ಟಿವಿ ಚಾನೆಲ್‌ಗಳಿಂದ ದ್ವೇಷ ಭಾಷಣ ನಿಭಾವಣೆ: ಸುಪ್ರೀಂಕೋರ್ಟ್ ಅತೃಪ್ತಿ

ನವದೆಹಲಿ: ದೇಶದ ಮುಖ್ಯವಾಹಿನಿಯ ಟಿವಿ ಸುದ್ದಿ ವಾಹಿನಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವು ಆಗಾಗ್ಗೆ ದ್ವೇಷ ಭಾಷಣಕ್ಕೆ ಅವಕಾಶ ಕಲ್ಪಿಸಿ ಬಳಿಕ ಶಿಕ್ಷೆ, ನಿರ್ಬಂಧಗಳಿಲ್ಲದೆ ತಪ್ಪಿಸಿಕೊಳ್ಳುತ್ತವೆ ಎಂದು ಹೇಳಿದೆ.
ಟಿವಿಗಳಲ್ಲಿ ನಿರೂಪಕರ ಪಾತ್ರ ಬಹಳ ಮುಖ್ಯ. ಮುಖ್ಯವಾಹಿನಿಯ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣಗಳು ಅನಿಯಂತ್ರಿತವಾಗಿವೆ. ದ್ವೇಷ ಭಾಷಣ ಪ್ರಸಾರವಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವಾಕ್ ಸ್ವಾತಂತ್ರ್ಯ ಮುಖ್ಯವಾದರೂ, ಟಿವಿಯಲ್ಲಿ ದ್ವೇಷದ ಭಾಷಣಕ್ಕೆ ಅನುಮತಿಸಲಾಗುವುದು. ಇಂಥದ್ದೇ ಪ್ರಕರಣವೊಂದರಲ್ಲಿ ಇಂಗ್ಲೆಂಡ್‌ನಲ್ಲಿ ಟಿವಿ ವಾಹಿನಿಯೊಂದಕ್ಕೆ ಹೇಗೆ ಭಾರಿ ದಂಡ ವಿಧಿಸಲಾಗಿದೆ. ನಮ್ಮಲ್ಲಿ ಅದು ಇಲ್ಲ. ದ್ವೇಷಭಾಷಣಗಳು ಪ್ರಸಾರವಾಗದಂತೆ ತಡೆಯಬೇಕು.

ದ್ವೇಷ ಭಾಷಣ ಪ್ರಸಾರಕ್ಕೆ ಅನುಮತಿಸಲಾಗದು. (ಮೌಖಿಕವಾಗಿ ಸೂಚಿಸುತ್ತಾ) ಸರ್ಕಾರ ಯಾಕೆ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದೆ ಎಂದು ವರದಿ ತಿಳಿಸಿದೆ.
ಶಕ್ತಿ ವಾಹಿನಿ ಮತ್ತು ತೆಹಸೀನ್ ಪೂನವಾಲಾ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾಗ ತಾನು ದ್ವೇಷದ ಭಾಷಣ ತಡೆಗಟ್ಟುವ ನಿಟ್ಟಿನಲ್ಲಿ ತಾನು ಹೊರಡಿಸಿದ್ದ ಸಾಮಾನ್ಯ ನಿರ್ದೇಶನಗಳನ್ನು ಸರ್ಕಾರವು ಪಾಲಿಸಿದೆಯೇ ಎಂಬ ಕುರಿತು ವಿವರವಾದ ಪಟ್ಟಿ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ದ್ವೇಷದ ಭಾಷಣದಿಂದ ರಾಜಕಾರಣಿಗಳು ಹೆಚ್ಚು ಲಾಭ ಪಡೆಯುತ್ತಿದ್ದು ಟಿವಿ ಚಾನೆಲ್‌ಗಳು ಅವರಿಗೆ ವೇದಿಕೆ ಕಲ್ಪಿಸುತ್ತಿವೆ ಎಂದು ನ್ಯಾಯಾಲಯ ಹೇಳಿದೆ.
ಹಿರಿಯ ವಕೀಲ ಸಂಜಯ್ ಹೆಗ್ಡೆ, ಅರ್ಜಿದಾರರಲ್ಲಿ ಒಬ್ಬರಾದ ಹಿರಿಯ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ವಿಚಾರಣೆ ವೇಳೆ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು 14 ರಾಜ್ಯಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ತಿಳಿಸಿದರು. ಉಳಿದ ರಾಜ್ಯಗಳ ಮಾಹಿತಿ ಸಂಗಹ್ರಹಿಸಿ ಪ್ರತಿ-ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ ನವೆಂಬರ್ 23 ಕ್ಕೆ ಪ್ರಕರಣವನ್ನು ಮುಂದೂಡಿತು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement