ಟಿ-20 ಏಷ್ಯಾ ಕಪ್‌: ಪಾಕಿಸ್ತಾನವು ಅಫ್ಘಾನಿಸ್ತಾನ ಸೋಲಿಸಿದ ನಂತರ ಕ್ರೀಡಾಂಗಣದಲ್ಲಿ ಕುರ್ಚಿಗಳಿಂದ ಪರಸ್ಪರ ಹೊಡೆದಾಡಿಕೊಂಡ ಅಭಿಮಾನಿಗಳು | ವೀಕ್ಷಿಸಿ

ಟಿ-20  ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಓವರ್‌ನಲ್ಲಿ ಸೋತ ನಂತರ ನಿರಾಶೆಗೊಂಡ ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣವನ್ನು ಧ್ವಂಸಗೊಳಿಸಿದರು, ನಂತರ, ಪಾಕಿಸ್ತಾನದ ಅಭಿಮಾನಿಗಳ ಮೇಲೆ ಕುರ್ಚಿಗಳನ್ನು ಎಸೆದ ಘಟನೆ ಬುಧವಾರ ರಾತ್ರಿ ನಡೆದಿದೆ. ನಂತರ ಕ್ರೀಡಾಂಗಣದ ಆವರಣದ ಹೊರಗೆ ಹೊಡೆದಾಡಿಕೊಂಡಿದ್ದಾರೆ.
ಬುಧವಾರದ ಪಂದ್ಯವು ಅಫ್ಘಾನಿಸ್ತಾನವನ್ನು ಪಂದ್ಯಾವಳಿಯಿಂದ ಹೊರಹಾಕಿತು. ಪಂದ್ಯದ 19ನೇ ಓವರ್‌ನಲ್ಲಿ ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಅಫ್ಘಾನಿಸ್ತಾನದ ವೇಗದ ಬೌಲರ್ ಫರೀದ್ ಅಹ್ಮದ್ ಅವರೊಂದಿಗೆ ವಾಗ್ವಾದದಲ್ಲಿ ತೊಡಗಿದ ನಂತರ ಪಂದ್ಯವು ಉದ್ವಿಗ್ನಗೊಂಡಿತು. ಈ ದೃಶ್ಯಗಳು 1983 ರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಕುಖ್ಯಾತ ಡೆನ್ನಿಸ್ ಲಿಲ್ಲಿ-ಜಾವೇದ್ ಮಿಯಾಂದಾದ್ ಜಗಳವನ್ನು ನೆನಪಿಸಿದವು.

ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವು ನಾಟಕೀಯ ಶೈಲಿಯಲ್ಲಿ ಗೆದ್ದ ನಂತರ ಸ್ಟೇಡಿಯಂನಲ್ಲಿ ಸ್ಟ್ಯಾಂಡ್‌ನಲ್ಲಿ ಉದ್ವಿಗ್ನತೆ ಮತ್ತು ಗದ್ದಲ ಹೆಚ್ಚಾಯಿತು. ಅನೇಕ ವೈರಲ್ ವೀಡಿಯೊಗಳಲ್ಲಿ, ಅಫ್ಘಾನಿಸ್ತಾನದ ಅಭಿಮಾನಿಗಳ ಒಂದು ಗುಂಪು ಕ್ರೀಡಾಂಗಣದ ಕುರ್ಚಿಗಳನ್ನು ಕಿತ್ತುಹಾಕುವುದು ಕಂಡುಬಂದಿದೆ. ಕೆಲವೊಮ್ಮೆ ಪಾಕಿಸ್ತಾನದ ಅಭಿಮಾನಿಗಳ ಕಡೆಗೆ ಮತ್ತು ಕೆಲವೊಮ್ಮೆ ಗುರಿಯಿಲ್ಲದೆ ಎಸೆಯುವುದು ಕಂಡುಬಂದಿದೆ. ಜನರು ಸ್ಟ್ಯಾಂಡ್‌ಗಳ ಮೇಲೆ ಕುರ್ಚಿಗಳನ್ನು ಹಾರಿಸುವುದು ಸಹ ಕಂಡುಬಂದಿದೆ.
ಅಲ್ಲದೆ, ಶಾರ್ಜಾ ಕ್ರಿಕೆಟ್ ಮೈದಾನದ ಹೊರಗಿನ ಜನನಿಬಿಡ ರಸ್ತೆಗಳಲ್ಲಿ ಎರಡೂ ಕಡೆಯ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯಗಳ ಕೆಲವು ವೀಡಿಯೊಗಳು ವೈರಲ್‌ ಆಗಿವೆ.

ಪಂದ್ಯದ ಕೊನೆಯ ಓವರ್‌ನಲ್ಲಿ 11 ರನ್ ಬೇಕಾಗಿತ್ತು ಮತ್ತು ಕೇವಲ ಒಂದು ವಿಕೆಟ್ ಕೈಯಲ್ಲಿತ್ತು, 19 ವರ್ಷದ ವೇಗದ ಬೌಲರ್ ಶಾ ಅವರ ಲೋ ಫುಲ್ ಟಾಸ್‌ ಬಾಲ್‌ನಲ್ಲಿ ಸತತ ಸಿಕ್ಸರ್‌ಗಳನ್ನು ಹೊಡೆದು ಪಾಕಿಸ್ತಾನವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಬೌಲರ್‌ಗಳ ಪ್ರಾಬಲ್ಯ ಹೊಂದಿರುವ ಸೂಪರ್ 4 ಪಂದ್ಯದಲ್ಲಿ, ಪಾಕಿಸ್ತಾನವು ತನ್ನ ವೇಗಿಗಳು ಮತ್ತು ಸ್ಪಿನ್ನರ್‌ಗಳ ಮೂಲಕ ಅಫ್ಘಾನಿಸ್ತಾನವನ್ನು 129-6ಕ್ಕೆ ನಿರ್ಬಂಧಿಸಿ ಉತ್ತಮ ಪ್ರದರ್ಶನ ನೀಡಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement