ಕೇಸರಿ ಪಕ್ಷದಲ್ಲಿ ತಮ್ಮ ಪಕ್ಷ ವಿಲೀನಗೊಳಿಸಿದ ನಂತರ ಬಿಜೆಪಿಗೆ ಸೇರ್ಪಡೆಯಾದ ಕ್ಯಾಪ್ಟನ್‌ ಅಮರಿಂದರ್ ಸಿಂಗ್

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ (PLC) ಅನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ನಂತರ ಬಿಜೆಪಿಗೆ ಸೇರಿದ್ದಾರೆ.
ಈ ವರ್ಷದ ಆರಂಭದಲ್ಲಿ ರಾಜ್ಯ ಚುನಾವಣೆಗೆ ಮುನ್ನ ಪಕ್ಷದ ಉನ್ನತ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್‌ ಪಕ್ಷವನ್ನು ಪಕ್ಷವನ್ನು ತೊರೆದಿದ್ದರು. ಹಿರಿಯ ಕಾಂಗ್ರೆಸ್ ನಾಯಕ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಕಾನೂನು ಸಚಿವ ಕಿರಣ್ ರಿಜಿಜು ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಕ್ಯಾಪ್ಟನ್ ಯಾವಾಗಲೂ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ನೋಡುತ್ತ ಹಾಗೂ ಪ್ರತಿಪಾದಿಸುತ್ತ ಬಂದಿದ್ದಾರೆ. ಇಂದು ಅವರ ಪಂಜಾಬ್ ಲೋಕಸಭೆ ಕಾಂಗ್ರೆಸ್ ಬಿಜೆಪಿಯೊಂದಿಗೆ ವಿಲೀನಗೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರನ್ನು ಮತ್ತು ಅವರ ಅನುಯಾಯಿಗಳನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಪಂಜಾಬ್ ಗಡಿ ರಾಜ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಗಡಿ ರಾಜ್ಯಗಳು ರಾಷ್ಟ್ರದ ಭದ್ರತೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಪಂಜಾಬ್‌ನಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ” ಎಂದು ತೋಮರ್ ಹೇಳಿದರು ಹಾಗೂ ಹೆವಿವೇಯ್ಟ್ ನಾಯಕನನ್ನು ಬಿಜೆಪಿಗೆ ಸ್ವಾಗತಿಸಿದರು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಬಿಜೆಪಿ ಯಾವಾಗಲೂ ಪಕ್ಷಕ್ಕಿಂತ ದೇಶವನ್ನು ಮೇಲೆ ಇರಿಸುವ ಪಕ್ಷವಾಗಿದೆ. ಕ್ಯಾಪ್ಟನ್ ಇದನ್ನು ತಮ್ಮ ಜೀವನದುದ್ದಕ್ಕೂ ಅನುಸರಿಸಿದರು. ಅದಕ್ಕಾಗಿಯೇ ಅವರು ನಮ್ಮೊಂದಿಗೆ ಬಂದಿದ್ದಾರೆ” ಎಂದು ಅವರು ಹೇಳಿದರು.
ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇತ್ತೀಚೆಗೆ ಲಂಡನ್‌ನಿಂದ ಹಿಂದಿರುಗಿದ ಅಮರಿಂದರ್‌ ಸಿಂಗ್, ಕಳೆದ ಎರಡು ವಾರಗಳಲ್ಲಿ ಹಲವಾರು ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.
ಸೆಪ್ಟೆಂಬರ್ 12ರಂದು ಅಮಿತ್‌ ಶಾ ಅವರೊಂದಿಗಿನ ಭೇಟಿಯ ನಂತರ, ಕ್ಯಾಪ್ಟನ್ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳು, ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ-ಭಯೋತ್ಪಾದನೆಯ ಪ್ರಕರಣಗಳು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಯ ಭವಿಷ್ಯದ ಮಾರ್ಗಸೂಚಿಗಳ ಕುರಿತು ತಮ್ಮ ಅತ್ಯಂತ ಉತ್ಪಾದಕ ಚರ್ಚೆಯ ಕುರಿತು ಮಾತನಾಡಿದರು.

ಪಂಜಾಬ್ ಬಿಜೆಪಿಯ ಹಿರಿಯ ನಾಯಕ ಹರ್ಜಿತ್ ಸಿಂಗ್ ಗ್ರೆವಾಲ್ ಪ್ರಕಾರ, ಲಂಡನ್‌ಗೆ ತೆರಳುವ ಮೊದಲು ಸಿಂಗ್ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಉದ್ದೇಶವನ್ನು ತಿಳಿಸಿದ್ದರು. ಮಾಜಿ ಮುಖ್ಯಮಂತ್ರಿ ಲಂಡನ್‌ನಿಂದ ಹಿಂದಿರುಗಿದ ನಂತರ ವಿಲೀನವನ್ನು ಘೋಷಿಸಲಿದ್ದಾರೆ ಎಂದು ಗ್ರೆವಾಲ್ ಜುಲೈನಲ್ಲಿ ಹೇಳಿದ್ದರು.
ಪಂಜಾಬ್‌ನಲ್ಲಿ ಕಾಂಗ್ರೆಸ್
ಫೆಬ್ರವರಿಯಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಆಮ್ ಆದ್ಮಿ ಪಕ್ಷ (ಎಎಪಿ) 117 ವಿಧಾನಸಭಾ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಅನ್ನು ಕೇವಲ 18 ಸ್ಥಾನಗಳಿಗೆ ಇಳಿಸಿತು. ಕ್ಯಾಪ್ಟನ್ ಸಿಂಗ್ ಅವರ ಬದಲಿ ಚರಂಜಿತ್ ಸಿಂಗ್ ಚನ್ನಿ ಅವರು ಸ್ಪರ್ಧಿಸಿದ ಎರಡೂ ಸ್ಥಾನಗಳಲ್ಲಿ ಸೋತರು.
ಪಿಎಲ್‌ಸಿಯು ಬಿಜೆಪಿ ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ (ಸಂಯುಕ್ತ್) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದೆ. ಆದಾಗ್ಯೂ, ಅದರ ಯಾವುದೇ ಅಭ್ಯರ್ಥಿಗಳು ಗೆಲುವು ಸಾಧಿಸಲಿಲ್ಲ – ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ತವರು ಪ್ರದೇಶವಾದ ಪಟಿಯಾಲ ಅರ್ಬನ್‌ನಲ್ಲಿ AAP ಅಭ್ಯರ್ಥಿಗೆ 19,873 ಮತಗಳ ಅಂತರದಿಂದ ಸೋತರು. ಅತ್ಯಂತ ಆಘಾತಕಾರಿಯಾಗಿದೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement