ಆಗಸ್ಟ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ. 28ರಷ್ಟು ಹೆಚ್ಚಳ

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ 28% ರಷ್ಟು ಏರಿಕೆಯಾಗಿದ್ದು, ಜಿಎಸ್‌ಟಿ ಸಂಗ್ರಹ 1.43 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಸತತ ಆರನೇ ತಿಂಗಳು ಜಿಎಸ್‌ಟಿ ಸಂಗ್ರಹವು 1.4-ಲಕ್ಷ-ಕೋಟಿ ರೂಪಾಯಿ ಮಾರ್ಕ್‌ಗಿಂತ ಹೆಚ್ಚಿದ್ದು, ಹಬ್ಬದ ದಿನಗಳು ತೆರಿಗೆ ಸಂಗ್ರಹ ಹೆಚ್ಚಳ ಪ್ರವೃತ್ತಿ ಮುಂದುವರಿಯಲು ಸಹಾಯ ಮಾಡಿದೆ.
ಈ ಆಗಸ್ಟ್‌ನಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​​ಟಿ ಆದಾಯ ಕಳೆದ ವರ್ಷದ ಆಗಸ್ಟ್‌ ತಿಂಗಳಿಗಿಂತ ಶೇ. 28 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ಆರ್ಥಿಕ ಚೇತರಿಕೆಯೊಂದಿಗೆ ಉತ್ತಮವಾದ ವರದಿಯು ಸ್ಥಿರವಾದ ಆಧಾರದ ಮೇಲೆ ಜಿಎಸ್ ಟಿ ಆದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್‌ ತಿಂಗಳಲ್ಲಿ ಒಟ್ಟು 1,43,612 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, ಅದರಲ್ಲಿ ಸಿಜಿಎಸ್‌ಟಿ 24,710 ಕೋಟಿ ರೂ.ಗಳು, ಎಸ್‌ಜಿಎಸ್‌ಟಿ 30,951 ಕೋಟಿ ರೂ.ಗಳು, ಐಜಿಎಸ್‌ಟಿ 77,782 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 42,067 ಕೋಟಿ ಸೇರಿದಂತೆ) ಮತ್ತು ಸೆಸ್ 10,168 ಕೋಟಿ ರೂ.ಗಳಷ್ಟು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,018 ಕೋಟಿ ಸೇರಿದಂತೆ) ಸಂಗ್ರಹ ಆಗಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement