ಸ್ಥಳ ಮಹಜರ್‌ ನಡೆಸಲು ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು

posted in: ರಾಜ್ಯ | 0

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಸ್ಥಳ ಮಹಜರ್‌ ನಡೆಸಲು ಮುರುಘಾ ಮಠಕ್ಕೆ ಭಾನುವಾರ ಕರೆತಂದರು.
ಪೊಲೀಸ್ ವಶದಲ್ಲಿರುವ ಆರೋಪಿ ಮುರುಘಾ ಶರಣರನ್ನು ತನಿಖಾಧಿಕಾರಿಗಳು ಶುಕ್ರವಾರ ರಾತ್ರಿಯಿಂದ ವಿಚಾರಣೆಗೆ ಒಳಪಡಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಭಾನುವಾರ ಬೆಳಿಗ್ಗೆ 11:45 ಮುರುಘಾ ಮಠಕ್ಕೆ ಕರೆತಂದು ಸ್ಥಖ ಮಹಜರು ನಡೆಸಿದ್ದಾರೆ. ಡಿವೈಎಸ್‌ಪಿ ಕಚೇರಿಯಿಂದ ಶರಣರನ್ನು ಮಠಕ್ಕೆ ಕರತರಲಾಯಿತು. ಹಾಗೂ ಮಠದ ಬಿಡಾರ, ಹಾಸ್ಟೆಲ್ ಗೆ ಕರೆದೊಯ್ದು ಮಹಜರು ಮಾಡಲಾಗುತ್ತಿದೆ. ಮಹಜರು ಸಂದರ್ಭದಲ್ಲಿ ಭಕ್ತರು, ಪ್ರವಾಸಿಗರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಮಹಜರಗೂ ಮುನ್ನ ಪೊಲೀಸರು ಮುರುಘಾ ಶ್ರೀಗೆ ಮೊದಲು ಗದ್ದುಗೆ ದರ್ಶನ ಮಾಡಿಸಿದರು. ಅಲ್ಲಿಂದ ಮುರುಘಾ ಶ್ರೀಗಳ ಮಲಗುವ ಕೊಠಡಿ, ಕೂರುತ್ತಿದ್ದ ಚೇಂಬರ್ ಹಾಗೂ ದರ್ಬಾರ್ ಹಾಲ್‌ನಲ್ಲೂ ಮಹಜರು ಮಾಡುತ್ತಿದ್ದಾರೆ. ಸೆಪ್ಟೆಂಬರ್‌ 1ರಂದು ರಾತ್ರಿ 10ಕ್ಕೆ ಮುರುಘಾ ಶರಣರನ್ನು ಬಂಧಿಸಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ನಾಳೆ ಮೈಸೂರಲ್ಲಿ ಭಾರತ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ..?

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement