ವ್ಯಕ್ತಿಯೊಬ್ಬನನ್ನು ಹಿಡಿಯಲು ಬೆಕ್ಕಿನಂತೆ ಮರ ಏರಿದ ಸಿಂಹಿಣಿ, ಮುಂದೇನಾಯ್ತು..? :ವೀಕ್ಷಿಸಿ

ಕಾಡು ಅಥವಾ ಬಯಲಿನಲ್ಲಿ ಪ್ರಾಣೀಗಳನ್ನು ಬೇಟೆಯಾಡುವ ಮತ್ತು ತಿನ್ನುವ ಕಾಡು ಪ್ರಾಣಿಗಳ ಅನೇಕ ವೀಡಿಯೊಗಳನ್ನು ನೋಡುತ್ತಿರುತ್ತೇವೆ. ಆದರೆ ಪಾರ್ಟಿಯಲ್ಲಿ ಸಿಂಹಿಣಿಯೊಂದು ಮನುಷ್ಯನನ್ನು ಅಟ್ಟಿಸಿಕೊಂಡು ಹೋಗುವುದನ್ನು ನೋಡಿದರೆ ಏನನಿಸುತ್ತದೆ? ನಂತರ ಮರ ಏರಿದ ವ್ಯಕ್ತಿಯನ್ನು ಹಿಡಿಯಲು ಮರ ಏರಿದರೆ..?
ಇಂತಹದ್ದೇ ಹಳೆಯ ವೀಡಿಯೊವೊಂದು ಈಗ ಮತ್ತೆ ವೈರಲ್‌ ಆಗಿದೆ. ಇದನ್ನು ನೋಡಿದ ನಂತರ ನಿಸ್ಸಂದೇಹವಾಗಿ ನಡುಕ ಬರುವಂತಿದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯಗಳಿವೆ. ಸಿಂಹಿಣಿಯು ಅರಣ್ಯದಿಂದ ಹೊರಬಂದ ನಂತರ ಅಜ್ಞಾತ ಸ್ಥಳದಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟ ಸಭೆಯನ್ನು ಪ್ರವೇಶಿಸುವುದನ್ನು ಕ್ಲಿಪ್ ತೋರಿಸುತ್ತದೆ. ಸಿಂಹಿಣಿಯು ಸಭೆಯೊಳಗೆ ಬರುವುದು ಮಾತ್ರವಲ್ಲದೆ ಅತಿಥಿಗಳಲ್ಲಿ ಒಬ್ಬರನ್ನು ಗುರಿಯಾಗಿಸುತ್ತದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ವೀಡಿಯೊ ಮುಂದುವರೆದಂತೆ, ಸಿಂಹಿಣೀಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಮರ ಏರುತ್ತಿರುವುದನ್ನು ಕಾಣಬಹುದು. ಆದರೂ ಸಿಂಹಿಣಿ ಆ ವ್ಯಕ್ತಿಯನ್ನು ಬಿಡುವುದಿಲ್ಲ. ಆತನನ್ನು ಹಿಂಬಾಲಿಸುತ್ತದೆ. ಮತ್ತು ಸಾಮಾನ್ಯವಾಗಿ ಮರ ಏರದ ಸಿಂಹಿಣಿ ಆ ವ್ಯಕ್ತಿಯನ್ನು ಬೆನ್ನಟ್ಟಿ ಮರವನ್ನೂ ಏರುತ್ತದೆ. ಮರದ ತುದಿಗೆ ತಲುಪಿದ್ದ ವ್ಯಕ್ತಿ ತನ್ನ ಹಿಂದೆಯೇ ಸಿಂಹಿಣಿ ಮರ ಏರಿದ್ದನ್ನು ನೋಡಿ ಅದರಿಂದ ತಪ್ಪಿಸಿಕೊಳ್ಳಲು ಸಿಂಹಿಣಿಗೆ ಕಾಲಿನಿಂದ ಒದೆಯಲು ಪ್ರಯತ್ನಿಸುತ್ತಾನೆ. ಆದರೆ ಅದು ಮರದ ಹಿಡಿದುಕೊಂಡೇ ಇರುತ್ತದೆ. ಅಷ್ಟಕ್ಕೇ ವೀಡಿಯೊ ಕೊನೆಗೊಳ್ಳುತ್ತದೆ.

ಮುಂದೇನಾಯಿತು ಎಂಬುದು ಗೊತ್ತಾಗುವುದಿಲ್ಲ. ಆದರೆ ಎಲ್ಲರೂ ಸಿಂಹಿಣಿ ಬೆಕ್ಕಿನಂತೆ ಮರ ಏರಿದ್ದಕ್ಕೆ ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಲವರು ಆ ವ್ಯಕ್ತಿಗೆ ಏನಾದರೂ ತೊಂದರೆಯಾಗಿದೆಯೇ ಎಂದು ಕೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement