ಬ್ರಿಟನ್‌ ರಾಣಿಯ ಅಂತ್ಯಕ್ರಿಯೆಯ ಮೊದಲು ಲಂಡನ್‌ನಲ್ಲಿ ಕಿಂಗ್ ಚಾರ್ಲ್ಸ್ III ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬಂಕಿಂಗ್‌ಹ್ಯಾಮ್: ಸೆಪ್ಟೆಂಬರ್ 8 ರಂದು ನಿಧನರಾದ ಬ್ರಿಟನ್‌ ರಾಣಿ ಕ್ವೀನ್ ಎಲಿಜಬೆತ್ ಅಂತ್ಯಸಂಸ್ಕಾರ ಇಂದು, ಸೋಮವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲ ದೇಶಗಳ ಒಟ್ಟು 500ಕ್ಕೂ ಹೆಚ್ಚು ಗಣ್ಯರು ಬ್ರಿಟನ್ ತಲುಪಿದ್ದಾರೆ.
ಭಾರತವನ್ನು ಪ್ರತಿನಿಧಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಬ್ರಿಟನ್ ರಾಜ ಚಾರ್ಲ್ಸ್‌ III ಅವರನ್ನು ಭಾನುವಾರ ಭೇಟಿ ಮಾಡಿದ್ದಾರೆ. ಬಂಕಿಂಗ್‌ ಹ್ಯಾಮ್ ಪ್ಯಾಲೇಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮರ್ಮು ಅವರು ಬ್ರಿಟನ್ ರಾಜ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿದರು.
ಇದೇ ವೇಳೆ ರಾಷ್ಟ್ರಪತಿ ಮರ್ಮು ಅವರು, ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆ ಬಳಿಯ ಲ್ಯಾಂಕಾಸ್ಟರ್ ಹೌಸ್‌ನಲ್ಲಿ ರಾಣಿ ಎಲಿಜಬೆತ್ II ಗೌರವಾರ್ಥವಾಗಿ ಅವರ ನೆನಪಿನ ಸಂತಾಪ ಪುಸ್ತಕದಲ್ಲಿ ರಾಷ್ಟ್ರಪತಿ ಮರ್ಮು ಅವರು ಸಹಿ ಹಾಕಿದ್ದಾರೆ ಎಂದು ರಾಷ್ಟ್ರಪತಿ ಭವನ ಟ್ವಿಟ್ ಮಾಡಿದೆ. ಇದರ ಜೊತೆಗೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಇಟ್ಟಿರುವ ರಾಣಿ ಎಲಿಜಬೆತ್ II ಅವರ ಪಾರ್ಥಿವ ಶರೀರಕ್ಕೆ ದ್ರೌಪದಿ ಅಂತಿಮ ನಮನ ಸಲ್ಲಿಸಿದರು.

ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟಪತಿಗಳು ಸೆಪ್ಟೆಂಬರ್ 17 ರಿಂದ 19 ರವರೆಗೆ ಬ್ರಿಟನ್‌ ಅಧಿಕೃತ ಪ್ರವಾಸದಲ್ಲಿದ್ದಾರೆ. ಇದಕ್ಕಾಗಿ ಅವರು ಶನಿವಾರ ಲಂಡನ್‌ನ ಗಾಟ್ವಿಕ್ ಏರ್‌ಪೋರ್ಟ್‌ಗೆ ಬಂದಿಳಿದಿದ್ದರು.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

ಅಂತ್ಯಕ್ರಿಯೆಯಲ್ಲಿ ವಿಶ್ವ ನಾಯಕರು, ರಾಜವಂಶಸ್ಥರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಸೋಮವಾರ ನಡೆಯಲಿರುವ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಗಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಲಂಡನ್‌ಗೆ ಆಗಮಿಸಿದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಲಿಯ ಅಧ್ಯಕ್ಷ ಸರ್ಗಿಯೋ ಮ್ಯಾಟರೆಲ್ಲಾ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್, ವೈಸ್ ಚೀನಾದ ಅಧ್ಯಕ್ಷ ವಾಂಗ್ ಕಿಶನ್ ಮತ್ತು ನ್ಯಾಟೋದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಇತರರು ಆಗಮಿಸಿದ್ದಾರೆ.

2.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement