ಜನನದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಗೆ 60 ದಿನಗಳ ವಿಶೇಷ ಹೆರಿಗೆ ರಜೆ: ಕೇಂದ್ರ

ನವದೆಹಲಿ: ಜನನದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಎಲ್ಲಾ ಮಹಿಳಾ ಕೇಂದ್ರ ಸರ್ಕಾರಿ ನೌಕರರು 60 ದಿನಗಳ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ತಾಯಿಯ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುವ ಮಗುವಿನ ಜನನದ ನಂತರ ಅಥವಾ ಮಗುವಿನ ಮರಣದ ಕಾರಣದಿಂದ ಉಂಟಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಹೆರಿಗೆಯ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಮಾತೃತ್ವ ರಜೆ ಮಂಜೂರು ಮಾಡುವ ಕುರಿತಾಗಿ ಹಲವು ಪ್ರಶ್ನೆಗಳು ಸಿಬ್ಬಂದಿಗಳಿಂದ ಬಂದಿತ್ತು. ಹೀಗಾಗಿ ಮಗುವಿನ ಸಾವಿನ ಕಾರಣದಿಂದ ಉಂಟಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ನೌಕರರಿಗೆ ಅನ್ವಯವಾಗುವಂತೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಒಪಿಟಿ ಆದೇಶದಲ್ಲಿ ತಿಳಿಸಿದೆ.

ಮಹಿಳಾ ನೌಕರಳು ಈಗಾಗಲೇ ಆನರೋಗ್ಯದ ಮಗುವಿನ ಮರಣದವರೆಗೆ ಹೆರಿಗೆ ರಜೆ ಪಡೆದಿದ್ದರೆ, ವೈದ್ಯಕೀಯ ಪ್ರಮಾಣಪತ್ರವನ್ನು ಒತ್ತಾಯಿಸದೆಯೇ ಅದನ್ನು ಅವರ ರಜೆ ಖಾತೆಯಲ್ಲಿ ಲಭ್ಯವಿರುವ ಯಾವುದೇ ರೀತಿಯ ರಜೆಗೆ ಪರಿವರ್ತಿಸಬಹುದು ಮತ್ತು 60 ದಿನಗಳ ವಿಶೇಷ ಹೆರಿಗೆ ರಜೆ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷ ಹೆರಿಗೆ ರಜೆಯ ಪ್ರಯೋಜನವು ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಮಾತ್ರ ದೊರಕುತ್ತದೆ. ಇದಲ್ಲದೆ ಅಧಿಕೃತ ಆಸ್ಪತ್ರೆಯಲ್ಲಿ ಮಗುವಿನ ಹೆರಿಗೆಗೆ ಮಾತ್ರ ರಜೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಈ ಆದೇಶಗಳು ಕೇಂದ್ರ ನಾಗರಿಕ ಸೇವೆಗಳ ರಜೆ ನಿಯಮಗಳು 1972ರ ನಿಯಮ 2ರ ಪ್ರಕಾರ ಭಾರತದ ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾಗರಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಸರ್ಕಾರಿ ನೌಕರರಿಗೆ ಈ ಆದೇಶ ಬಿಡುಗಡೆಯ ದಿನಾಂಕದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದೆ

. ಈ ಆದೇಶವು ಭಾರತೀಯ ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾಗರಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement