ಸಿಎಂಗೆ ಪತ್ರ ಬರೆದ ಐಟಿ ಕಂಪನಿಗಳ ಸಂಘ: ಮೂಲಸೌಕರ್ಯ ಸರಿಪಡಿಸದಿದ್ದರೆ ಸ್ಥಳಾಂತರಿಸುವ ಎಚ್ಚರಿಕೆ

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅವಾಂತರಗಳ ಮೇಲೆ ಅವಾಂತರಗಳು ಜನಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಜನರ ಜೊತೆಗೆ ಈಗ ದೊಡ್ಡದೊಡ್ಡ ಐಟಿ ಕಂಪನಿಗಳು ಕೂಡ ಮೂಲಸೌಕರ್ಯಗಳಿಲ್ಲದೆ ಮಳೆ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳಿಂದಾಗಿ ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA), ಮೂಲಸೌಕರ್ಯ ಸುಧಾರಿಸದಿದ್ದರೆ ಐಟಿ ಕಂಪನಿಗಳನ್ನು ಸ್ಥಳಾಂತರಿಸುವುದಾಗಿ ಎಚ್ಚರಿಕೆ ನೀಡಿವೆ.
ಮಾರತಹಳ್ಳಿ ಸರ್ಜಾಪುರ ಔಟರ್ ರಿಂಗ್ ರೋಡ್​ನಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಮಳೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಐಟಿ ಕಂಪನಿಗಳಿಗೆ ಭಾರೀ ನಷ್ಟವಾಗಿದ್ದು, ಕಂಪನಿಗಳ ಸಂಘ ಹೇಳುವಂತೆ ಅವರಿಗೆ ಸುಮಾರು 225 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಒಂದೊಮ್ಮೆ ತಾನು ಸರ್ಕಾರದ ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಂಪನಿಗಳು ಪರ್ಯಾಯ ಸ್ಥಳಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ ಎಂದು ಹೇಳಿವೆ.

ಐಟಿ ಕಾರಿಡಾರ್ ಪ್ರದೇಶದಲ್ಲಿ ಸಮಪರ್ಕ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು. ಇಲ್ಲದಿದ್ದರೆ ಐಟಿ ಕಂಪನಿಗಳು ಪರ್ಯಾಯ ಜಾಗ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಆಗಸ್ಟ್‌ 30ರಂದು ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಐಟಿ ಕಂಪನಿಗಳ ಒಳಭಾಗದಲ್ಲಿ ನೀರು ಬಂದಿತ್ತು. ಐದು ಗಂಟೆ ಕಾಲ ಹೊರವರ್ತುಲ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿದ್ದರು. ಹೊರವರ್ತುಲ ರಸ್ತೆಯ ಕಳಪೆ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಮಳೆ ಬಂದಾಗ ಆಗುವ ಅವಾಂತರ ಹೆಚ್ಚುತ್ತಲೇ ಇದೆ. ಇದರಿಂದ ಕಂಪನಿಗಳಿಗೆ ತೀರಾ ನಷ್ಟವಾಗುತ್ತಿದೆ ಎಂದು ಐಟಿ ಅಸೋಸಿಯೇಷನ್​ ಪತ್ರ ಬರೆದಿದೆ.

ಪ್ರಮುಖ ಸುದ್ದಿ :-   ಹುಕ್ಕಾ, ಹುಕ್ಕಾ ಬಾರ್‌ ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಸಪ್ಟೆಂಬರ್1 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹೊರವರ್ತುಲ ರಸ್ತೆಗಳಲ್ಲಿ‌ ಇರುವ ಕಂಪನಿಗಳ ಸಂಘ, ಕೆಲವು ಬೇಡಿಕೆಗಳನ್ನ ಮುಂದಿಟ್ಟಿದೆ.ಮೂಲಸೌಕರ್ಯಗಳನ್ನು ಸುಧಾರಿಸುವುದು. ನಂತರ ಕೆ.ಆರ್ ಪುರಂ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸುಧಾರಣೆ ಮಾಡಬೇಕು, ಬಿಎಂಟಿಸಿಯಿಂದ ವೋಲ್ವೋ ಬಸ್​ಗಳನ್ನು ಬಿಡಬೇಕು, ದಟ್ಟಣೆ ತಡೆಯಲು ರಸ್ತೆ ಬದಿಗಳಲ್ಲಿ ಪಾರ್ಕಿಂಗ್ ನಿಷೇಧಿಸಬೇಕು, ಪಾದಚಾರಿ ಮಾರ್ಗ ಹಾಗೂ ಸೈಕಲ್ ಸವಾರರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಪಾಥ್ ನಿರ್ಮಾಣ ಮಾಡಬೇಕು, ಪಾದಾಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಪ್ರತಿ 500 ಮೀಟರ್​ಗೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement