ಬಸ್ ಏರಲು ಯತ್ನಿಸಿದ ಯುವಕನನ್ನು ಒದ್ದು ರಸ್ತೆಗೆ ಬೀಳಿಸಿದ ಸಾರಿಗೆ ಸಂಸ್ಥೆ ನಿರ್ವಾಹಕ: ದೃಶ್ಯ ಕ್ಯಾಮರಾದಲ್ಲಿ ಸೆರೆ

posted in: ರಾಜ್ಯ | 0

ಮಂಗಳೂರು: ಸರ್ಕಾರಿ ಬಸ್ ಏರಲು ಯತ್ನಿಸಿದ ಯುವಕನನ್ನು ಕೆಎಸ್ಆರ್‌ಟಿಸಿ ನಿರ್ವಾಹಕರೊಬ್ಬರು ಕಾಲಿಂದ ಒದ್ದು ಬಸ್‌ನಿಂದ ಹೊರಗೆ ಹಾಕಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಪುತ್ತೂರಿನ ಈಶ್ವರಮಂಗಲ ಎಂಬಲ್ಲಿ ಬಸ್ ಏರಲು ಯತ್ನಿಸಿದ ಯುವಕನ ಕಪಾಳಕ್ಕೆ ಹೊಡೆದ ನಿರ್ವಾಹಕ ಹೊಡೆದು, ಕಾಲಿಂದ ಒದ್ದಿದ್ದಾನೆ. ಒದ್ದ ರಭಸಕ್ಕೆ ಪ್ರಯಾಣಿಕ ಬಸ್‌ನಿಂದ ಕೆಳಗೆ ರಸ್ತೆ ಮೇಲೆ ಬಿದ್ದಿದ್ದಾನೆ. ನಂತರ ರಸ್ತೆ ಮೇಲೆ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಿದ್ದ ರಭಸಕ್ಕೆ ಯುವಕನ ತಲೆಗೆ ಗಾಯವಾಗಿದ್ದು, ಸಾರ್ವಜನಿಕರು ಯುವಕನನ್ನು ಉಪಚರಿಸಿದ್ದಾರೆ ಎಂದು ವರದಿಯಾಗಿದೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಯಾಣಿಕ ಪಾನಮತ್ತನಂತೆ ಕಾಣುತ್ತಿದ್ದಾನೆ. ಬಸ್ ಹತ್ತಿದಾಗಲೇ ಕಂಡಕ್ಟರ್ ತಡೆದಿದ್ದಾನೆ. ಪ್ರಯಾಣಿಕನ ಕೊಡೆ ಕಿತ್ತುಕೊಂಡು ರಸ್ತೆಗೆ ಎಸೆದಿದ್ದಾನೆ. ನಂತರ ಬಸ್ ಒಳಗಡೆ ಕಪಾಳ ಮೋಕ್ಷ ಮಾಡಿದ್ದಾನೆ. ಆದರೂ ಪ್ರಯಾಣಿಕ ಕೆಳಗೆ ಇಳಿಯದಿದ್ದಾಗ ಬಸ್‌ನ ಬಾಗಿನಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಕಾಲಿನಿಂದ ಒದ್ದಿದ್ದಾನೆ. ಪ್ರಯಾಣಿಕ ರಸ್ತೆಯ ಮೇಲೆ ಬಿದ್ದುದ್ದು ವೀಡಿಯೊದಲ್ಲಿ ಕಂಡುಬಂದಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಾರಿಗೆ ಸಂಸ್ಥೆ ನಿರ್ವಾಹಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಸ್‌ನಿಂದ ಕೆಳಗಿಳಿಸುವುದಾದರೆ ಈ ರೀತಿ ದುರ್ವರ್ತನೆ ತೋರುವುದಲ್ಲ ಎಂದು ಅನೇಕರು ಖಡಿಸಿದ್ದಾರೆ. ಘಟನೆ ವೀಡಿಯೊ ವೈರಲ್‌ ಆದ ನಂತರ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement