ನವದೆಹಲಿ: ಪುಲ್ವಾಮಾ ದಾಳಿ ನಂತರ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ದಾಳಿಯಲ್ಲಿ ಶತ್ರು ಪಡೆಗಳ ಮೇಲೆ ಶೌರ್ಯ ಮೆರೆದಿದ್ದ ಮಾಜಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (ಪ್ರಸ್ತುತ ಗ್ರೂಪ್ ಕ್ಯಾಪ್ಟನ್) ಅವರು ಬಳಸಿದ್ದ ಮಿಗ್-21 ಬೈಸನ್ ಫೈಟರ್ ಜೆಟ್ ಇದೇ ಸೆಪ್ಟೆಂಬರ್ 30 ರಂದು ಭಾರತೀಯ ವಾಯುಪಡೆಯಿಂದ ನಿವೃತ್ತಿಯಾಗಲಿದೆ.
ಮಿಗ್-21 ಬೈಸನ್ 1960 ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಆದರೆ 1980ರ ದಶಕಕದಿಂದ 400ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. 200ಕ್ಕೂ ಹೆಚ್ಚು ಪೈಲಟ್‌ಗಳು (Pilots) ಮತ್ತು 60 ನಾಗರಿಕರನ್ನು ಬಲಿ ತೆಗೆದುಕೊಂಡಿವೆ. ಭಾರತೀಯ ವಾಯುಪಡೆಯು ಸದ್ಯ 550 ಫೈಟರ್ ಜೆಟ್‌ಗಳ (Fighter Jets) ಸಾಮರ್ಥ್ಯಕ್ಕೆ ಇಳಿದಿದ್ದು, ಇನ್ನೂ 200 ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿದೆ.
ಸದ್ಯ ಅಭಿನಂದನ್ ವರ್ಧಮಾನ್ ಅವರು ಬಳಸಿದ್ದ ಮಿಗ್-21 ಫೈಟರ್ ಜೆಟ್ (ಶ್ರೀನಗರ ಮೂಲದ ನಂ.51 ಸ್ಕ್ವಾಡ್ರನ್)ಅನ್ನು ಸೆಪ್ಟೆಂಬರ್ 30 ರಂದು ಸೇನೆಯಿಂದ ನಿವೃತ್ತಿಗೊಳಿಸಲಿದ್ದು, ಮಿಗ್-21 ಅನ್ನು 2025ರ ವೇಳೆಗೆ ಹಂತಹಂತವಾಗಿ ಬದಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 1980 ದಶಕದಲ್ಲಿ ಸೇನೆಗೆ ಸೇರ್ಪಡೆಗೊಂಡ ಜಾಗ್ವಾರ್, ಮಿಗ್-29 ಹಾಗೂ ಮಿರಾಜ್ ನಂತಹ ಯುದ್ಧ ವಿಮಾನಗಳೂ ಹಳೆಯದ್ದಾಗುತ್ತಿದ್ದು, ಅವುಗಳು ಸಹ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
2019ರ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರವಾಗಿ ಏರ್‌ಸ್ಟ್ರೈಕ್ ನಡೆಸಿ ಭಾರತ ಪ್ರತಿಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಪ್ರದೇಶದ ಬಾಲಾಕೋಟ್‌ನಲ್ಲಿ ಜೈಷೆ ಮೊಹಮದ್ ಸಂಘಟನೆಗಳ ಉಗ್ರರ ಶಿಬಿರಗಳ ಮೇಲೆ 2019 ರ ಫೆಬ್ರವರಿ 26 ರಂದು ಭಾರತ ವೈಮಾನಿಕ ದಾಳಿ ನಡೆಸಿತ್ತು.
ಫೆ.26ರ ನಸುಕಿನ ಜಾವ 3.30 ರಿಂದ 3.55ರ ನಡುವೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್ ಉಗ್ರರ ಶಿಬಿರಗಳ ಮೇಲೆ 12 ಮಿರಾಜ್-2000 ಯುದ್ಧ ವಿಮಾನಗಳು ದಾಳಿ ನಡೆಸಿದ್ದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿಮೀ ಒಳನುಗ್ಗಿ ಭಾರತೀಯ ವಾಯುಪಡೆ ಈ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಪಾಕ್ ಕೂಡ ಪ್ರತಿ ದಾಳಿ ಮಾಡಿತ್ತು. ಪಾಕ್‌ನ ಪ್ರತಿದಾಳಿಯ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ತಮ್ಮ ಮಿಗ್-21 ರಿಂದ ಪಾಕಿಸ್ತಾನದ ಎಫ್-16 ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದರು. ಅದಾದ ಬಳಿಕ ಪಾಕಿಸ್ತಾನ ಸೇನೆ ಅಭಿನಂದನ್ ಅವರನ್ನು ಬಂಧಿಸಿ ಮಾರ್ಚ್ 1ರ ಮಧ್ಯರಾತ್ರಿ ಬಿಡುಗಡೆ ಮಾಡಿತ್ತು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ