ಮಣಿಪುರದಲ್ಲಿ ನಿತೀಶಕುಮಾರ್ ಜೆಡಿಯುಗೆ ಹಿನ್ನಡೆ: 6 ಶಾಸಕರ ಪೈಕಿ ಐವರು ಬಿಜೆಪಿಗೆ ಸೇರ್ಪಡೆ

ಮಣಿಪುರದ ಆರು ಜನತಾ ದಳ (ಯುನೈಟೆಡ್) ಶಾಸಕರಲ್ಲಿ ಐವರು ಶುಕ್ರವಾರ ಬಿಜೆಪಿಯೊಂದಿಗೆ ವಿಲೀನಗೊಂಡಿದ್ದಾರೆ. ನಿತೀಶ್ ಕುಮಾರ್ ಅವರ ಪಕ್ಷವು ಬಿಹಾರದಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೈತ್ರಿಯಿಂದ ಹೊರನಡೆದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಪಾಟ್ನಾದಲ್ಲಿ ಬಿಜೆಪಿ ಸಂಘಟನೆಯ ನಿರ್ಣಾಯಕ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಜೆಡಿಯು ಶಾಸಕರಲ್ಲಿ ಖುಮುಚ್ಚಮ್ ಸಿಂಗ್, ನ್ಗುರ್ಸಾಂಗ್ಲೂರ್ ಸನೇಟ್, ಅಚಾಬ್ ಉದ್ದೀನ್, ತಂಗ್ಜಮ್ ಅರುಣ್ ಕುಮಾರ್ ಮತ್ತು ಎಲ್ಎಂ ಖೌಟೆ ಸೇರಿದ್ದಾರೆ. ಮಣಿಪುರ ವಿಧಾನಸಭೆಯ ಸ್ಪೀಕರ್ ಸಂಯುಕ್ತ ಜನತಾ ದಳ ಶಾಸಕರು ಮತ್ತು ಬಿಜೆಪಿಯ ವಿಲೀನಕ್ಕೆ ಅನುಮೋದನೆ ನೀಡಿದ್ದಾರೆ.

ಕಳೆದ ಒಂಬತ್ತು ದಿನಗಳಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳಕ್ಕೆ ಇದು ಎರಡನೇ ಹೊಡೆತವಾಗಿದೆ. ಆಗಸ್ಟ್ 25 ರಂದು, ಅರುಣಾಚಲ ಪ್ರದೇಶದ ಏಕೈಕ ಜೆಡಿಯು ಶಾಸಕ ಟೆಕಿ ಕಾಸೊ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
2019 ರಲ್ಲಿ ನಡೆದ ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಂಯುಕ್ತ ಜನತಾ ದಳ ಏಳು ಸ್ಥಾನಗಳನ್ನು ಗೆದ್ದಿತ್ತು, ಆದರೆ ಅದರ ಆರು ಸದಸ್ಯರು ನಂತರ ಬಿಜೆಪಿಗೆ ಸೇರಿದರು. ಇದ್ದ ಒಬ್ಬರು ಶಾಸಕರೂ ಆಗಸ್ಟ್ 25ರಂದು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement