ಬೆಂಗಳೂರಿನ ಶಂಕಿತ ಇಬ್ಬರು ಉಗ್ರರ ಬಂಧನ ಪ್ರಕರಣ ಎನ್‌ಐಎಗೆ ವರ್ಗಾವಣೆ

ಬೆಂಗಳೂರು: ತಿಲಕ್‌ ನಗರದಲ್ಲಿ ಬಂಧನಕ್ಕೆ ಒಳಗಾದ ಇಬ್ಬರು ಶಂಕಿತ ಉಗ್ರರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ(NIA) ವರ್ಗಾವಣೆ ಮಾಡಲಾಗಿದೆ.
ಜುಲೈನಲ್ಲಿ ಸಿಸಿಬಿ(CCB) ಪೊಲೀಸರು ಶಂಕೆ ಮೇರೆಗೆ ಇಬ್ಬರು ಡೆಲಿವರಿ ಹುಡುಗರನ್ನು ಬಂಧಿಸಿದ್ದರು. ಬಂಧಿತ ಅಕ್ತರ್‌ ಮತ್ತು ಜುಬಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(UAPA) ಅಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ ಶಂಕಿತರು ಬೇರೆ ಬೇರೆ ರಾಜ್ಯಗಳ ವ್ಯಕ್ತಿಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪ್ರಕರಣ ಸಿಸಿಬಿಯಿಂದ ಈಗ ಎನ್‌ಐಎಗೆ ವರ್ಗಾವಣೆಯಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ನಿಮ್ಮ ಕಾಮೆಂಟ್ ಬರೆಯಿರಿ

advertisement