ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ

ಬೆಂಗಳೂರು: ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ರಾಜ್ಯಕ್ಕೆ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. 51 ವರ್ಷ ಬಳಿಕ ರಾಜ್ಯಾದ್ಯಂತ ಜುಲೈ ಅವಧಿಯಲ್ಲಿ ದಾಖಲೆ ಮಳೆಯಾಗಿದೆ.
1971ರಿಂದ 2021ರ ಜುಲೈನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿದಿಲ್ಲ. 1994ರಲ್ಲಿ ಶೇ.31, 2005ರಲ್ಲಿ ಶೇ.32, 2009ರಲ್ಲಿ ಶೇ.28 ಮತ್ತು 2013ರಲ್ಲಿ ಶೇ.29 ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿತ್ತು. ಆದರೆ, ನಾಲ್ಕು ವರ್ಷಗಳಿಂದ ಜೂನ್ ಅವಧಿಯಲ್ಲಿ ಮಳೆ ಕೊರತೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಯಂತೆ 199 ಮಿಮೀ ಮಳೆಯಾಗಬೇಕಿತ್ತು. ಆದರೆ, 156 ಮಿಮೀ ಬಿದ್ದಿದೆ. ಶೇ. 22 ಮಳೆ ಕೊರತೆ ಉಂಟಾಗಿದೆ. ಈ ವೇಳೆ 90 ತಾಲೂಕುಗಳಿಗೆ ಮಳೆ ಆಭಾವ ಕಾಡಿದೆ. ಜುಲೈನಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 271 ಮಿಮೀ ಮಳೆಯಾಗಬೇಕಿತ್ತು.. ಆದರೆ 383 ಮಿಮೀ ಮಳೆಯಾಗಿ ಶೇ.41 ಅಧಿಕ ಮಳೆ ಬಿದ್ದಿದೆ.

ಆಗಸ್ಟ್‌ನಲ್ಲಿ ವಾಡಿಕೆಯಂತೆ ರಾಜ್ಯದಲ್ಲಿ 220 ಮಿಮೀ ಮಳೆಯಾಗಬೇಖಿತ್ತು. ಆದರೆ 305 ಮಿಮೀ ಬಿದ್ದಿದೆ. ಅಂದರೆ ಶೇ.38 ವಾಡಿಕೆಗಿಂತ ಹೆಚ್ಚು ಮಳೆ ಬಿದ್ದುದೆ. 124 ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಬಿದ್ದಿದೆ.
. ದಕ್ಷಿಣ ಒಳನಾಡಿನಲ್ಲಿ ಜೂನ್‌ನಲ್ಲಿ ಶೇ.83, ಜುಲೈನಲ್ಲಿ ಶೇ.87 ಮತ್ತು ಆಗಸ್ಟ್‌ನಲ್ಲಿ ಶೇ.208 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ಕರಾವಳಿಯಲ್ಲಿ ಜುಲೈನಲ್ಲಿ ವಾಡಿಕೆಯಷ್ಟು ಮತ್ತು ಆಗಸ್ಟ್‌ನಲ್ಲಿ ಶೇ.8 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜೂನ್‌ನಲ್ಲಿ ಮಳೆ ಕೊರತೆ ಕಾಡಿದ್ದ ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿದೆ ಎಂದು ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ರಾಜ್ಯ ಸರ್ಕಾರದ್ದು ; ಡಿಪಿಆರ್‌ ರೂಪಿಸೋದು ಅಂದ್ರೆ ಯೋಜನೆ ಅಂತಿಮ ಎಂದಲ್ಲ : ಕೇಂದ್ರ ಸಚಿವ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement