ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ವಾರ್ಷಿಕ 1.5 ಕೋಟಿ ರೂ. ಪ್ರೀಮಿಯಂ ಪಾವತಿಸುವ ಒಟ್ಟು 31 ಜೀವವಿಮೆ ಪಾಲಿಸಿಗಳನ್ನು ಹೊಂದಿದ್ದಳು ಎಂಬ ಅಚ್ಚರಿಯ ಸಂಗತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಹಿರಂಗಪಡಿಸಿದೆ. ಅಲ್ಲದೆ ಈ ಎಲ್ಲ ಪಾಲಿಸಿಗಳಿಗೆ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ವಾರಸುದಾರರಾಗಿದ್ದಾರೆ. ಅಲ್ಲದೆ ಪಾರ್ಥ ಚಟರ್ಜಿಯೇ ತನ್ನ ವಿವಿಧ ಬ್ಯಾಂಕ್ ಖಾತೆಗಳಿಂದ ಈ ಪಾಲಿಸಿಗಳಿಗೆ ಪ್ರೀಮಿಯಂ ಅನ್ನು ಪಾರ್ಥ ಷಟರ್ಜಿ ಅವರೇ ಪಾವತಿಸಿದ್ದಾರೆ ಎಂದು ಇ.ಡಿ. ಹೇಳಿದೆ.
ಇ.ಡಿ.ದಾಳಿ ವೇಳೆ ಅರ್ಪಿತಾಳ ಮನೆಯಲ್ಲಿ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎನ್ನಲಾದ ಸುಮಾರು 50 ಕೋಟಿ ರೂ.ಗಳ ನಗದು ಪತ್ತೆಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಇ.ಡಿ. ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ.
ಅದರಲ್ಲಿ ಅರ್ಪಿತಾ ಮುಖರ್ಜಿಯ ಜೀವವಿಮೆ ಪಾಲಿಸಿಗಳ ಬಗ್ಗೆ ಹೇಳಲಾಗಿದೆ. ಪಾಲಿಸಿಯಲ್ಲಿ ಪಾರ್ಥ ಚಟರ್ಜಿ ಈಕೆಯ ಅಂಕಲ್ ಎಂದು ನಮೂದಿಸಲಾಗಿದೆ. ಇದು ಅರ್ಪಿತಾ ಮುಖರ್ಜಿ ಮತ್ತು ಪಾರ್ಥ ಚಟರ್ಜಿ ನಡುವೆ ಇರುವ ಅನ್ಯೋನ್ಯತೆ ಬಗ್ಗೆ ಸಾಬೀತುಪಡಿಸಲು ಇರುವ ಪ್ರಮುಖ ಸಾಕ್ಷ್ಯ ಎಂದು ಇ.ಡಿ. ಹೇಳಿದೆ. ಕೇಂದ್ರೀಯ ಏಜೆನ್ಸಿ ವಸೂಲಿ ಮಾಡಿದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ದಾಖಲೆಗಳ ಪ್ರಕಾರ, ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವರ ವಿವಿಧ ಬ್ಯಾಂಕ್ ಖಾತೆಗಳಿಂದ ಇಷ್ಟು ದೊಡ್ಡ ಪ್ರೀಮಿಯಂ ಪಾವತಿಸಲಾಗಿದೆ ಎಂಬುದು ಹೆಚ್ಚು ಕುತೂಹಲಕಾರಿಯಾಗಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಅಲ್ಲದೆ, ಅರ್ಪಿತಾ ಮುಖರ್ಜಿ ಮಗುವೊಂದನ್ನು ದತ್ತು ಪಡೆಯಲು ಬಯಸಿದ್ದರು ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. ಚಟರ್ಜಿ ಅವರು ತಮ್ಮ ಕುಟುಂಬದ ಸ್ನೇಹಿತರಾಗಿ ನೀಡಲಾದ ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ ಸಹಿ ಹಾಕಿದ್ದರು ಎಂದು ಅದು ಹೇಳಿದೆ.
ದತ್ತು ಸ್ವೀಕಾರದ ದಾಖಲೆಗಳನ್ನು ಅವರಿಗೆ ತೋರಿಸಿದಾಗ, ಪಾರ್ಥ ಚಟರ್ಜಿ ತಾನು ಸಾರ್ವಜನಿಕ ಪ್ರತಿನಿಧಿಯಾಗಿರುವುದರಿಂದ, ಅಂತಹ ಶಿಫಾರಸು ಪತ್ರಗಳಿಗಾಗಿ ಅನೇಕ ಜನರು ತಮ್ಮ ಬಳಿಗೆ ಬರುತ್ತಾರೆ ಎಂದು ಹೇಳಿದರು ಎಂದು ಅದು ತಿಳಿಸಿದೆ.
ಚಾರ್ಜ್‌ಶೀಟ್‌ನಲ್ಲಿ ಇಬ್ಬರ ಮನೆಗಳಲ್ಲಿ ನಡೆಸಿದ ಶೋಧದ ವಿವರಗಳು ಮತ್ತು ಪತ್ತೆಯಾದ ಎಲ್ಲಾ ದಾಖಲೆಗಳು, ನಗದು ಮತ್ತು ವಸ್ತುಗಳ ವಿವರಗಳಿವೆ.
ಕೋಲ್ಕತ್ತಾದ ಅರ್ಪಿತಾ ಅವರ ಮನೆಯಿಂದ ಆರ್ಥಿಕ ತನಿಖಾ ಸಂಸ್ಥೆಯಿಂದ ಭಾರೀ ಪ್ರಮಾಣದ ನಗದು – ಕೋಟಿಗಳ ಮೊತ್ತದ ಹಣವನ್ನು ವಶಪಡಿಸಿಕೊಂಡ ನಂತರ ಚಟರ್ಜಿ ಮತ್ತು ಮುಖರ್ಜಿ ಇಬ್ಬರೂ ಜೈಲಿನಲ್ಲಿದ್ದಾರೆ. ಅವರನ್ನು ಬಂಧಿಸಿದಾಗಿನಿಂದ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಸಂಸ್ಥೆಯು ಅವರನ್ನು ನಿರಂತರವಾಗಿ ಪ್ರಶ್ನಿಸುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ