ಮಾನವನ್ಯಾಕೆ ಇಷ್ಟು ಕ್ರೂರಿ…: ಜೆಸಿಬಿ ಸದ್ದಿಗೆ ನೂರಾರು ಗೂಡುಗಳಿದ್ದ ಬೃಹತ್‌ ಮರ ಉರುಳಿ ‘ಹಕ್ಕಿಗಳ ಮಾರಣಹೋಮ’, ಮನಕಲಕುವ ದೃಶ್ಯದ ವೀಡಿಯೊ ವೈರಲ್ | ವೀಕ್ಷಿಸಿ

ಮನೆಗಳು, ಸಾರ್ವಜನಿಕ ಆಸ್ತಿಗಳು ಮತ್ತು ಸರ್ಕಾರಿ ಕಟ್ಟಡಗಳ ನಿರ್ಮಾಣದಿಂದಾಗಿ ಮರಗಳ ನಾಶವಾಗುತ್ತಿದ್ದು, ಮರಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕ ಜಾಗೃತಿಯ ನಂತರವೂ ಬೇಕಾಬಿಟ್ಟಿ ಮರ ಕಡಿಯುವುದು ಮುಂದುವರಿದಿದೆ. ಇತ್ತೀಚೆಗೆ, ಮುಂದಾಲೋಚನೆಯಿಲ್ಲದೆ ಮರವೊಂದನ್ನ ಕಡಿದ ಪರಿಣಾಮ, ನೂರಾರು ಪಕ್ಷಿಗಳು ನಿರಾಶ್ರಿತವಾಗಿದ್ದು, ಅನೇಕ ಪಕ್ಷಿಗಳನ್ನು ಸಾಯಿಸಿದ ವೀಡಿಯೊವೊಂದು ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ಸತ್ತಿದ್ದು ಹೆಚ್ಚಾಗಿ ಮರದ ಮೇಲಿನ ನೂರಾರು ಗೂಡುಗಳಲ್ಲಿದ್ದ ಹಕ್ಕಿಗಳ ಮರಿಗಳು ಎಂದು ಹೇಳಲಾಗಿದೆ.
ಕೇರಳದ ಮಲಪ್ಪುರಂ ಪ್ರದೇಶದ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ನಿಖರತೆಯಲ್ಲ. ವೈರಲ್ ವೀಡಿಯೊ ಅಂತರ್ಜಾಲದಲ್ಲಿ ಕೋಲಾಹಲ ಎಬ್ಬಿಸಿದೆ. ಮತ್ತು ದಯಯೇ ಇಲ್ಲದ ಈ ಕೃತ್ಯ ಆಕ್ರೋಶಕ್ಕೆ ಕಾರಣವಾಗಿದೆ.

ಜೆಸಿಬಿ ಯಂತ್ರವು ದೈತ್ಯ ಮರವನ್ನ ಕತ್ತರಿಸುವುದರೊಂದಿಗೆ ಹೃದಯ ವಿದ್ರಾವಕ ವೀಡಿಯೊ ತೆರೆದುಕೊಳ್ಳುತ್ತದೆ. ಈ ವೀಡಿಯೊದಲ್ಲಿ ಜೆಸಿಬಿ ಶಕ್ತಿಗೆ ನೂರಾರು ಪಕ್ಷಗಳಿ ಗೂಡುಗಳಿಂದ ತುಂಬಿದ್ದ ಈ ದೊಡ್ಡ ಮರ ಬೀಳುವಾಗ ಅನೇಕ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಹೊರಗೆ ಹಾರುವುದನ್ನ ತೋರಿಸುತ್ತದೆ. ಈ ಕ್ಲಿಪ್‌ನಲ್ಲಿ ಹಾರಲು ಅಸಮರ್ಥವಾದ ಹಕ್ಕಿಗಳು ಮರದ ಜೊತೆಗೆ ಕೆಳಗೆ ಬಿದ್ದು ಸತ್ತಿವೆ. ಸತ್ತ ಹಲವಾರು ಪಕ್ಷಿಗಳ ಹೃದಯವಿದ್ರಾವಕ ದೃಶ್ಯ ಒಮ್ಮೆ ಭಾವುಕರನ್ನಾಗಿಸುತ್ತದೆ.
ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗಾಗಿ ಮರವನ್ನ ಕತ್ತರಿಸಲಾಗಿದೆ ಎಂದು ವರದಿಯಾಗಿದೆ. ವೈರಲ್ ವೀಡಿಯೊವನ್ನ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಅವರು “ಪ್ರತಿಯೊಬ್ಬರಿಗೂ ಮನೆ ಬೇಕು. ನಾವು ಎಷ್ಟು ಕ್ರೂರಿ ಆಗಿಬಿಡುತ್ತೇವೆ ಎಂದು ಬರೆದಿದ್ದಾರೆ.

ವೀಡಿಯೊವನ್ನು ಹಂಚಿಕೊಂಡ ತಕ್ಷಣ, ನೆಟ್ಟಿಗರು ಕಾಮೆಂಟ್ ವಿಭಾಗಕ್ಕೆ ಧಾವಿಸಿ ತಮ್ಮ ಕೋಪವನ್ನ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು, “ಪ್ರತಿಯೊಂದು ಹುಳು, ಕೀಟ, ಪಕ್ಷಿ ಮತ್ತು ಪ್ರಾಣಿಗಳು ಗ್ರಹದ ಪರಿಸರ ಯೋಗಕ್ಷೇಮಕ್ಕಾಗಿ ಕೆಲಸ ಮಾಡುತ್ತವೆ. ಅತ್ಯಂತ ಬುದ್ಧಿವಂತ ಪ್ರಭೇದ ಎಂದು ಹೇಳಿಕೊಳ್ಳುವ ಮಾನವರು ಮಾತ್ರ ಅದನ್ನ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, “ನಾವು ಕ್ರೋಧವನ್ನ ಎದುರಿಸುತ್ತಿದ್ದೇವೆ. ತೀವ್ರ ಪ್ರವಾಹಗಳು…. ಬರಗಾಲಗಳು… ಸಮುದ್ರದ ನೀರಿನ ಮಟ್ಟ ಏರುತ್ತಿದೆ… ಪ್ರಕೃತಿ ಒಂದು ಪಾಠ ಕಲಿಸುತ್ತದೆ” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು, “ಭಯಾನಕ! ನಾವು ಎಷ್ಟು ಹೃದಯ ಹೀನರಾಗಿದ್ದೇವೆ.. ಈ ರೀತಿಯಾಗಿ ಹಕ್ಕಿಗಳ ಮನೆಯನ್ನ ನಾಶಮಾಡಲು ಎಂದು ಆಕ್ರೋಶ ವ್ಯಕ್ತಿ ಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement