17 ಕೋಟಿ ರೂ….ಮುಂದುವರಿದ ಎಣಿಕೆ: ಗೇಮಿಂಗ್ ಆ್ಯಪ್ ಹಗರಣದಲ್ಲಿ ಕೋಲ್ಕತ್ತಾದ ಉದ್ಯಮಿಯಿಂದ ಭಾರೀ ಪ್ರಮಾಣದ ನಗದು ವಶಪಡಿಸಿಕೊಂಡ ಇ.ಡಿ.

ಕೋಲ್ಕತ್ತಾ: ಜಾರಿ ನಿರ್ದೇಶನಾಲಯ (ED) ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ವಂಚನೆ ಆರೋಪದ ಪ್ರಕರಣವನ್ನು ತನಿಖೆ ನಡೆಸುತ್ತಿದೆ.
ಇ.ಡಿ. ಅಧಿಕಾರಿಗಳ ತಂಡ, ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಅಮೀರ್ ಖಾನ್ ಅವರ ಮನೆ ಮೇಲೆ ದಾಳಿ ನಡೆಸಿತು. ಇಲ್ಲಿಯವರೆಗೆ 17 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ವಶಪಡಿಸಿಕೊಂಡಿರುವ ಹಣದ ನಿಖರವಾದ ಮೊತ್ತವನ್ನು ಖಚಿತಪಡಿಸಿಕೊಳ್ಳಲು ನಗದು ಎಣಿಕೆ ಯಂತ್ರಗಳನ್ನು ತರಲಾಗಿದೆ. ವಶಪಡಿಸಿಕೊಂಡ ಹಣವನ್ನು ಸಾಗಿಸಲು ಹಲವಾರು ಟ್ರಂಕ್‌ಗಳು ಉದ್ಯಮಿಯ ನಿವಾಸಕ್ಕೆ ಬಂದವು. ಉದ್ಯಮಿಯ ನಿವಾಸದ ಮೇಲೆ ಇ.ಡಿ. ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪಡೆಗಳನ್ನು ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

E-Nuggets ಎಂಬ ಮೊಬೈಲ್ ಗೇಮಿಂಗ್ ಆಪ್ ಬಳಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಆರೋಪಿ ಅಮೀರ್ ಖಾನ್ ಮತ್ತು ಇತರರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರಂಭಿಕ ಅವಧಿಯಲ್ಲಿ, ಬಳಕೆದಾರರಿಗೆ ಕಮಿಷನ್‌ನೊಂದಿಗೆ ಬಹುಮಾನ ನೀಡಲಾಯಿತು ಮತ್ತು ವಾಲೆಟ್‌ನಲ್ಲಿನ ಬ್ಯಾಲೆನ್ಸ್ ಅನ್ನು ತೊಂದರೆಯಿಲ್ಲದೆ ಹಿಂಪಡೆಯಬಹುದು ಎಂದು ಹೇಳಲಾಯಿತು. ಇದು ಬಳಕೆದಾರರಲ್ಲಿ ಆರಂಭಿಕ ವಿಶ್ವಾಸವನ್ನು ಒದಗಿಸಿತು ಮತ್ತು ಹೆಚ್ಚಿನ ಶೇಕಡಾವಾರು ಕಮಿಷನ್‌ಗಾಗಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದರು ಎಂದು ಇ.ಡಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆಪಾದಿತ ವಂಚಕರ ಕಾರ್ಯವೈಖರಿಯನ್ನು ವಿವರಿಸಿದ ಇ.ಡಿ., “ ಸಾರ್ವಜನಿಕರಿಂದ ಸಾಕಷ್ಟು ಹಣ ಸಂಗ್ರಹಿಸಿದ ನಂತರ, ಇದ್ದಕ್ಕಿದ್ದಂತೆ, ಈ ಅಪ್ಲಿಕೇಶನ್‌ ನೆಪ ಹೇಳಿ ನಿಲ್ಲಿಸಲಾಯಿತು, ಅದರ ನಂತರ, ಅಪ್ಲಿಕೇಶನ್ ಸರ್ವರ್‌ಗಳಿಂದ ಅಳಿಸಿಹಾಕಲಾಯಿತು ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

ದಾಳಿ ವೇಳೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಗಾರ್ಡನ್ ರೀಚ್, ಪಾರ್ಕ್ ಸ್ಟ್ರೀಟ್ ಮತ್ತು ಮೊಮಿನ್‌ಪುರ ಪ್ರದೇಶಗಳಂತಹ ಸ್ಥಳಗಳಿಗೆ ಸಿಆರ್‌ಪಿಎಫ್ ಸಿಬ್ಬಂದಿ ಇ.ಡಿ. ತಂಡಗಳ ಬೆಂಗಾವಲಿಗೆ ಹೋಗಿದೆ.
ಇಲ್ಲಿಯವರೆಗೆ ಸುಮಾರು 17 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ನೋಟುಗಳ ಎಣಿಕೆ ಇನ್ನೂ ಪ್ರಗತಿಯಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement