ಭಾರತದ ಅತಿದೊಡ್ಡ ಕಾರು ಕಳ್ಳನ ಬಂಧನ: ಈತ ಕದ್ದಿದ್ದು ಬರೋಬ್ಬರಿ 5,000 ಕಾರುಗಳು…!

ನವದೆಹಲಿ: “ಭಾರತದ ಅತಿದೊಡ್ಡ ಕಾರು ಕಳ್ಳ” ಅನಿಲ್ ಚೌಹಾಣ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಚೌಹಾಣ್ (52) ಕಾರು ಕಳ್ಳರ ತಂಡದ ಕಿಂಗ್ ಪಿನ್. ಈತನ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ. ಒಂದಲ್ಲ, ಹತ್ತಲ್ಲ, ನೂರಲ್ಲ… ಈತನ ಮೇಲೆ ಬರೋಬ್ಬರಿ 5,000 ಕಾರುಗಳನ್ನು ಕದ್ದ ಆರೋಪವಿದೆ..!
ಬಂಧನದ ಸಮಯದಲ್ಲಿ, ಪೊಲೀಸರು ಆರು ದೇಶ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಕಾಟ್ರಿಡ್ಜ್‌ಗಳು, ಒಂದು ಕದ್ದ ಮೋಟಾರ್‌ಸೈಕಲ್ ಮತ್ತು ಒಂದು ಕದ್ದ ಕೇರ್ ಅನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.

ಅನಿಲ್ ಚೌಹಾಣ್ ಯಾರು?
ಅಸ್ಸಾಂನ ತೇಜ್‌ಪುರ ಮೂಲದ ಖಾನ್‌ಪುರ ಹೊರವಲಯದ ನಿವಾಸಿ ಅನಿಲ್ ಚೌಹಾನ್ 12ನೇ ತರಗತಿಯವರೆಗೆ ಓದಿದ್ದಾನೆ. ಆತ 1998 ರಲ್ಲಿ ವಾಹನಗಳನ್ನು ಕದಿಯಲು ಪ್ರಾರಂಭಿಸಿದ ಮತ್ತು ಭಾರತದ ವಿವಿಧ ಭಾಗಗಳಿಂದ 5000ಕ್ಕೂ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ.
ಅನಿಲ್‌ನನ್ನು ಈ ಹಿಂದೆಯೂ ಹಲವು ಬಾರಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದರು. ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಮೊಕದ್ದಮೆಯಲ್ಲಿ ಐದು ವರ್ಷಗಳ ಕಾಲ ಶಿಕ್ಷೆಗೊಳಗಾಗಿದ್ದ. ಅವರು ಈ ಹಿಂದೆ 180 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಅನಿಲ್ ಚೌಹಾಣ್ ಅಸ್ಸಾಂ ಸರ್ಕಾರದಲ್ಲಿ ವರ್ಗ-1 ಗುತ್ತಿಗೆದಾರರಾಗಿದ್ದ. ನಂತರ, ಜಾರಿ ನಿರ್ದೇಶನಾಲಯ ಆತನ ಸ್ಥಳದ ಮೇಲೆ ದಾಳಿ ನಡೆಸಿತು ಮತ್ತು ಎಲ್ಲಾ ಆಸ್ತಿಯನ್ನು ವಶಪಡಿಸಿಕೊಳ್ಳಲಾಯಿತು. ಇದಾದ ಬಳಿಕ ಬ್ಯಾಂಕ್ ತನ್ನ ಎಲ್ಲಾ ಆಸ್ತಿಯನ್ನು ಹರಾಜು ಹಾಕಿದ ನಂತರ ಮತ್ತೆ ಕಳ್ಳತನ ಮಾಡಲು ಆರಂಭಿಸಿದ.ಆರೋಪಿಯು ಈಶಾನ್ಯ ರಾಜ್ಯದಲ್ಲಿ ಘೇಂಡಾಮೃಗದ ಕೊಂಬಿನ ಕಳ್ಳಸಾಗಣೆಯಲ್ಲಿ ಕುಖ್ಯಾತನಾಗಿದ್ದ.
ಅನಿಲ್ ಚೌಹಾಣನನ್ನು 2015 ರಲ್ಲಿ ಅಸ್ಸಾಂ ಪೊಲೀಸರು ಒಬ್ಬ ಹಾಲಿ ಶಾಸಕರೊಂದಿಗೆ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

ಹೇಗೆ ಬಂಧಿಸಲಾಯಿತು….?
ಕೇಂದ್ರ ಜಿಲ್ಲೆ ಮತ್ತು ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚುತ್ತಿರುವ ಕಾರಣ, ಅವರನ್ನು ಪರಿಶೀಲಿಸಲು ಕೇಂದ್ರ ಜಿಲ್ಲೆಯ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ(ಕೇಂದ್ರ)ರಾದ ಶ್ವೇತಾ ಚೌಹಾಣ್ ಹೇಳಿದ್ದಾರೆ.
ಭಾರತದ ಅಕ್ರಮ ಶಸ್ತ್ರಾಸ್ತ್ರಗಳ ಮೋಸ್ಟ್ ವಾಂಟೆಡ್ ಆಟೋ ಲಿಫ್ಟರ್ ಕಮ್ ಸರಬರಾಜುದಾರನ ಆಗಮನದ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಕೇಂದ್ರ ದೆಹಲಿಯ ಡಿಬಿಜಿ ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನಿಲ್ ಚೌಹಾಣ್ ವಿಶೇಷ ಸಿಬ್ಬಂದಿಗೆ ಬಂದಿದ್ದು, ಆಗಸ್ಟ್ 23 ರಂದು ಆರೋಪಿಯನ್ನು ಬಂಧಿಸಲಾಯಿತು ಎಂದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement