ಕನ್ನಡದ ಖ್ಯಾತ ನಟ ರಮೇಶ ಅರವಿಂದ ಸೇರಿ ಮೂವರು ಸಾಧಕರಿಗೆ ರಾಣಿ ಚೆನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್

ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವ ಬುಧವಾರ(ಸೆ.14) ಮಧ್ಯಾಹ್ನ 12 ಗಂಟೆಗೆ ಸುವರ್ಣಸೌಧದ ಸಭಾಂಗಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಹಾಗೂ 48 ಪಿಹೆಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ವಿಶ್ವವಿದ್ಯಾಲಯದ 43,607 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 11 ಸುವರ್ಣ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ತಿಳಿಸಿದರು.
ನಗರದ ವಾರ್ತಾಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಂಧ್ರಪ್ರದೇಶದ ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತೇಜಸ್ವಿ ವಿ. ಕಟ್ಟಿಮನಿ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಸಹಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಹಾಗೂ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್:
ಸಮಾಜ ಸೇವಾ ಕ್ಷೇತ್ರದ ಕೊಡುಗೆ ಪರಿಗಣಿಸಿ ನಗರಾಭಿವೃದ್ಧಿ ತಜ್ಞ ಹಾಗೂ ಸಮಾಜ ಸೇವಕ ವಿ. ರವಿಚಂದರ್ ಅವರಿಗೆ ‘ಡಾಕ್ಟರ್‌ಆಫ್ ಸೈನ್ಸ್’, ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ಪರಿಗಣಿಸಿ ಖ್ಯಾತ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿಯ ಅಪಾರ ಸೇವೆ ಪರಿಗಣಿಸಿ ಬೀದರದ ಬಸವತತ್ವ ಪ್ರಚಾರಕಿ, ಕಾಯಕ ದಾಸೋಹ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಡಾಕ್ಟರ್‌ಆಫ್ ಲೆಟರ್ಸ್ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಕುಲಪತಿ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ತಿಳಿಸಿದರು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಕ್ಕೆ ಹೆದರಲ್ಲ: ಕೆ.ಎಸ್.ಈಶ್ವರಪ್ಪ

48 ಪಿಎಚ್.ಡಿ ಪದವಿ ಪ್ರದಾನ:
ವಿಶ್ವವಿದ್ಯಾ­ಯದ ವಿವಿಧ ವಿಷಯವಾರು ಅಧ್ಯಯನ ಕೈಗೊಂಡಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಘಟಿಕೋತ್ಸವದಲ್ಲಿ 48 ಪಿಹೆಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ.
11 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ವರ್ಣ ಪದಕ:
ವಿಶ್ವವಿದ್ಯಾಲಯದಿಂದ ಫಸ್ಟ್ ರ‍್ಯಾಂಕ್ ಪಡದುಕೊಂಡ 6 ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಗೂ ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ 4 ವಿದ್ಯಾರ್ಥಿನಿಯರಿಗೆ ಸೇರಿ ಒಟ್ಟು 11 ಸುವರ್ಣ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.
ವಿದ್ಯಾರ್ಥಿನಿಯರೇ ಮೇಲುಗೈ:
ಬ್ಯಾಚುಲರ್ ಆಫ್ ಕಾಮರ್ಸ್ ವಿದ್ಯಾರ್ಥಿನಿ ವಿದ್ಯಾವತಿ ಗುಡೋದಗಿ, ಬ್ಯಾಚುಲರ್ ಆಫ್ ಸೈನ್ಸ್ ವಿದ್ಯಾರ್ಥಿನಿ ದೀಪಿಕಾ ಚೌವ್ಹಾಣ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಕನ್ನಡ ವಿದ್ಯಾರ್ಥಿನಿ ದ್ರಾಕ್ಷಾಯಿಣಿ ವಾಲ್ಮೀಕಿ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಸೋಶಿಯಾ­ಜಿ ವಿದ್ಯಾರ್ಥಿ ತಾತ್ಯಾಸಾಬ್ ಧಾಬಡೆ, ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿನಿ ಗೌರಾ ಅಣೆಪ್ಪನವರ, ಮಾಸ್ಟರ್ ಆಫ್ ಸೈನ್ಸ್ ಇನ್ ಮ್ಯಾಥೆಮ್ಯಾಟಿಕ್ಸ್ ವಿದ್ಯಾರ್ಥಿನಿ ಅನುಜಾ ಪಾಟೀಲ ಸುವರ್ಣ ಪದಕ ಪಡೆದುಕೊಳ್ಳಲಿದ್ದಾರೆ.
ವಿಷಯವಾರು ಅತೀ ಹೆಚ್ಚು ಅಂಕಗಳಿಸಿದ ಸ್ನಾತಕ ವಿದ್ಯಾರ್ಥಿನಿಯರಾದ ರಸಿಕಾ ಮಲೈ (ಇಂಗ್ಲಿಷ್), ಸಂಜಿವೀನಿ ಪಾಟೀಲ( ಕನ್ನಡ), ವರ್ಷಾ ಮರ್ಡಿ (ಸೋಶಿಯಾ­ಜಿ), ಪ್ರೇರಣಾ (ಕಾಮರ್ಸ್) ಕ್ರಮವಾಗಿ ಸುವರ್ಣ ಪದಕಗಳಿಗೆ ಕೊರಳೊಡ್ಡಲಿದ್ದಾರೆ.
163 ವಿದ್ಯಾರ್ಥಿಗಳಿಗೆ ರ‍್ಯಾಂಕ್ ಸರ್ಟಿಫಿಕೇಟ್:
ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಆರ್ಟ್ಸ್, ಕಾಮರ್ಸ್, ಎಜ್ಯುಕೇಶನ್ ಮತ್ತು ಸೈನ್ಸ್ ವಿಭಾಗದ ಒಟ್ಟು 163 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರ‍್ಯಾಂಕ್ ಸರ್ಟಿಫಿಕೇಟ್ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ಪ್ರೊ. ಎಂ. ಹನುಮಂತಪ್ಪ, ಸಿಡಿಸಿ ನಿರ್ದೇಶಕ ಪ್ರೊ. ಗಂಗಾಧರಯ್ಯ, ಪ್ರೆಸ್ ಕಮಿಟಿ ಚೇರಮನ್ ಪ್ರೊ. ಸಿ.ಎನ್. ವಾಗ್ಮಾರೆ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement