ಬೆಂಗಳೂರು: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯುವ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಬುಧವಾರ ತಡರಾತ್ರಿ ಪ್ರಕಟವಾಗಿದ್ದು, ರಾಜ್ಯದ 72 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಖಲ ಭಾರತ ಮಟ್ಟದ ಟಾಪ್ ಐದು ರ್ಯಾಂಕ್‌ನಲ್ಲಿ ರಾಜ್ಯದ ಇಬ್ಬರು, ಟಾಪ್ 10 ರ್ಯಾಂಕ್‌ನಲ್ಲಿ ಮೂವರು ಮತ್ತು ಟಾಪ್ 50 ರಾರಯಂಕ್‌ನಲ್ಲಿ ಒಂಬತ್ತು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಟಾಪ್ 3ನೇ ರ್ಯಾಂಕ್ ಪಡೆದಿರುವ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಋುಷಿಕೇಶ್ ನಾಗಭೂಷಣ ಗಂಗೋಲೆ ರಾಜ್ಯಕ್ಕೆ ಮೊದಲ ರ್ಯಾಂಕ್, ರಾಷ್ಟ್ರಕ್ಕೆ 4ನೇ ರ್ಯಾಂಕ್ ಪಡೆದಿರುವ ವಿದ್ಯಾರ್ಥಿನಿ ರುಚಾ ಪಾವ್ಶೆ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಎಸ್.ಆರ್. ಕೃಷ್ಣ ರಾಷ್ಟ್ರಕ್ಕೆ 8ನೇ ರ್ಯಾಂಕ್, ಉಡುಪಿಯ ಮಣಿಪಾಲ ಮಾಧವ ಕೃಪಾ ಇಂಗ್ಲೀಷ್ ಪಿಯು ಕಾಲೇಜಿನ ವ್ರಜೇಶ್ ವೀಣಾಧರ್ ಶೆಟ್ಟಿ 13ನೇ ರ್ಯಾಂಕ್, ಶುಭಾ ಕೌಶಿಕ್ 17ನೇ ರ್ಯಾಂಕ್, ಅಂಕುಶ್ ಗೌಡ 18ನೇ ರ್ಯಾಂಕ್, ಮುರುಕಿ ಶ್ರೀ ಬಾರುನ್ 23ನೇ ರ್ಯಾಂಕ್, ಆದಿತ್ಯಾ ಕಾಮತ್ ಅಮ್ಮೆಂಬಳ್ 28ನೇ ರ್ಯಾಂಕ್, ರೋಹಿತ್ ಆರ್.ಜೆ. 42ನೇ ರ್ಯಾಂಕ್ ಪಡೆದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ