ಈ ಸಂದೇಶ ನಿಮಗೂ ಬರಬಹುದು…ನಂಬಬೇಡಿ : ನಕಲಿ ಸಂದೇಶಗಳ ಬಗ್ಗೆ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ ಎಸ್‌ಬಿಐ | ವೀಕ್ಷಿಸಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಇದು ಸ್ಥಾಪನೆಯಾಗಿ 67 ವರ್ಷಗಳು ಕಳೆದಿವೆ. ಈ ಸಂಭ್ರಮಾಚರಣೆ ಸಂದರ್ಭದಲ್ಲಿ ದೇಶದ ಪ್ರತಿ ಗ್ರಾಹಕರಿಗೆ ಉಚಿತವಾಗಿ 6,000 ರೂಪಾಯಿಗಳನ್ನು ಹಣವನ್ನು ನೀಡಲಾಗುತ್ತಿದೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಹೆಸರನ್ನು ಮಾತ್ರ ನಮೂದಿಸಿ ಎಂಬ ಎಂಬ ಸಂದೇಶದವನ್ನು ನೀವು ಸ್ವೀಕರಿಸಿದ್ದೀರಾ? ಹಾಗದರೆ ಎಚ್ಚರಿಕೆ ವಹಿಸಿ.
ಯಾಕೆಂದರೆ ಎಸ್‌ಬಿಐ ತನ್ನ ಸಂಸ್ಥಾಪನಾ ದಿನದಂದು ತನ್ನ ಕೋಟಿಗಟ್ಟಲೆ ಖಾತೆದಾರರಿಗೆ ಸಂಪೂರ್ಣ 6,000 ರೂಪಾಯಿಗಳನ್ನು ನೀಡುತ್ತಿದೆ ಎಂಬ ಸಂದೇಶವನ್ನು ಅನೇಕ ಜನರಿಗೆ ಕಳುಹಿಸಲಾಗುತ್ತಿದೆ. ನೀವು ಸಹ ಈ ಸಂದೇಶವನ್ನು ಸ್ವೀಕರಿಸಿದ್ದರೆ, ನೀವು ಸಹ ಎಚ್ಚರವಾಗಿರಬೇಕು. ಈ ಸಂದೇಶ ಸಂಪೂರ್ಣ ನಕಲಿಯಾಗಿದೆ.

ತನ್ನ ಗ್ರಾಹಕರಿಗೆ 6,000 ರೂಪಾಯಿಗಳನ್ನು ನೀಡುವ ಯಾವುದೇ ಯೋಜನೆಯನ್ನು SBI ಆರಂಭಿಸಿಲ್ಲ. ಈ ಯೋಜನೆ ಸಂಪೂರ್ಣ ನಕಲಿ. ಈ ವಿಚಾರವಾಗಿ ಸ್ಟೇಟ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ದೇಶದ ಹಲವು ಜನರು ಇಂತಹ ಸಂದೇಶವನ್ನು ಸ್ವೀಕರಿಸಿ ವಂಚನೆಗೆಗೆ ಒಳಗಾಗಿರುವುದನ್ನು ಗಮನಿಸಿರುವ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಟ್ವೀಟ್ ಮಾಡಿ ಗ್ರಾಹಕರನ್ನು ಇಂತಹ ಸಂದೇಶಗಳನ್ನು ನಂಬದಂತೆ ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಎಸ್‌ಬಿಐನ 67 ನೇ ವಾರ್ಷಿಕೋತ್ಸವದಂದು ಬ್ಯಾಂಕ್ ಜನರ ಖಾತೆಗಳಿಗೆ 6,000 ರೂಪಾಯಿಗಳನ್ನು ವರ್ಗಾಯಿಸಲಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ. ಇದರಲ್ಲಿ ಗ್ರಾಹಕರಿಗೆ 3 ರಿಂದ 4 ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ನಂತರ ಹಣ ಕಳುಹಿಸುವುದಾಗಿ ಹೇಳುತ್ತಾರೆ. ಗ್ರಾಹಕರಿಂದ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮುಂತಾದ ಬ್ಯಾಂಕಿಂಗ್ ವಿವರಗಳನ್ನು ಕೇಳುತ್ತಾರೆ. ಇಂತ ಸಂದೇಶಗಳು ಬಂತೆಂದು ಮಾಹಿತಿ ಹಂಚಿಕೊಂಡರೆ ಸಂಪಾದನೆ ಒಂದೇ ಕ್ಷಣದಲ್ಲಿ ಮಾಯವಾಗುತ್ತಿರುವ ಘಟನೆಗಳು ಜರುಗುತ್ತಿದೆ. ಹೀಗಾಗಿ ಇಂಥ ಸಂದೇಶಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ನೀವು ವಂಚನೆಗೆ ಬಲಿಯಾಗಿದ್ದರೆ ಎಲ್ಲಿ ದೂರು ನೀಡಬೇಕು..?
ಈ ಹಿಂದೆ, ಎಸ್‌ಬಿಐ ತನ್ನ ಗ್ರಾಹಕರಿಗೆ ಪ್ಯಾನ್ ಕಾರ್ಡ್ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಇದರೊಂದಿಗೆ, ಯಾವುದೇ ರೀತಿಯ ಲಿಂಕ್ ಕಳುಹಿಸುವ ಮೂಲಕ ಪ್ಯಾನ್ ವಿವರಗಳನ್ನು ನವೀಕರಿಸಲು ಬ್ಯಾಂಕ್ ಕೇಳುವುದಿಲ್ಲ ಎಂದು ತಿಳಿಸಲಾಗಿದೆ. ಇದರೊಂದಿಗೆ, ವ್ಯಕ್ತಿಯು ಸೈಬರ್ ಅಪರಾಧಕ್ಕೆ ಬಲಿಯಾದರೆ, ಅಂತಹ ಪರಿಸ್ಥಿತಿಯಲ್ಲಿ, ಸೈಬರ್ ಕ್ರೈಮ್ ಸೆಲ್ ಸಂಖ್ಯೆ 1930 ಕ್ಕೆ ಅಥವಾ ಇಮೇಲ್ ರಿಪೋರ್ಟ್[email protected] ಮೂಲಕ ಅದೇ ದೂರನ್ನು ಮಾಡಬಹುದು ಎಂದು ಬ್ಯಾಂಕ್ ತಿಳಿಸಿದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement