ಇದು ಪರಿವಾರ ಜೋಡೋ: ಭಾರತ್ ಜೋಡೋ ಯಾತ್ರೆಯಲ್ಲಿ ಪೋಸ್ಟರಿನಲ್ಲಿದ್ದ ರಾಬರ್ಟ್ ವಾದ್ರಾ ಫೋಟೋ ಹಂಚಿಕೊಂಡು ಲೇವಡಿ ಮಾಡಿದ ಬಿಜೆಪಿ

ನವದೆಹಲಿ: ಕಾಂಗ್ರೆಸ್ ಪುನಶ್ಚೇತನದ ಉದ್ದೇಶದಿಂದ ಬುಧವಾರದಿಂದ ಆರಂಭಿಸಿರುವ ‘ಭಾರತ್ ಜೋಡೋ ಯಾತ್ರೆ’ಯಲ್ಲಿಯೂ ಪರಿವಾರ ರಾಜಕಾರಣ ನಡೆಸಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಗಾಂಧಿ ಕುಟುಂಬದ ಜತೆಗೆ ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಫೋಟೋ ಇರುವ ಪೋಸ್ಟರ್‌ಗಳ ಚಿತ್ರಗಳನ್ನು ಬಿಜೆಪಿ ಅಸ್ತ್ರವಾಗಿ ತೆಗೆದುಕೊಂಡಿದೆ. ಇದು ಭಾರತ್ ಜೋಡೋ ಅಲ್ಲ, ವಾಸ್ತವವಾಗಿ ‘ಪರಿವಾರ ಜೋಡೋ’ ಎಂದು ಲೇವಡಿ ಮಾಡಿದೆ.
ಇಂದಿನಿಂದ ಆರಂಭವಾದ ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಕಾರ್ಯಕ್ರಮದಲ್ಲಿ ಗಾಂಧಿ ಕುಟುಂಬದೊಂದಿಗೆ ರಾಬರ್ಟ್‌ ವಾದ್ರಾ ಒಳಗೊಂಡ ಪೋಸ್ಟರ್‌ನ ಚಿತ್ರಗಳನ್ನು ಬಿಜೆಪಿ ಹಂಚಿಕೊಂಡಿದ್ದು, ಭಾರತ್ ಜೋಡೋ ಯಾತ್ರೆ ನಿಜವಾಗಿಯೂ ‘ಪರಿವಾರ ಜೋಡೋ’ ಎಂದು ಲೇವಡಿ ಮಾಡಿದೆ.

ಭಾರತ್ ಜೋಡೋ’ ಎಂದು ಟ್ವೀಟ್ ಮಾಡಿ ರಾಬರ್ಟ್ ವಾದ್ರಾ, ಅದರೊಂದಿಗೆ ಭಾರತ ಧ್ವಜದ ಸಂಕೇತ ಹಂಚಿಕೊಂಡಿದ್ದಾರೆ. ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಜೊತೆಗೆ ತಾವು ಮತ್ತು ಹಾಗೂ ತಮ್ಮ ಪತ್ನಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚಿತ್ರಗಳಿರುವ ‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

“ಭಾರತ್ ಜೋಡೋ” ಎಂದು ಪೋಸ್ಟರ್‌ಗಳ ಬಗ್ಗೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ, “ಕಾಂಗ್ರೆಸ್‌ನ ಭಾರತ್ ಜೋಡೋ ವಾಸ್ತವವಾಗಿ ಪರಿವಾರ ಜೋಡೋ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಜೂನ್‌ನಲ್ಲಿ, ರಾಬರ್ಟ್ ವಾದ್ರಾ ಅವರು ರಾಜಕೀಯಕ್ಕೆ ಪ್ರವೇಶಿಸುವ ಚಿಂತನೆಯಲ್ಲಿದ್ದಾರೆ ಎಂದು ಸುಳಿವು ನೀಡಿದ್ದರು. ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ ನಂತರ ಅವರ ಪ್ರತಿಕ್ರಿಯೆ ಬಂದಿತ್ತು.
ಈ ರಾಷ್ಟ್ರದಲ್ಲಿ ಬದಲಾವಣೆಯ ಅಗತ್ಯವಿದೆ. ನಾನು ದೇಶದಲ್ಲಿ ಬದಲಾವಣೆ ತರಬಲ್ಲೆ ಎಂದು ಜನರು ಭಾವಿಸಿದರೆ, ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ರಾಬರ್ಟ್ ವಾದ್ರಾ ಹೇಳಿದ್ದರು. ಕನ್ಯಾಕುಮಾರಿಯಿಂದ 3,570 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆ 12 ರಾಜ್ಯಗಳನ್ನು ಒಳಗೊಂಡಿದೆ

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement