿಗೂ ಕೊರೊನಾ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡುತ್ತಿರುವ ಚೀನಾ….! ವೀಕ್ಷಿಸಿ

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ, ಚೀನಾದ ಕ್ಸಿಯಾಮೆನ್ ಪ್ರದೇಶದ ಅಧಿಕಾರಿಗಳು ಸಮುದ್ರ ಜೀವಿಗಳನ್ನು ವೈರಸ್‌ಗಾಗಿ ಪರೀಕ್ಷಿಸಲು ಪ್ರಾರಂಭಿಸಿದ್ದಾರೆ….! ಮತ್ತೊಂದೆಡೆ, ಬಿಬಿಸಿ ಪ್ರಕಾರ, ಐದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಪರೀಕ್ಷೆಗಳಿಗೆ ಒಳಗಾಗಲು ನಿರ್ದೇಶಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹಲವಾರು ವೀಡಿಯೊಗಳು ಆರೋಗ್ಯ ಕಾರ್ಯಕರ್ತರು ಕೋವಿಡ್ ವೈರಸ್‌ಗಾಗಿ ಮೀನು ಮತ್ತು ಏಡಿಗಳಂತಹ ಸಮುದ್ರ ಆಹಾರಗಳನ್ನು … Continued