ಆಗ್ರಾದ ಟೋಲ್ ಗೇಟ್ ಮುರಿದು ಸಾಗಿದ ಮರಳು ಮಾಫಿಯಾದ 13 ಟ್ರ್ಯಾಕ್ಟರ್‌ಗಳು: ಕೋಲುಗಳಿಂದ ತಡೆಯುವ ಸಿಬ್ಬಂದಿ ಪ್ರಯತ್ನ ವಿಫಲ | ವೀಕ್ಷಿಸಿ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ಅಕ್ರಮವಾಗಿ ಮರಳು ಸಾಗಾಣೆ ನಡೆಸುತ್ತಿದ್ದ 13 ಟ್ರ್ಯಾಕ್ಟರ್‌ಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸದೇ ಬ್ಯಾರಿಕೇಡ್‌ ಮುರಿದು ಮುಂದೆ ಸಾಗಿರುವ ಘಟನೆ ನಡೆದಿದೆ.
ಟೋಲ್‌ ಸಿಬ್ಬಂದಿ ಕೋಲುಗಳನ್ನು ಬಳಸಿ ತಡೆಯಲು ಪ್ರಯತ್ನಿಸಿದರೂ ಅವರು ಟೋಲ್‌ ಗೇಟುಗಳನ್ನು ಮುರಿದುಕೊಂಡು ಮುಂದೆ ಸಾಗಿದ್ದಾರೆ. ಈ ಟ್ರ್ಯಾಕ್ಟರ್‌ಗಳು ಸ್ಥಳೀಯ ಮರಳು ಮಾಫಿಯಾಕ್ಕೆ ಸೇರಿದವು ಎಂದು ಹೇಳಲಾಗಿದೆ. ಈ ಘಟನೆಯು ಆಗ್ರಾ ಗ್ವಾಲಿಯರ್ ಹೆದ್ದಾರಿಯಲ್ಲಿರುವ ಜಜೌ ಟೋಲ್ ಪ್ಲಾಜಾದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಮತ್ತು ನಂತರ ಇದು ವ್ಯಾಪಕ ಗಮನ ಸೆಳೆದಿದೆ.

ಮೊದಲ ಟ್ರಾಕ್ಟರ್ ಟೋಲ್ ಕಟ್ಟದೆ ಧಾವಿಸುತ್ತಿರುವುದು ಸಿಸಿಟಿವಿ ಕ್ಲಿಪ್‌ನಲ್ಲಿ ಕಂಡುಬಂದಿದ್ದು, ರಸ್ತೆ ತಡೆಯಲು ಹಾಕಿದ ತಡೆಗೆ ಡಿಕ್ಕಿ ಹೊಡೆದಿದೆ.ಮೊದಲ ಟ್ರಾಕ್ಟರ್ ಹೇಗೆ ಮಾಡುತ್ತದೋ ಅದೇ ರೀತಿ, ಅದನ್ನು ಅನುಸರಿಸುವ 12 ಟ್ರಾಕ್ಟರುಗಳು ತಡೆಗೇಟುಗಳಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿವೆ ಇತ್ತೀಚಿನ ಮಾಹಿತಿಯ ಪ್ರಕಾರ, ಟ್ರಾಕ್ಟರ್‌ಗಳು ಗ್ವಾಲಿಯರ್‌ನಿಂದ ಆಗ್ರಾ ಕಡೆಗೆ ಹಿಂತಿರುಗುತ್ತಿದ್ದಾಗ ಅವುಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಬೇಕಾಗಿತ್ತು. ಆದರೆ, ಕೇವಲ 50 ಸೆಕೆಂಡ್‌ಗಳಲ್ಲಿ 13 ಅಕ್ರಮ ಮರಳು ತುಂಬಿದ ವಾಹನಗಳು ಬ್ಯಾರಿಕೇಡ್‌ಗಳನ್ನು ಮುರಿದಿವೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

ಟೋಲ್ ಪ್ಲಾಜಾ ನೌಕರರು ಕೋಲುಗಳಿಂದ ಕಾರುಗಳ ಪ್ರಗತಿಯನ್ನು ತಡೆಯಲು ಪ್ರಯತ್ನಿಸುತ್ತಾರೆ, ಆದರೆ ಪ್ರಯೋಜನವಾಗಿಲ್ಲ.
ಈ ನಡುವೆ ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement