ವಾಹನ ಅಟ್ಟಿಸಿಕೊಂಡು ಬಂದ ಆನೆಯಿಂದ ಪಾರಾಗಲು ಬಂಡೆ ಏರಿ ತಪ್ಪಿಸಿಕೊಂಡ ಮಾಜಿ ಸಿಎಂ | ವೀಕ್ಷಿಸಿ

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಅವರ ಬೆಂಗಾವಲು ಕೋಟ್‌ದ್ವಾರ-ದುಗಡ್ಡಾ ರಸ್ತೆಯಲ್ಲಿ ಆನೆಯೊಂದು ಅಡ್ಡಹಾಕಿದ ಪರಿಣಾಮ ತಮ್ಮ ಕಡೆಗೆ ಬರುವ ಆನೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಅವರು ವಾಹನ ಬಿಟ್ಟು ದೊಡ್ಡದಾದ ಬಂಡೆ ಏರಿ ತಪ್ಪಿಸಿಕೊಳ್ಳಬೇಕಾಯಿತು. ಸೆಪ್ಟೆಂಬರ್ 14ರ ಸಂಜೆ ಈ ಘಟನೆ ನಡೆದಿದೆ.
ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ವೀಡಿಯೊದಲ್ಲಿ, ಮಾಜಿ ಮುಖ್ಯಮಂತ್ರಿ ತಮ್ಮ ಬೆಂಗಾವಲು ಸಿಬ್ಬಂದಿಯೊಂದಿಗೆ ಬಂಡೆಯನ್ನು ಹತ್ತುತ್ತಿರುವುದನ್ನು ಕಾಣಬಹುದು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ತುಟ್ ಗದ್ರೆ ಬಳಿ ಕಾಡಿನಿಂದ ಆನೆಯೊಂದು ರಸ್ತೆಗೆ ಬಂದಿತ್ತು. ರಾವತ್ ಗರ್ವಾಲ್ ಪ್ರವಾಸದಿಂದ ಕೋಟ್‌ದ್ವಾರಕ್ಕೆ ಹಿಂತಿರುಗುತ್ತಿದ್ದರು. ಆ ವೇಳೆ ದೊಡ್ಡ ಕಾಡಾನೆಯೊಂದು ಸಿದ್ಧಬಲಿ ದೇವಸ್ಥಾನದ ಬಳಿ ಅವರ ಬೆಂಗಾವಲು ವಾಹನಕ್ಕೆ ಅಡ್ಡವಾಯಿತು.
ಆನೆ ಹೊರಡಬಹುದು, ಅದು ಹೋದ ನಂತರ ಬೆಂಗಾವಲು ಪಡೆ ಮುಂದೆ ಸಾಗಬಹುದು ಎಂದು ಎಲ್ಲರೂ ಕಾಯುತ್ತಿದ್ದರು. ಆದಾಗ್ಯೂ, ಆನೆಯು ಬೆಂಗಾವಲು ಪಡೆಯನ್ನು ಅಟ್ಟಿಸಿಕೊಂಡು ಬರಲು ಪ್ರಾರಂಭಿಸಿತು.
ರಾವತ್ ಅವರನ್ನು ಭದ್ರತಾ ಸಿಬ್ಬಂದಿ ಕಾರಿನಿಂದ ಕೆಳಗಿಳಿಸಿ ಹತ್ತಿರದ ಪರ್ವತ ತೊರೆಯ ಕಡೆಗೆ ಕರೆದೊಯ್ದರು, ಆದರೆ ಆನೆ ಅವರ ಹಿಂದೆ ಓಡಿಬಂತು. ನಂತರ ಆನೆ ಸೊಂಡಿಲಿನಲ್ಲಿ ನೀರು ತುಂಬಿ ಅವರತ್ತ ಹಾರಿಸಿದೆ.

ಓದಿರಿ :-   ಉತ್ತರಾಖಂಡದ ದಂಡ-2 ಶಿಖರದಲ್ಲಿ ಭಾರೀ ಹಿಮಕುಸಿತ : 10 ಮಂದಿ ಸಾವು, 18 ಮಂದಿ ನಾಪತ್ತೆ

ಸ್ವಲ್ಪ ಸಮಯ ಆನೆ ಶಾಂತವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ರಾವತ್‌ ಸೇರಿದಂತೆ ಎಲ್ಲರೂ ಬಂಡೆಯಿಂದ ಹಾರಿ ಕೆಳಗೆ ಓಡಿದರು. ತಕ್ಷಣವೇ ತಮ್ಮ ವಾಹನಗಳಲ್ಲಿ ಅಲ್ಲಿಂದ ಹೊರಟರು. 61 ವರ್ಷದ ರಾವತ್ ಅವರು 2017 ರಿಂದ 2021 ರವರೆಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು.
ಆನೆಗಳು ಪದೇ ಪದೇ ರಸ್ತೆಗೆ ಬರುತ್ತಿರುವ ಪ್ರದೇಶದಿಂದ ವರದಿಯಾಗುತ್ತಿರುವುದು ಇದೇ ಮೊದಲಲ್ಲ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement